ಸುಲೋಚನಾಬಾಯಿ ಪಾಟೀಲ್ ನಿಧನ

Sulochanabai Patil passes away

ಮಹಾಲಿಂಗಪುರ 07: ಮುಧೋಳ ತಾಲೂಕಿನ ಸಮೀಪದ ನಾಗರಾಳ ಗ್ರಾಮದ ರೆಡ್ಡಿ ಸಮಾಜದ ಸುಲೋಚನಾಬಾಯಿ ಲಕ್ಷ್ಮಣಗೌಡ. ಬಿ. ಪಾಟೀಲ್ (80) ಸೋಮವಾರ ನಿಧನರಾದರು. ಇವರು ಸುಪುತ್ರ ಭಾಜಪ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶ್ರೀಶೈಲಗೌಡ ಲ. ಪಾಟೀಲ್ ಮತ್ತು ಮೂವರು ಪುತ್ರರು, ಇಬ್ಬರು ಪುತ್ರಿಯರು ಅಲ್ಲದೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಸಂತಾಪ : ಸಂಸದರಾದ ಪಿ ಸಿ. ಗದ್ದಿಗೌಡರ, ಗೋವಿಂದ ಎಂ. ಕಾರಜೋಳ, ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಪಿ ಎಚ್‌. ಪೂಜಾರ ಮತ್ತು ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕರು ಬಸನಗೌಡ ಪಾಟೀಲ್, ನಾಗರಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತೆವ್ವ ತೇಲಿ, ಮುಖಂಡರಾದ ರಾಮನಗೌಡ ಪಾಟೀಲ್, ದುಂಡಪ್ಪ ಜೈನಾಪುರ, ಶೇಖರ ಅಂಗಡಿ, ಮಹಾಂತೇಶ ಹಿಟ್ಟಿನಮಠ, ಯಶವಂತ ಚವ್ಹಾಣ, ಈರ​‍್ಪ ಅಡಕಿ, ಮಲ್ಲಯ್ಯ ಕಂಬಿ, ಸತ್ಯಪ್ಪ ಶಿರಬೂರ ಮತ್ತು ಇನ್ನಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.