ಬೆಂಗಳೂರು, ಮೇ 30, ಭಾನುವಾರದ ಲಾಕ್ ಡೌನ್ ರದ್ದಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಎಂದಿನಂತೆ ಇರಲಿದೆ. ವಲಸೆ ಕಾರ್ಮಿಕರನ್ನು ತಮ್ಮ ಸ್ವಸ್ಥಾನಗಳಿಗೆ ತಲುಪಿಸುವ ಉದ್ದೇಶದಿಂದ ಶ್ರಮಿಕ್ ರೈಲು ಹೊರತುಪಡಿಸಿ ಉಳಿದ ಎಲ್ಲಾ ರೈಲು ಮತ್ತು ಸಾರಿಗೆ ಸಂಸ್ಥೆ ಬಸ್ ಗಳ ಸಂಚಾರವನ್ನು ಭಾನುವಾರ ರದ್ದುಪಡಿಸಲಾಗಿತ್ತು. ಇದೀಗ ಭಾನುವಾರದ ಲಾಕ್ ಡೌನ್ ಸಡಿಲಿಗೊಂಡಿರುವ ಹಿನ್ನೆಲೆಯಲ್ಲಿ 3,500ಕ್ಕೂ ಹೆಚ್ಚು ಬಸ್ ಗಳು ಸಂಚರಿಸಲಿದ್ದು, ಬೆಂಗಳೂರಿನಿಂದ 1000 ಬಸ್ ಗಳು ಹೊರಡಲಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.ಇದೇ ತಿಂಗಳ 19 ರಿಂದ ಈವರೆಗೆ ಬೆಂಗಳೂರಿನಿಂದ 7.663 ಬಸ್ ಗಳು ಸಂಚರಿಸಿದ್ದು, 1,20,202 ಮಂದಿ ಪ್ರಯಾಣಿಕರು ಸಂಚರಿಸಿದ್ದಾರೆ. ಬೆಂಗಳೂರು ಹೊರತುಪಡಿಸಿ ಇತರೆ ನಗರಗಳಿಂದ ಈವರೆಗೆ 28,514 ವಾಹನಗಳು ಸಂಚರಿಸಿದ್ದು, 7, 71,625 ಪ್ರಯಾಣಿಕರು ಪ್ರಯಾಣಿಕರು ಪ್ರಯಾಣಿಸಿದ್ದಾರೆ.