ಬೆಳಗಾವಿ : ರಾಜ್ಯ ಸೇರಿದಂತೆ ಜಿಲ್ಲೆಯ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸಕರ್ಾರ ರವಿವಾರ ಒಂದು ದಿನ ಲಾಕ್ಡೌನ್ ಜಾರಿಗೊಳಿಸಿದ್ದರಿಂದ ಇಂದು ಬೆಳಗಾವಿ ನಗರ ಸೇರಿದಂತೆ ಜಿಲ್ಲೆ ಸಂಪೂರ್ಣ ಸ್ಥಬ್ದವಾಗಿದೆ.
ಶನಿವಾರ ರಾತ್ರಿ 8 ಗಂಟೆಯಿಂದಲೆ ಲಾಕ್ಡೌನ್ ಜಾರಿಯಾಗಿದೆ. ರವಿವಾರ ಬೆಳಗಿನ ಜಾವದಿಂದ ಬೆಳಗಾವಿ ಸ್ಥಬ್ಧವಾಗಿದೆ. ಪ್ರತಿ ದಿನ ಜನದಟ್ಟನೆಯಿಂದ ಕೂಡಿರುವ ಪ್ರಮುಖ ರಸ್ತೆಗೆ ಬಸ್, ದ್ವಿಚಕ್ರ ವಾಹನ ರಸ್ತೆಗೆ ಇಳಿದಿಲ್ಲ. ಜನರ ಓಡಾಟ ಇಲ್ಲದಾಗಿದೆ. ಕೊರೊನಾ ದಿನದಿಂದ ದಿನಕ್ಕೆ ವೇಗವಾಗಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಿಂದ ಇಡೀ ರಾಜ್ಯದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಹೀಗಾಗಿ ರಾಜ್ಯ ಸಕರ್ಾರ ಕೊರೊನಾ ವೇಗಕ್ಕೆ ಬ್ರೇಕ್ ಹಾಕಲು ರಾಜ್ಯಾಧ್ಯಂತ ರವಿವಾರ ಒಂದು ದಿನದ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಬೆಳಗಾವಿ ನಗರ ಸಂಪೂರ್ಣ ಸ್ತಬ್ಧವಾಗಿದೆ. ಇದು 2ನೇ ರವಿವಾರದ ಲಾಕ್ಡೌನ್ ಆಗಿದ್ದು. ಅಗತ್ಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಹಾಲು ಹೊರತುಪಡಿಸಿ ಇನ್ನುಳಿದ ಯಾವುದೇ ರೀತಿ ಸೇವೆಗಳು ಬಂದ್ ಆಗಿವೆ.
ಲಾಕ್ಡೌನ್ ಸಡಿಲಿಕೆ ಬಳಿಕ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಬೆಳಗಾವಿ ನಗರದ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್, ಕಾಲೇಜ್ ರೋಡ್, ಧರ್ಮವೀರ್ ಸಂಭಾಜಿ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಶ್ರೀಕೃಷ್ಣದೇವರಾಯ್ ಸರ್ಕಲ್ ಸೇರಿ ಮುಂತಾದ ಕಡೆ ಪೊಲೀಸರು ಜನರು ಹೊರಗೆ ಬರದಂತೆ ತೀವ್ರ ನಿಗಾ ವಹಿಸಿದ್ದಾರೆ.
ಅಷ್ಟೇ ಅಲ್ಲದೇ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ತುತರ್ು ಪರಿಸ್ಥಿತಿಯಲ್ಲಿ ತೆರಳುತ್ತಿರುವ ಜನರಿಗೆ ಮಾತ್ರ ಹೊರಗಡೆ ಓಡಾಡಲು ಅವಕಾಶ ಮಾಡಿಕೊಡಲಾಗಿದ್ದು. ಬೇಕಾಬಿಟ್ಟಿ ಓಡಾಡುವ ಜನರನ್ನು ಪೊಲೀಸರು ಮನೆಗೆ ಕಳಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಒಟ್ಟಾರೆ ಕೊರೊನಾ ತಡೆಗಟ್ಟಲು ಸಂಡೇ ಲಾಕ್ಡೌನ್ ಹಿನ್ನೆಲೆ ಬೆಳಗಾವಿ ನಗರದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇನ್ನು ಕೆಎಸ್ಆರ್ಟಿಸಿ ಬಸ್, ಆಟೋ ರೀಕ್ಷಾ ಸೇರಿದಂತೆ ಯಾವುದೇ ರೀತಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಇನ್ನು ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಅದೇ ರೀತಿ ಜನರು ಕೂಡ ಸಕರ್ಾರದ ಆದೇಶಕ್ಕೆ ಸಹಕಾರ ನೀಡುವ ಅವಶ್ಯಕತೆಯಿದೆ. ಮಹಾಮಾರಿ ಕೊರೊನಾ ನಿಯಂತ್ರಿಸಲು ಮಾಸ್ಕ್ ಮತ್ತು ಸಾಮಾಜಿಕ ಅಂತರವೇ ಮದ್ದು ಹೀಗಾಗಿ ಎಲ್ಲರೂ ಅಗತ್ಯ ಮುಂಜಾಗ್ರತೆ ವಹಿಸುವ ಮೂಲಕ ಕೊರೊನಾದಿಂದ ಪಾರಾಗೋಣ ಎಂಬುದು ನಮ್ಮ ಆಶಯವಾಗಿದೆ.