ವಿದ್ಯಾರ್ಥಿಗಳು ವಿವೇಕಾನಂದರ ತತ್ವ, ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು: ನಾಯಕ

Students should imbibe the philosophy and ideals of Vivekananda: Leader

ವಿದ್ಯಾರ್ಥಿಗಳು ವಿವೇಕಾನಂದರ ತತ್ವ, ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು: ನಾಯಕ 

ರಾಣಿಬೆನ್ನೂರ 21: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ತತ್ವ, ಆದರ್ಶ ಚಿಂತನೆಗಳನ್ನು ಅಳವಡಿಸಿಕೊಂಡು, ಭಾರತೀಯ ಪರಂಪರೆಯನ್ನು ಮೈಗೂಡಿಸಿಕೊಳ್ಳಬೇಕು. ಸಾಂಸ್ಕೃತಿಕ ಸ್ಪರ್ಧೆಗಳು ಮನರಂಜನೆಗೆ ಮಾತ್ರವಲ್ಲ ಅದು ನಮ್ಮ ವ್ಯಕ್ತಿತ್ವ ಬೆಳವಣಿಗಗೆ ಪೂರಕವಾದ ಕೌಶಲ್ಯಗಳನ್ನು ಅಭಿವೃದ್ದಿಪಡಿಸುವುದರ ಜೊತೆಗೆ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಜೀವನ ನಡೆಸಲು ಸಾಧ್ಯ ಎಂದು ಪ್ರಾಚಾರ್ಯ ಪ್ರೊ ನಾರಾಯಣ ನಾಯಕ ಎ ಹೇಳಿದರು.  

  ನಗರದ ರಾಜ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 162 ನೇ ಜಯಂತಿ ಅಂಗವಾಗಿ ಯುವ ಜನ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಹಾವೇರಿ ಹಾಗೂ ಎನ್‌.ಎಸ್‌.ಎಸ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವ ಸಮಾರೋಪ ಸಮಾರಂಭಲ್ಲಿ ಅವರು ಮಾತನಾಡಿದರು.  

   ಸಂಯೋಜಕ ಹೇಮಗಿರಿ ಅಂಗಡಿ, ಪ್ರೊ. ರೇಖಾ ಶಿಡೇನೂರ, ಪ್ರೊ. ಶೋಭಾ ಡೊಡ್ಡನಾಗಳ್ಳಿ,  ಪ್ರೊ. ವಾಣಿಶ್ರೀ ಪಾಟೀಲ,  ಪ್ರೊ. ಮಂಜಪ್ಪ ಸಿ.ಎಸ್,  ಪ್ರೊ. ಭೀಮಾರತಿ ತೀರ್ಥ,. ಪ್ರೊ. ಕವಿತಾ ಗಡ್ಡದಗೂಳಿ, ಪ್ರೊ. ವೀರೇಶ ಕುರಹಟ್ಟಿ, ಪ್ರೊ. ಕೃಷ್ಣ ಎಲ್‌ಹೆಚ್ ಇದ್ದರು. 

ಫೋಟೊ:21ಆರ್‌ಎನ್‌ಆರ್09ರಾಣಿಬೆನ್ನೂರ:ನಗರದ ರಾಜರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ 162 ನೇ ಜಯಂತಿ ಅಂಗವಾಗಿ ಯುವ ಜನೋತ್ಸವ ಸಮಾರೋಪ ಸಮಾರಂಭಲ್ಲಿ ಪ್ರಾಚಾರ್ಯ ಪ್ರೊ ನಾರಾಯಣ ನಾಯಕ ಮಾತನಾಡಿದರು.