ಬಟ್ಟೆ ಅಂಗಡಿಗೆ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಬಟ್ಟೆ ಬೆಂಕಿಗಾಹುತಿ

ಕೊಳ್ಳೇಗಾಲ,  ಜೂ.7 ಬಟ್ಟೆ ಅಂಗಡಿಯೊಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು ಭಸ್ಮವಾಗಿರುವ ಘಟನೆ ಇಲ್ಲಿನ  ಜಯ್​​ ಇನ್ಸ್​​ಟ್ಯೂಟ್ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.ದಕ್ಷಿಣ ಬಡವಾಣೆಯ ಜಯ್​​ ಇನ್ಸ್​​ಟ್ಯೂಟ್ ರಸ್ತೆಯಲ್ಲಿನ ಮೀನಾಕ್ಷಿ ಟೆಕ್ಸ್​​ಟೆಲ್ಸ್ ನಲ್ಲಿ ರಾತ್ರಿ ಸುಮಾರು  9.45ರ ವೇಳೆ ಅಂಗಡಿ ಮಾಲೀಕ ಪುನಮ್ ಸಿಂಗ್ ವ್ಯಾಪಾರ ಮುಗಿಸಿ, ಅಂಗಡಿ ಬಂದ್ ಮಾಡುವ  ವೇಳೆ ಒಳಗಡೆಯಿಂದ ಭಾರಿ ಶಬ್ಧದೊಂದಿಗೆ, ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.ಅಂಗಡಿ‌  ಬಂದ್ ಮಾಡುವ ವೇಳೆ ಬಾಗಿಲು ಸಿಡಿದು ಬೆಂಕಿ ಕೆನ್ನಾಲಿಗೆ ಹೊರಗೆ ಬಂದ ಪರಿಣಾಮ ಅಂಗಡಿ  ಮಾಲೀಕ ಪುನಮ್ ಸಿಂಗ್ ತೆಲೆಗೆ ಪೆಟ್ಟಾಗಿದ್ದು ಇಲ್ಲಿನ ಖಾಸಗಿ ಆಸ್ಪತ್ರೆಗೆ  ದಾಖಲಿಸಲಾಗಿದೆ.

ನಂತರ ಸ್ಥಳಕಾಗಮಿಸಿದ ಅಗ್ನಿ ಶಾಮಕ‌ ದಳ ಸಿಬ್ಬಂದಿಗಳು ಹೊತ್ತಿ  ಹುರಿಯುತ್ತಿದ ಬೆಂಕಿ ನಂದಿಸಿದ್ದು. ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಭೇಟಿ‌ ನೀಡಿ ಸ್ಥಳ  ಪರಿಶೀಲನೆ ನಡೆಸಿದ್ದಾರೆ.ಅಂಗಡಿಯಲ್ಲಿದ್ದ  ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ಆದರೆ ಆಕಸ್ಮಿಕ ಬೆಂಕಿ ಹೊತ್ತಲು  ವಿದ್ಯುತ್ ಶಾರ್ಕ್ ಸರ್ಕ್ಯೂಟ್ ಕಾರಣವೋ ? ಅಥವಾ ಬೇರೆ ಕಾರಣ ಇರಬಹುದೋ ಎಂಬುದು ಇಲ್ಲಿಯವರೆಗೆ ತಿಳಿದು  ಬಂದಿಲ್ಲ.ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.