ಬಾಗಲಕೋಟೆ: ಮಾನಸಿ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವದರಿಂದ ಯಾವುದೇ ಸಮಸ್ಯೆ ಬಗೆಹರಿಸಲು ಸಾದ್ಯವಿಲ್ಲವೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅನೀಲ ಕಟ್ಟಿ ಹೇಳಿದರು.
ನವನಗರದ ಬಿವಿವಿ ಸಂಘದ ಸಜ್ಜಲಶ್ರೀ ನಸಿಂಗ್ ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಟ್ಟಿನಿಂದ ಯಾರು ಮಾನಸಿಕ ಅಸ್ವಸ್ಥರಲ್ಲ. ಗರ್ಭದಲ್ಲಿ ಇರುವಾಗ ಕೆಲವು ಅವಗಡಗಳಿಂದಾಗಿ ಶಿಶು ಬೆಳವಣಿಗೆಯಲ್ಲಿ ಏರು ಪೇರಾಗಿರುವದರಿಂದ ಕೆಲ ಮಕ್ಕಳು ಹುಟ್ಟಿನಿಂದಲೇ ಬುದ್ದಿ ಮಾಂದ್ಯರಾಗಿರುತ್ತಾರೆ. ಇದಕ್ಕಾಗಿ ಇಂದು ನಿರಂತರ ಚಿಕಿತ್ಸೆಯಿಂದ ಗುಣಪಡಿಸಬಹುದಾಗ ಕಾರ್ಯಗಳು ನಡೆದಿವೆ. ಮನುಷ್ಯ ಜೀವನದಲ್ಲಿ ಶೇ.80 ರಷ್ಟು ಮಾನಸಿಕ ಸಮಸ್ಯೆಗಳನ್ನು ತಾನೇ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಒತ್ತಡದ ಜೀವನ ಶೈಲಿ, ನಿಯಮಿತ ಆಹಾರ, ದುಶ್ಚಟಕ್ಕೆ ಬಲಿ ಹಾಗೂ ವಿಶ್ರಾಂತ ರಹಿತ ಜೀವನದಿಂದಾಗಿ ಖಿನ್ನತೆಗೆ ಒಳಗಾಗುತ್ತಿದ್ದಾನೆ ಎಂದರು.
ಇತ್ತೀಚಿನ ದಿನಗಳಲ್ಲಿ ಈ ಖಿನ್ನತೆ ಹೆಚ್ಚು ಕಂಡುಬರುತ್ತಿರುವುದು ಅವರು ಬೆಳೆದಿರುವ ಪರಿಸರದಿಂದಾಗಿ ಎಂಬುದು ತಿಳಿದು ಬಂದಿರುತ್ತದೆನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೆಲ ಸಂಘ ಸಂಸ್ಥೆಗಳು, ಯೋಗ ಗುರುಗಳ ಪ್ರಯತ್ನದಿಂದಾಗಿ ಮತ್ತು ಬದುಕುವುದು ಒಂದು ಕಲೆ ಎಂಬ ವಿಷಯಗಳು ಮೇಲಿಂದ ಮೇಲೆ ಪಾಲಕರು ಹಾಗೂ ವಿದ್ಯಾರ್ಥಿಗಳು ಅರಿತಿದ್ದರಿಂದ ಅನೇಕ ಬದಲಾವಣೆಗಳು ಕಂಡುಬರುತ್ತಿವೆ. ಈ ದಿಶೆಯಿಂದ ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ತಡೆಯಲು ಪಾಲಕರು, ಸಮಾಜ ಹಾಗೂ ಆರೋಗ್ಯ ಇಲಾಖೆ ಕ್ರಮಜರುಗಿಸುತ್ತಿರುವುದು ಕೂಡಾ ಶ್ಲಾಘನೀಯವಾಗಿದೆ ಎಂದರು.
ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಮಾತನಾಡಿ ಹಿಂದಿನ ಜೀವನ ಶೈಲಿಗಿಂತ ಇಂದಿನ ಜೀವನ ಶೈಲಿ ಹೆಚ್ಚು ವೇಗದಿಂದ ಕೂಡಿರುವುದರಿಂದ ಪ್ರತಿಯೊಬ್ಬ ವ್ಯಕ್ತಿ ಸಮಯಕ್ಕೆ ಸರಿಯಾಗಿ ಉತ್ತಮ ಪೌಷ್ಠಿಕ ಅಂಶಗಳ ಕೊರತೆಯ ಆಹಾರದಿಂದಾಗಿ ಹಾಗೂ ಸರಿಯಾದ ಸಮಯಕ್ಕೆ ವಿಶ್ರಾಂತಿ ಪಡೆಯದೇ ಕಾರ್ಯದ ಒತ್ತಡಕ್ಕೆ ಒಳಗಾಗಿ ಮತ್ತು ಅವಸರದ ತೀಮರ್ಾಣದಿಂದ ಅಶಕ್ತರಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದಕ್ಕೆಲ್ಲ ನುರಿತ ತಜ್ಞ ವೈದ್ಯರಿಂದ ಆರೋಗ್ಯ ಇಲಾಖೆಯಿಂದ ಸಂಪೂರ್ಣವಾಗಿ ಖಿನ್ನತೆ ದೂರು ಮಾಡಲು ಚಿಕಿತ್ಸೆ ದೊರೆಯುತ್ತಿದ್ದು, ಸಾರ್ವಜನಿಕರು ತಮ್ಮ ಗಮನಕ್ಕೆ ಬಂದ ಇಂತಹ ಕಾಯಿಲೆಗೆ ತುತ್ತಾದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಮನೋರೋಗ ತಜ್ಞ ಡಾ.ವೀರಣ್ಣ ಪಾಟೀಲ ಮಾತನಾಡಿ ಹಿಂದಿನಂತೆ ಇಂದಿನ ಶಾಲಾ ವಾತಾವರಣ ಇಲ್ಲದಂತಾಗಿದೆ. ಇಂದಿನ ಮಕ್ಕಳು ಬಹುಬೇಗ ಆತ್ಮಹತ್ಯೆಗಳಂತಹ ಕ್ರಿಯೆಗೆ ಮುಂದಾಗುತ್ತಿದ್ದಾರೆ. ಜಗತ್ತಿನಲ್ಲಿ ಪ್ರತಿ 40 ಸೆಕೆಂಡಿಗೆ ಒಂದರಂತೆ ಆತ್ಮಹತ್ಯೆಗಳು ನಡೆಯುತ್ತಿವೆ. ಇಂತಹ ಆತ್ಮಹತ್ಯೆಗಳನ್ನು ತಡೆಯಲು ಮಕ್ಕಳು ಮಾನಸಿಕವಾಗಿ ಸದೃಢರಾಗಬೇಕು. ಆತ್ಮಹತ್ಯೆ ಎಂಬುದು ಜೀವನಕ್ಕೆ ಕೊನೆಯಲ್ಲ. ಜೀವನ ಇರುವುದು ಜೀವನದಲ್ಲಿ ಬರುವ ಎಲ್ಲ ಸಮಸ್ಯೆಗಳ ವಿರುದ್ದ ಹೋರಾಡಿ ಬದುಕುವುದನ್ನು ಕಲಿಯಬೇಕೆಂದು ವಿದ್ಯಾಥರ್ಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಹೇಮಲತಾ ಹುಲ್ಲೂರ, ಸಜ್ಜಲಶ್ರೀ ನಸರ್ಿಂಗ್ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದಿಲೀಪ ನಾಟೇಕಾರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಕುಸುಮಾ ಮಾಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.