ವಿವಿಧ ಇಲಾಖೆಯ ನಿವೃತ್ತ ಮಹಿಳಾ ನೌಕರರಿಗೆ ಸನ್ಮಾನ

ವಿವಿಧ ಇಲಾಖೆಯ ನಿವೃತ್ತ ಮಹಿಳಾ ನೌಕರರಿಗೆ ಸನ್ಮಾನ Tributes to retired women employees of various departments

ಲೋಕದರ್ಶನ ವರದಿ

ಕಂಪ್ಲಿ 09:   ಪಟ್ಟಣದ ಕಂಪ್ಲಿ ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಿವೃತ್ತ ಮಹಿಳಾ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಂಪ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಂ.ಎಸ್‌.ಗಂಗಾಧರಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೌಕರರಿಗೆ ನಿವೃತ್ತಿ ಎನ್ನುವುದು ಸರ್ವೇ ಸಾಮಾನ್ಯವಾಗಿದೆ.

ಆದರೆ, ನಿವೃತ್ತ ನೌಕರರು ತಮ್ಮ ನಿವೃತ್ತಿಯ ನಂತರ ತಮ್ಮ ಸುಧೀರ್ಘ ಅನುಭವವನ್ನು ತಮ್ಮ ಕೆಳಗಿನ ನೌಕರರಿಗೆ ಮಾರ್ಗದರ್ಶನ ಮಾಡಬೇಕು. ಮನೆಯಲ್ಲಿ ಚಿಕ್ಕವರಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಆರೋಗ್ಯವಂತ ಜೀವನ ನಡೆಸಬೇಕು. ಜೀವನದಲ್ಲಿ ಕೀಳೀರಿಮೆಯನ್ನು ಬೆಳೆಸಿಕೊಳ್ಳಬಾರದು ಎಂದು ತಿಳಿಸಿದರು.ನಂತರ ಅನೇಕ ನಿವೃತ್ತ ಶಿಕ್ಷಕರು ಮತ್ತು ವಿವಿಧ ಇಲಾಖೆಗಳ ನೌಕರರು ಮಾತನಾಡಿದರು.

ಕೆಲವು ಮಹಿಳಾ ಶಿಕ್ಷಕರು ತಮ್ಮ ಅನಿಸಿಕೆೆಗಳನ್ನು ಹಂಚಿಕೊಂಡರು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಮಹಿಳಾ ನೌಕರರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿದ್ದ ನಿವೃತ್ತ ಮುಖ್ಯಶಿಕ್ಷಕ ವಿ.ಫಕ್ಕಿರ​‍್ಪ ದಂಪತಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಫಕ್ಕೀರ​‍್ಪ ವಹಿಸಿದ್ದರೆ, ಕಾರ್ಯಕ್ರಮದಲ್ಲಿ ಎಚ್‌.ಹೊನ್ನೂರಮ್ಮ, ಜಿ.ಕಮಲಮ್ಮ, ಚನ್ನಬಸಪ್ಪ, ಎಸ್‌.ಜಿ.ಚಿತ್ರಗಾರ, ವಿ.ಎನ್‌.ರೆಡ್ಡಿ, ಬಿ.ವೀರೇಶಪ್ಪ, ಎ.ಗುರುಮೂರ್ತಿ, ವಿ.ರಾಜೇಶ್ವರಿ, ಜಿ.ಗಂಗಾಧರಗೌಡ, ಎ.ವೆಂಕಟೇಶ್, ನಾಗರಾಜ ದಬಾಡಿ, ಕೆ.ನರಸಿಂಹಲು, ಎನ್‌.ನಜೀರ್ ಅಹ್ಮದ್, ಎಸ್‌.ವೀರಭದ್ರ​‍್ಪ, ಎಂ.ನಾಗೇಶ್ವರರಾವು, ಎಚ್‌.ವಸಂತರಾವ್, ಪಿ.ಸೋಮಪ್ಪ., ಬಿ.ವೀರಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.