ಗ್ರಾ.ಪಂ.ಅಧ್ಯಕ್ಷರಾಗಿ ಸುಮಿತ್ರಬಾಯಿ ಅವಿರೋಧ ಆಯ್ಕೆ

Sumitrabai was elected unopposed as the president of Gram

ಗ್ರಾ.ಪಂ.ಅಧ್ಯಕ್ಷರಾಗಿ ಸುಮಿತ್ರಬಾಯಿ ಅವಿರೋಧ ಆಯ್ಕೆ

ಹೂವಿನಹಡಗಲಿ 08: ತಾಲ್ಲೂಕಿನ  ಹಿರೇಮಲ್ಲನಕೆರೆಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಸುಮಿತ್ರ ಬಾಯಿ ಚಂದ್ರನಾಯ್ಕ  ಅವಿರೋಧ ಆಯ್ಕೆಯಾದರು.ಹಿರೇಮಲ್ಲನಕೆರೆ  ಪಂಚಾಯಿತಿ ಕಚೇರಿಯಲ್ಲಿ ಬುಧವಾರ  ನಡೆದ ಅಧ್ಯಕ್ಷ ರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರ ಬಾಯಿ ಮಾತ್ರ ನಾಮಪತ್ರಸಲ್ಲಿಕೆ ಮಾಡಿದ್ದರು. 

ಹೀಗಾಗಿ ಚುನಾವಣಾಧಿಕಾರಿ ತಹಶಿಲ್ದಾರರ ಸಂತೋಷ ಕುಮಾರ ಅವಿರೋಧ ಆಯ್ಕೆ ಪ್ರಕಟಿಸಿದರು.ಗ್ರಾಮ ಪಂಚಾಯತ್ ಒಟ್ಟು 17. ಸದಸ್ಯರಲ್ಲಿ 11 ಜನ ಸದಸ್ಯರು ಇದ್ದರು.ಇದೇ ವೇಳೆ ಕಾಂಗ್ರೆಸ್ ಬ್ಲಾಕ್ ಅದ್ಯಕ್ಷ ಬಿ.ಹನುಮಂತಪ್ಪ. ಮುಖಂಡರಾದ ದೂದನಾಯ್ಕ ಚಂದ್ರನಾಯ್ಕ. ಸುರೇಶ  ಇದ್ದರು.