ಅಗತ್ಯ ಆಹಾರ ಸಾಮಗ್ರಿ, ಕೃಷಿ ಪರಿಕರಗಳ ಪೂರೈಕೆ ಸರಪಳಿ ರಚನೆ

ಬೆಂಗಳೂರು, ಏ.1, ಸಾಂಕ್ರಾಮಿಕ ಕೋವಿಡ್-19 ವಿರುದ್ಧದ ಲಾಕ್ಡೌನ್ಅವಧಿಯಲ್ಲಿ ಅವಶ್ಯಕ ಆಹಾರ ಸಾಮಗ್ರಿ ಮತ್ತು ಕೃಷಿ ಪರಿಕರಗಳ ಪೂರೈಕೆ ಸರಪಳಿಯನ್ನುರಚಿಸಲಾಗಿದ್ದು, ಇದರ ನಿರ್ವಹಣೆಗೆ ಉಸ್ತುವಾರಿಗಳನ್ನು ಕೂಡ ನೇಮಕ ಮಾಡಿ ಸರ್ಕಾರ ಆದೇಶಹೊರಡಿಸಿದೆ.ಅಗತ್ಯ ವಸ್ತುಗಳ ಮತ್ತು ಪೂರೈಕೆ ಸರಪಳಿ ನಿರ್ವಹಣೆಯ ರಾಜ್ಯ ನೋಡೆಲ್ ಅಧಿಕಾರಿಯಾಗಿಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾಅವರಿಗೆ ಹೊಣೆ ವಹಿಸಲಾಗಿದೆ.ಈ ಸಮಿತಿ ಅಗತ್ಯ ವಸ್ತುಗಳ ಪೂರೈಕೆ ಸರಪಳಿ ನಿರ್ವಹಣೆಯ ಮೇಲ್ವಿಚಾರಣೆಯನ್ನುವಹಿಸಲಿದೆ. ಕೃಷಿ ಪರಿಕರಗಳಾದ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕಗಳ ಸಮರ್ಪಕ ಪೂರೈಕೆಗೆಆದೇಶ ಹೊರಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಅವಶ್ಯಕ ಆಹಾರಸಾಮಗ್ರಿಗಳು ಮತ್ತು ಕೃಷಿ ಪರಿಕರಗಳ ಪೂರೈಕೆ ಸರಪಳಿಯ ನಿರ್ವಹಣೆಯನ್ನು ಉಸ್ತುವಾರಿಮಾಡುವ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರ ಈ ಆದೇಶ ಹೊರಡಿಸಿದೆ ಎಂದು ಆದೇಶದಲ್ಲಿತಿಳಿಸಲಾಗಿದೆ.ರಾಜ್ಯ ಪೂರೈಕೆ ಸರಪಳಿ ನಿರ್ವಹಣಾ ಕೋಶ (ಎಸ್ಎಸ್ಸಿಎಂಸಿ); ಪೂರೈಕೆ ಸರಪಳಿನಿರ್ವಹಣೆಯ ಮೇಲ್ವಿಚಾರಣೆ ಮತ್ತು ವಿವಿಧ ಅವಶ್ಯಕ ಆಹಾರ ಸಾಮಗ್ರಿಗಳ ಹಾಗೂ ಕೃಷಿಪರಿಕರಗಳ ಪೂರೈಕೆಯಲ್ಲಿ ಭಾಗಿಯಾಗಿರುವ ಸರ್ಕಾರದ ವಿವಿಧ ಇಲಾಖೆಗಳ ಸಮಸ್ಯೆ,ದೂರುಗಳನ್ನು ನಿಭಾಯಿಸಲು, ಕೃಷಿ ಸಚಿವಾಲಯದ ಹಂತದಲ್ಲಿ ರಾಜ್ಯ ಪೂರೈಕೆ ಸರಪಳಿನಿರ್ವಹಣಾ ಕೋಶ ರಚಿಸಲಾಗಿದೆ.  ಸಮಸ್ಯೆಗಳಿದ್ದರೆ ಈ ಕೆಳಗಿನ ಅಧಿಕಾರಿಗಳನ್ನುಸಂಪರ್ಕಿಸಬಹುದು.
ಜಲಾನಯನ ಅಭಿವೃದ್ಧಿ ಆಯುಕ್ತ ಹಾಗೂ ಎಸ್ಎಸ್ಸಿಎಂಸಿ ಸಂಯೋಜಕಪ್ರಭಾಷ್ ಚಂದ್ರ ರೇ (8277934200), ಶಿವರಾಜು ಬಿ (9448417940), ಗುರುಮೂರ್ತಿ(8277934109), ವೆಂಕಟರವಣಪ್ಪ (8277930267), ರಾಮಕೃಷ್ಣಯ್ಯ ಕೆ.ಕೆ.(8277934174), ನವೀನ್ ಎಲ್.ಆರ್, (8277930218) ಅವರನ್ನು ಸಂಪರ್ಕಿಸಬಹುದು.ಇಮೇಲ್ ವಿಳಾಸ: sscmc19@gmail.com ಮತ್ತು ದೂರವಾಣಿ ಸಂಖ್ಯೆ 080-22353939/080-22032529ಆಹಾರ ಧಾನ್ಯಗಳಾದ ಅಕ್ಕಿ, ಗೋಧಿ, ರಾಗಿ, ಜೋಳ, ದ್ವಿದಳ ಧಾನ್ಯಗಳು, ಖಾದ್ಯತೈಲಗಳಿಗಾಗಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಅದೇ ರೀತಿ ತರಕಾರಿಗಳು, ಹಣ್ಣುಗಳು, ಸಾಂಬಾರು ಬೆಳೆಗಳು, ಪೌಲ್ಟ್ರಿ ಮಾಂಸ, ಮೀನು,ಹಾಲು ಮತ್ತು ಹಾಲಿನ ಉತ್ಪನ್ನಗಳು, ಸಕ್ಕರೆ, ಬೇಕರಿ ಉತ್ಪನ್ನಗಳು, ಬಿಸ್ಕತ್,ಸಂಸ್ಕರಿಸಿದ ಆಹಾರ ಯುನಿಟ್ ಮತ್ತು ಪೊಟ್ಟಣ ಸಾಮಗ್ರಿಗಳು, ಬೆಳೆ ಕಟಾವು, ಬೀಜಸರಬರಾಜು ರಸಗೊಬ್ಬರ ಕೀಟನಾಶಕ ಹಾಗೂಸಿಎಚ್ಸಿಗೆ ಪ್ರತ್ಯೇಕ ನೋಡೆಲ್ ಅಧಿಕಾರಿಗಳನ್ನುನೇಮಿಸಲಾಗಿದೆ.ರೇಷ್ಮೆಗೂಡು ಮಾರುಕಟ್ಟೆ ಮತ್ತು ಸಾಗಾಣಿಕೆ, ಆಹಾರ, ಪಡಿತರ ಮತ್ತು ಪೆಟ್ರೋಲಿಯಂಉತ್ಪನ್ನಗಳಿಗೆ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು, ಉಸ್ತುವಾರಿ ಅಧಿಕಾರಿಗಳನ್ನುನೇಮಿಸಲಾಗಿದೆ.ವಿವಿಧ ಇಲಾಖೆಗಳಲ್ಲಿರುವ ಪೂರೈಕೆ ಸರಪಳಿ ನಿರ್ವಹಣಾ ಕೋಶಗಳ ಜವಾಬ್ದಾರಿ ಹೊಂದಿರುವಮುಖ್ಯಸ್ಥರೊಂದಿಗೆ ಮತ್ತು ನೋಡಲ್ ಅಧಿಕಾರಿಗಳೊಂದಿಗೆ ನಿಯಂತ್ರಣಾ ಕೊಠಡಿಯ ಸಂಯೋಜನೆಸಾಧಿಸಬೇಕು.
ಪೂರೈಕೆ ಸರಪಳಿ ನಿರ್ವಹಣಾ ತಂಡ ತಮ್ಮ ನಿಯಂತ್ರಣದಲ್ಲಿರುವ ಬರುವ ಪ್ರಮುಖಸರಕುಗಳಿಗೆ ಸಂಬಂಧಿಸಿದಂತೆ ಬೇಡಿಕೆ,. ಲಭ್ಯತೆ, ಸಾರಿಗೆ, ಹಾಗೂ  ಇತರ ವಿಷಯಗಳ ಬಗ್ಗೆಪ್ರತಿದಿನ ಸಾಯಂಕಾಲ 5ರೊಳಗೆ ವರದಿಯನ್ನು ರಾಜ್ಯ ಪೂರೈಕೆ ಸರಪಳಿ ನಿರ್ವಹಣಾ ಕೋಶಕ್ಕೆಸಲ್ಲಿಸಬೇಕು.ರಾಜ್ಯುಮಟ್ಟದ ಪೂರೈಕೆ ಸರಪಳಿ ನಿರ್ವಹಣಾ ಕೋಶದ ಮುಖ್ಯಸ್ಥರು ದೈನಂದಿನ ಪರಿಸ್ಥಿತಿಯವರದಿಯನ್ನು ಪ್ರತಿದಿನ ಸಂಜೆ 6ರೊಳಗೆ ಕ್ರೋಢೀಕರಿಸಿ ಸರ್ಕಾರಕ್ಕೆ ಸಲ್ಲಿಸಬೇಕು.ಎಸ್ಎಸ್ಸಿಎಂಸಿ ಸಂಯೋಜಕರು, ಅವರ ತಂಡದ ಸದಸ್ಯರು ಪೂರೈಕೆ ಸರಪಳಿ ನಿರ್ವಹಣಾಕೋಶಗಳಿಂದ ವರದಿ ಪಡೆಯಲು ಹಾಗೂಸಮಸ್ಯೆಗಳನ್ನು ಪರಿಹರಿಸಲು ಕಚೇರಿಯ ಅವಧಿಯ ನಂತರವೂಲಭ್ಯವಿರಬೇಕು ಎಂದು ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಕಾರ್ಯದರ್ಶಿ ಹಾಗೂಅಗತ್ಯ ವಸ್ತುಗಳ ಮತ್ತು ಪೂರೈಕೆ ಸರಪಳಿ ನಿರ್ವಹಣೆ ಕುರಿತ ರಾಜ್ಯ ನೋಡೆಲ್ ಅಧಿಕಾರಿರಾಜೇಂದರ್ ಕುಮಾರ್ ಕಟಾರಿಯಾ ಆದೇಶದಲ್ಲಿ ತಿಳಿಸಿದ್ದಾರೆ.