ಬೆಳೆಗಳಿಗೆ ನೀರಿಗಿಂತ ಬಿಸಿಲು ಬಹಳ ಮುಖ್ಯ: ದೇಸಾಯಿ

ಚಿಕ್ಕೋಡಿ 29: ಕೃಷಿಯಲ್ಲಿ ಬೆಳೆಗಳಿಗೆ ನೀರಿಗಿಂತ ಬಿಸಿಲು ಬಹಳ ಮುಖ್ಯ, ತಾಂತ್ರಿಕತೆ ಕೊಟ್ಟರೆ ನೀರಾವರಿ ಭಾಗದ ರೈತರಿಗಿಂತ ಒಣ ಬೇಸಾಯದ ರೈತರೆ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಹೊಂದುತ್ತಾರೆ ಎಂದು ಪ್ರಗತಿಪರ ರೈತ ಸುರೇಶ ದೇಸಾಯಿ ಹೇಳಿದರು.

ತಾಲೂಕಿನ ಉಮರಾಣಿ ಗ್ರಾಮ ವ್ಯಾಪ್ತಿಯಲ್ಲಿ ಕೃಷಿ ಇಲಾಖೆ ಚಿಕ್ಕೋಡಿ, ಆತ್ಮಾ ಯೋಜನೆ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸಮಗ್ರ ಕೃಷಿ ಪದ್ದತಿ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಆದರ್ಶಗೌಡ, ಮೀನುಗಾರಿಕೆ ವಿಷಯ ತಜ್ಞರು, ಬಡ್ರ್ಸ ಕೆವಿಕೆ, ತುಕ್ಕಾನಟ್ಟಿ, ಮಾತನಾಡಿ ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ ಕುರಿತು ಮಾಹಿತಿ ನೀಡಿದರು.

ಸುರೇಶ ಅಂಗಡಿ, ಮುಖ್ಯ ಪಶು ವೈದ್ಯಾಧಿಕಾರಿಗಳು, ಹುಕ್ಕೇರಿ ಮಾತನಾಡಿ ಕೃಷಿಯಲ್ಲಿ ಪ್ರಗತಿ ಹೊಂದ ಬೇಕಾದರೆ ಹೈನುಗಾರಿಕೆ ಪಾತ್ರ ಬಹಳ ಮುಖ್ಯ ಕೃಷಿ ಜೊತೆ ಹೈನುಗಾರಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡುಕೊಳ್ಳವುದರ ಕುರಿತು ಮಾಹಿತಿ ನೀಡಿದರು. 

ರಾಜು ಕುಲ್ಲೋಳಿ, ಪ್ರಗತಿಪರ ರೈತರು ಮೋಳೆ ಮಾತನಾಡಿ ತಾವು ತಮ್ಮ ಕೇವಲ 2 ಎಕರೆ ಜಮೀನಲ್ಲಿ ಯಾವ ರೀತಿ ಸಾವಯವ ಕೃಷಿ ಮಾಡುತ್ತೀದ್ದಾರೆ, ಯಾವ ರೀತಿ ಜಮೀನಿನ ನಿರ್ವಹಣೆ ಮಾಡಿ ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತಿದ್ದಾರೆ ಎಂದರು.

ಎಮ್.ಎನ್.ಮಲವಡೆ, ಬೇಸಾಯ ತಜ್ಞರು, ಬಡ್ರ್ಸ ಕೆವಿಕೆ, ತುಕ್ಕಾನಟ್ಟಿ ಮಾತನಾಡಿ ಬೆಳೆಗಳಿಗೆ ರೋಗ ಕೀಟ ಭಾದೆ ಬರದಂತೆ ಮನ್ನಚ್ಚೆರಿಕೆ ಕ್ರಮಗಳನ್ನು ಅಳವಡಿಸಬೇಕೆಂದು ಮಾಹಿತಿ ನೀಡಿದರು.

ಕೃಷಿ ಉಪ ನಿದರ್ೇಶಕ ಎಸ್.ಬಿ.ಕೊಳೆಕರ ಉದ್ಘಾಟಿಸಿದರು. ವೇದಿಕೆ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀದೇವಿ ಕುಮಾರ ಮಾಂಜ್ರೆ, ಮುರಿಗೆಪ್ಪಾ ಅಡಿಸೇರಿ, ಅಜರ್ುನ ಕಮತೆ, ರಾಮಪ್ಪಾ ಹಾಲಟ್ಟಿ, ಚನ್ನಪ್ಪಾ ಡಬ್ಬನ್ನವರ, ಕಲಗೌಡ ಪಾಟೀಲ, ಕುಮಾರ ಮಾಂಜ್ರೆ, ಎಸ್.ಬಿ. ಧರೆಣ್ಣಿ, ಸಹಾಯಕ ಕೃಷಿ ನಿದರ್ೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ,ಅರಭಾಂವಿ, ಸಹಾಯಕ ಕೃಷಿ ನಿದರ್ೇಶಕ ರಾಘವೇಂದ್ರ ಬಮ್ಮಿಗಟ್ಟಿ, ಕೃಷಿ ಅಧಿಕಾರಿ ಯೋಗೆಶ ಅಗಡಿ, ಎಸ್ ಎಚ್, ಜಾತಾಗಾರ ಮುಂತಾದವರು ಇದ್ದರು.