ಕ್ವಾರಂಟೈನ್ ನಲ್ಲಿದ್ದ ರೋಗಿ ಕೋವಿಡ್ ಆಸ್ಪತ್ರೆಯಲ್ಲೇ ಆತ್ಮಹತ್ಯೆ

ಚಿಕ್ಕಮಗಳೂರು, ಮೇ 24, ಚಿಕ್ಕಮಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದ  ರೋಗಿಯೊಬ್ಬರು ಕೋವಿಡ್ ಆಸ್ಪತ್ರೆಯಲ್ಲೇ     ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ. ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಆತ್ಮಹತ್ಯೆ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು  ಆತನನ್ನು ಎನ್ ಆರ್ ಪುರದ   47 ವರ್ಷದ ವ್ಯಕ್ತಿ ಎಂದೂ   ಗುರುತಿಸಲಾಗಿದೆ.  ಪಾಸಿಟಿವ್ ಇದ್ದ 9 ಮಂದಿಯ ಜೊತೆಗೆ  ಸಂಪರ್ಕ ಇದ್ದ ಹಿನ್ನಲೆಯಲ್ಲಿ ಅವರನ್ನು  4 ದಿನದ ಹಿಂದೆ ಕ್ವಾರಂಟೈನ್ ಮಾಡಲಾಗಿತ್ತು ಈ ಬಗ್ಗೆ  ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ವಿಚಿತ್ರ ಘಟನೆ:  ಕರೋನಾ ಬರದಂತೆ  ತಡೆಯಲು  ತಂದೆ ಮಗ. ಆರೋಗ್ಯ ವರ್ಧಕ ಔಷಧಿ ಕುಡಿದ ಅಪರೂಪದ ಘಟನೆ  ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಾಮನ ಬೈಲಿನಲ್ಲಿ ಜರುಗಿದೆ.  ಇದರ ಪರಿಣಾಮ  ಮಗ ಮೃತಪಟ್ಟಿದ್ದು  ತಂದೆ ಆರೋಗ್ಯ ಸ್ಥಿತಿ  ಬಹಳ  ಗಂಬೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಂದು  ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ.