ಲೋಕದರ್ಶನ ವರದಿ
ಮಕ್ಕಳ ಕಲಿಕೆಗೆ ಬೇಸಿಗೆ ಶಿಬಿರ ಸಹಕಾರಿ : ಟಿ.ಮಲ್ಲಿಕಾರ್ಜುನ
ಕಂಪಿ 19: ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತ ರಾಗಬಾರದೆಂಬ ಉದ್ದೇಶದಿಂದ ಬೇಸಿಗೆ ಶಿಬಿರ ಹಮ್ಮಿಕೊಂಡಿರುವುದು ಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಗಾದಿಗನೂರು ಪಿಡಿಒ ಟಿ.ಮಲ್ಲಿಕಾರ್ಜುನ ಹೇಳಿದರು. ಸಮೀಪದ ಗಾದಿಗನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯಲ್ಲಿ ಜೆ.ಎಸ್‌ಡಬ್ಲ್ಯೂ ಆಸ್ಪೈರ್ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್‌ವತಿಯಿಂದ ಏರಿ್ಡಸಿರುವ ಬೇಸಿಗೆ ಶಿಬಿರ ತರಬೇತಿಗೆ ಚಾಲನೆ ನೀಡಿ ಮಾತನಾಡಿ, ಗಾದಿಗನೂರ ಗ್ರಾಮದ ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜತೆಗೆ ವ್ಯಕ್ತಿತ್ವ ರೂಪಿಸುವುದಕ್ಕಾಗಿ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ವತಿಯಿಂದ ಬೇಸಿಗೆ ತರಬೇತಿ ಶಿಬಿರ ಹಮ್ಮಿಕೊಂಡಿರುವುದು ಸಂತಸ. ಇದರಿಂದ ಮಕ್ಕಳಿಗೆ ಶಿಕ್ಷಣದಲ್ಲಿ ಹೆಚ್ಚಿನ ಆಸಕ್ತಿವಹಿಸುತ್ತಾರೆ ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜೆ.ಎಸ್.ಡಬ್ಲ್ಯೂ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಶಿಕ್ಷಕಿ ರೂಪಾ ಮಾತನಾಡಿ, ಮನೆ ಮನೆಗೆ ಭೇಟಿ ನೀಡಿ ಪಠ್ಯೆತರ ಚಟವಟಿಕೆ ಮೂಲಕ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದು ಜೀವನ ಕೌಶಲ್ಯ ಸಾಮಾನ್ಯ ಗಣಿತ ಕನ್ನಡ ವಿಷಯಗಳ ಮೂಲಕ ಮಕ್ಕಳಿಗೆ ಶಿಬಿರ ನೀಡಲಿದೆ ಎಂದರು. ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಶಿಕ್ಷಕ ಹುಲಿರಾಜ್ ಮಾತನಾಡಿ, ಮ್ಯಾಜಿಕ್ ಬಸ್ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿಲಾಯಿತು ಹಾಗೂ ಬೇಸಿಗೆ ಶಿಬಿರ ಆಯೋಜಿಸಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಹಾಗೂ ಸಮುದಾಯ ಕಲಿಕಾ ಕೇಂದ್ರಕ್ಕೆ ಅನುಮತಿಯನ್ನು ಪಡೆಯಲಾಯಿತು. ಗಾದಿಗನೂರ ಗ್ರಾಮದ ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಮೂಲಕ ಹೋಸಪೆಟೆ ಸಂಡೂರು ಭಾಗದಲ್ಲಿ 68 ಶಾಲೆಗಳಲ್ಲಿ ಬೇಸಿಗೆ ಶಿಬಿರ ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ಓದಿನ ಕಡೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ನಂತರ ಗಾದಿಗನೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಕ್ಕಳಿಗಾಗಿ ಆಯೋಜಿಸಲಾದ ಬೇಸಿಗೆ ಶಿಬಿರ ತರಬೇತಿ ಕಾರ‌್ಯಕ್ರಮದಲ್ಲಿ ಹುಲಿರಾಜ್ ಶಿಕ್ಷಕರು ಮಕ್ಕಳ ಜೀವನ ಕೌಶಲ್ಯ, ಗಣಿತ ಕನ್ನಡ ತರಗತಿ ಉತ್ತಮವಾಗಿ ನಡೆಸಿದರು.
ಏ.01: ತಾಲೂಕು ಸಮೀಪದ ಗಾದಿಗನೂರು ಗ್ರಾಮದಲ್ಲಿ ಬೇಸಿಗೆ ಶಿಬಿರ ಜರುಗಿತು.