ಲಕ್ನೋ, ನ.22 : ಅಯೋಧ್ಯೆಯ ತೀಪರ್ಿನ ವಿರುದ್ಧ ಪುನರ್ ಪರಿಶೀಲನಾ ಅಜರ್ಿಯನ್ನು ಸಲ್ಲಿಸುವ ಕುರಿತು ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದರೂ, ಮಂಡಳಿಯ ಅಧ್ಯಕ್ಷ ಝಾಫುರ್ ಫಾರೂಕಿ ಅವರು ತಮ್ಮ ನಿಲುವನ್ನು ಸಡಿಲಗೊಳಿಸಿದ್ದಾರೆ. ಮಂಡಳಿಯ ಪರವಾಗಿ ಯಾವುದೇ ನಿಧರ್ಾರ ತೆಗೆದುಕೊಳ್ಳಲು ತಮಗೆ ಅಧಿಕಾರವಿದ್ದರೂ ನವೆಂಬರ್ 26 ರಂದು ನಡೆಯಲಿರುವ ಸಭೆಯಲ್ಲಿ ಸದಸ್ಯರು ವಿಷಯ ಪ್ರಸ್ತಾಪಿಸಲು ಮುಕ್ತರಾಗಿದ್ದಾರೆ ಎಂದು ಹೇಳಿದ್ದಾರೆ.
ಅಯೋಧ್ಯಾ ತೀಪು ಕುರಿತ ಪರಿಶೀಲನಾ ಅಜರ್ಿಯನ್ನು ಸಲ್ಲಿಸುವ ಬಗ್ಗೆ ಮಂಡಳಿಯಲ್ಲಿ ಯಾವುದೇ ವಿವಾದಗಳಿಲ್. ಅದನ್ನು ಸಲ್ಲಿಸದಿರುವ ನಿಧರ್ಾರಕ್ಕೆ ಅವರು ಅಂಟಿಕೊಂಡಿದ್ದಾರೆ ಎಂದು ಅವರು ಶುಕ್ರವಾರ ಇಲ್ಲಿ ಹೇಳಿದರು, ಆದರೂ ಬಹುಮತದ ನಿಧರ್ಾರದ ಬಗ್ಗೆ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಯಾವುದೇ ವಿಷಯದಲ್ಲಿ ನಿಧರ್ಾರ ಕೈಗೊಳ್ಳಬಹುದು ಎಂದು ತಿಳಿಸಿದರು.
ಸಭೆಯಲ್ಲಿ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸಲು ನಾನು ಈಗಾಗಲೇ ಮಂಡಳಿಯ ಎಲ್ಲ ಸದಸ್ಯರಿಗೆ ತಿಳಿಸಿದ್ದೇನೆ ಮತ್ತು ನಂತರ ಪರಿಶೀಲನಾ ಅಜರ್ಿಯನ್ನು ಸಲ್ಲಿಸುವ ಬಗ್ಗೆ ಅಂತಿಮ ತೀಮರ್ಾನಕ್ಕೆ ಬರಲಾಗುವುದು ಎಂದು ಅವರು ಹೇಳಿದರು.
ಅಂತಿಮ ನಿಧರ್ಾರ ತೆಗೆದುಕೊಳ್ಳುವ ಅಧಿಕಾರ ಮತ್ತು ಪರಿಶೀಲನಾ ಅಜರ್ಿಯನ್ನು ಸಲ್ಲಿಸದಿರುವ ಅವರ ಘೋಷಣೆಯು ಅಂತಿಮವಾದುದೇ ಎಂದು ಕೇಳಿದಾಗ, ಮಂಡಳಿಯ ಅಧ್ಯಕ್ಷರು ಸ್ಪಷ್ಟವಾಗಿ ಏನನ್ನೂ ಹೇಳದೆ, ಮಂಡಳಿಯು ಯಾವುದೇ ನಿಧರ್ಾರ ತೆಗೆದುಕೊಳ್ಳಲು ನನಗೆ ಅಧಿಕಾರ ನೀಡುವ ನಿರ್ಣಯ ಅಂಗೀಕರಿಸಿದೆ. ಆದರೆ ಯಾವುದೇ ವಿವಾದವಿದ್ದರೆ ಅದನ್ನು ಬಹುಮತದ ಮೇಲೆ ನಿರ್ಧರಿಸಲಾಗುತ್ತದೆ. ಸದ್ಯಕ್ಕೆ ಸದಸ್ಯರ ನಡುವೆ ಅಂತಹ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಶೀಲನಾ ಅಜರ್ಿಯನ್ನು ಸಲ್ಲಿಸದಿರುವ ಅಧ್ಯಕ್ಷರ ಏಕಪಕ್ಷೀಯ ಘೋಷಣೆಯನ್ನು 8 ರಲ್ಲಿ ಇಬ್ಬರು ಸದಸ್ಯರು ತಿರಸ್ಕರಿಸಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು.
ಮಂಡಳಿಯ ಹಿರಿಯ ಸದಸ್ಯ ಅಬ್ದುಲ್ ರಝಾಖ್ ಅವರು, "ಸಭೆ ನಡೆಸದೆ ಅಧ್ಯಕ್ಷರು ಹೇಗೆ ನಿಧರ್ಾರ ತೆಗೆದುಕೊಳ್ಳುತ್ತಾರೆ ? ಇದು ಅವರ ವೈಯಕ್ತಿಕ ದೃಷ್ಟಿಕೋನವಾಗಿರಬಹುದು, ಆದರೆ ನವೆಂಬರ್ 26 ರಂದು ನಡೆಯಲಿರುವ ಸಭೆಯ ನಂತರವೇ ಮಂಡಳಿಯ ನಿಧರ್ಾರ ಅಧಿಕೃತವಾಗಲಿದೆ ಎಂದು ಹೇಳಿದ್ದರು.
ಮತ್ತೊಬ್ಬ ಸದಸ್ಯ, ವಕೀಲರಾದ ಇಮ್ರಾನ್ ಮಹಬೂದ್ ಖಾನ್ ಅವರು ಪರಿಶೀಲನಾ ಅಜರ್ಿ ಸಲ್ಲಿಸಲು ಒಲವು ತೋರಿದ್ದಾರೆ. ಹೆಚ್ಚಿನ ಭರವಸೆ ಇಲ್ಲದಿದ್ದರೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಸುಪ್ರೀಂಕೋಟರ್್ನಲ್ಲಿ ಪರಿಶೀಲನೆಗೆ ಹೋಗುವುದಾದರೆ, ಸುನ್ನಿ ವಕ್ಫ್ ಮಂಡಳಿಯು ಮುಸ್ಲಿಂ ಸಮುದಾಯದ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಇತರ ಮೂವರು ಸದಸ್ಯರಾದ ಅಬ್ರಾರ್ ಅಹ್ಮದ್, ಮುಹಮ್ಮದ್ ಜುನೈದ್ ಸಿದ್ದಿಕಿ ಮತ್ತು ಅದ್ನಾನ್ ಫಾರೂಕ್ ಷಾ ಅವರು ಈ ವಿಷಯದ ಬಗ್ಗೆ ಫಾರೂಕಿಯವರ ನಿಲುವನ್ನು ಬೆಂಬಲಿಸುತ್ತಿದ್ದಾರೆ.
ಆದಾಗ್ಯೂ, ಪಯರ್ಾಯ ಮಸೀದಿಗೆ ನೀಡಲಾದ ಐದು ಎಕರೆ ಭೂಮಿಯನ್ನು ತಿರಸ್ಕರಿಸಬೇಕು ಎಂದು ಮಂಡಳಿಯ ಹೆಚ್ಚಿನ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ನವೆಂಬರ್ 26 ರ ಸಭೆಯು ಐದು ಎಕರೆ ಭೂಮಿ ಪಡೆಯುವ ವಿಷಯದ ಬಗ್ಗೆಯೂ ನಿಧರ್ಾರ ಕೈಗೊಳ್ಳಲಿದೆ.
ಈ ಮಧ್ಯೆ, ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿ (ಎಐಎಸ್ಪಿಎಲ್ಬಿ), ರಾಮಜನ್ಮಭೂಮಿ ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನವೆಂಬರ್ 9ರ ತೀಪರ್ಿನ ಬಗ್ಗೆ ಸುಪ್ರೀಂ ಕೋಟರ್್ನಲ್ಲಿ ಪರಿಶೀಲನಾ ಅಜರ್ಿಯನ್ನು ಸಲ್ಲಿಸಲು ಎಐಎಂಪಿಎಲ್ಬಿಯನ್ನು ಬೆಂಬಲಿಸುವುದಾಗಿ ಘೋಷಿಸಿದೆ.
ಎಐಎಸ್ಪಿಎಲ್ಬಿ ವಕ್ತಾರ ಮೌಲಾನಾ ಯೂಸುಬ್ ಅಬ್ಬಾಸ್ ಅವರು, ನಾವು ಎಐಎಂಪಿಎಲ್ಬಿಯೊಂದಿಗಿದ್ದೆವೆ. ಸುಪ್ರೀಂಕೋಟರ್್ ತೀಪರ್ಿನಿಂದ ತೃಪ್ತರಾಗದಿದ್ದರೆ ಮುಸ್ಲಿಮರಿಗೆ ಪರಿಶೀಲನಾ ಅಜರ್ಿಯನ್ನು ಸಲ್ಲಿಸುವ ಎಲ್ಲಾ ಹಕ್ಕು ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.