ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಧಿಕಾರಿಗಳಿಂದ ಸನ್ಮಾನ
ಹೂವಿನ ಹಡಗಲಿ 04: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಂದಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂಗೀತಾ ಪಾಟೀಲ್ 615(98.4)ಅಂಕಿತಾ 613(98.08) ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಸಾಧಕರಾಗಿ ಹೊರಹೊಮ್ಮಿದ್ದಾರೆ. ಇಬ್ಬರೂ ವಿದ್ಯಾರ್ಥಿನಿಯರು ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ಯಾವುದೇ ಕೋಚಿಂಗ್ ಸೆಂಟರ್‌ನ ಸಹಾಯ ಇಲ್ಲದೆ ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ನೆರವಿನಿಂದ ಉನ್ನತ ಮಟ್ಟದ ಸಾಧನೆ ಸಾಧ್ಯ ಎಂದು ತೋರಿಸಿದ್ದಾರೆ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಮನೆಗೆ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ಭೇಟಿ ನೀಡಿ ಗೌರವ ಸನ್ಮಾನ ನೆರವೇರಿಸಿದರು. 10,000 ಸಾವಿರ ನಗದು ಬಹುಮಾನ ಶಾಲೆಯ ದೈಹಿಕ ಶಿಕ್ಷಕರು ತಾಲೂಕು ಗ್ರೇಡ್ 1 ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಜೆ ಪ್ರಸನ್ನ ಕುಮಾರ್ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಅವರ ತಾಯಿ ಅಮೃತಾ ಬಾಯಿ ಸ್ಮರಣಾರ್ಥ 615 ಅಂಕ ಪಡೆದ ಸಂಗೀತಾ ಪಾಟೀಲ್ ರವರಿಗೆ 10,000 ರೂಪಾಯಿ ನಗದು ಬಹುಮಾನ ನೀಡಿ ಬೆಂಬಲ ಪ್ರೋತ್ಸಾಹ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಸಹಾಯ ಕಲ್ಪಿಸಿದ್ದಾರೆ.ಅಭಿನಂದನೆ: ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಮುಖ್ಯ ಗುರುಗಳಾದ ಹನಸಿ ಮಂಗಳಾ ಶಿಕ್ಷಕರಾದ ಬಿ ಮಲ್ಲಿಕಾರ್ಜುನ ಲಕ್ಷ್ಮಿದೇವಿ ಪಿ ಎ, ಶಾಂತಾ, ಷಡಕ್ಷರಿ, ಬಿ ಎಂ ರುದ್ರಯ್ಯ,ಎಂ ಬಸವರಾಜ, ವಿಶ್ವನಾಥ,ಜೆ ಪ್ರಸನ್ನ ಕುಮಾರ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.