ಪರೀಕ್ಷೆ ಮುಂದೂಡಿರುವುದಕ್ಕೆ ವಿದ್ಯಾರ್ಥಿಗಳು ಹತಾಶರಾಗಬಾರದು; ಶಿಕ್ಷಣ ಸಚಿವ ಸುರೇಶ್ ಕುಮಾರ್

ಬೆಂಗಳೂರು, ಏ ೨, ಪರೀಕ್ಷೆಗಳನ್ನು   ಮುಂದೂಡಿರುವುದಕ್ಕೆ   ವಿದ್ಯಾರ್ಥಿಗಳು ಹತಾಶರಾಗಬಾರದು, ಏಪ್ರಿಲ್ ೧೪ರ ನಂತರ   ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯ  ದಿನಾಂಕಗಳನ್ನು  ಪ್ರಕಟಿಸಲಾಗುವುದು  ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್  ಭರವಸೆ ನೀಡಿದ್ದಾರೆ.ಈ ಕುರಿತಂತೆ ಸಾಮಾಜಿಕ ಮಾಧ್ಯಮ ಫೇಸ್ ಬುಕ್  ಲೈವ್ ನಲ್ಲಿ  ಮಾತನಾಡಿರುವ  ಶಿಕ್ಷಣ ಸಚಿವರು.  ವಿದ್ಯಾರ್ಥಿಗಳು , ಪೋಷಕರು  ಗೊಂದಲ, ಭಯ ಭೀತಿಗೊಳಗಾಗುವ  ಅವಶ್ಯಕತೆಯಿಲ್ಲ.  ಪರೀಕ್ಷೆ ಇಲ್ಲ ವಿದ್ಯಾರ್ಥಿಗಳು  ಸಮಯ  ವ್ಯರ್ಥಮಾಡದೆ ಮನೆಯಲ್ಲಿಯೇ ಕುಳಿತುಕೊಂಡು  ಪರೀಕ್ಷಾ  ಸಿದ್ದತೆ ನಡೆಸುವಂತೆ ಸಚಿವ ಸುರೇಶ್ ಕುಮಾರ್  ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಪರಿಸ್ಥಿತಿ ನೋಡಿಕೊಂಡು ಏಪ್ರಿಲ್ ೧೪ ರ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯ   ಹೊಸ ವೇಳಾಪಟ್ಟಿ  ಪ್ರಕಟಿಸಲಾಗುವುದು   ಎಂದು  ಸಚಿವರು  ಹೇಳಿದ್ದಾರೆ.