ವಿದ್ಯಾಥರ್ಿಗಳಿಗೆ ಪಾಠದ ಜೊತೆ ಸಾಮಾನ್ಯ ಜ್ಞಾನ ಬೆಳೆಸಬೇಕು : ಸಚಿವ ದೇಶಪಾಂಡೆ

ಲೋಕದರ್ಶನ ವರದಿ 

ಅಂಕೋಲಾ,27 : ವಿದ್ಯಾಥರ್ಿಗಳಿಗೆ ಪಾಠದ ಜೊತೆ ಜೊತೆಯಲ್ಲಿಯೇ ಸಾಮಾನ್ಯ ಜ್ಞಾನ ಬೆಳಸಬೇಕು. ಕ್ರೀಡೆಯಲ್ಲಿ  ಭಾಗವಹಿಸುವ ಮೂಲಕ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಠಿಸುವ ಜವಾಬ್ಧಾರಿ ಪ್ರತಿಯೊಬ್ಬ ಪಾಲಕರ ಹಾಗೂ ಶಿಕ್ಷಕರ ಮೇಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. 

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬುಧವಾರ ತಾ.ಪಂ. ಸಾಮಥ್ಯ ಸೌಧ ಆವಾರಣದಲ್ಲಿ ನೂತನವಾಗಿ ನಿಮರ್ಿಸಿದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಕರ್ಾರ ಹಿಂದುಳಿದ ವರ್ಗಗಳ ಬಡವರ ಕಾಳಜಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಈಗಾಗಲೇ ಜಿಲ್ಲೆಯಲ್ಲಿ ಇಂತಹ ನೂರಕ್ಕೂ ಹೆಚ್ಚು ವಸತಿ ನಿಲಯಗಳಿವೆ. ಅಂಕೋಲಾದಲ್ಲಿ ಏಳು ವಿವಿಧ ಸ್ತರದ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಯ ಗುಣಮಟ್ಟ ಕಾದುಕೊಳ್ಳಲು ಅಧಿಕಾರಿ ಗಳು ಮತ್ತು ಜನಪ್ರತಿನಿಧಿಗಳು ಜಾಗೃತಿ ವಹಿಸಬೇಕೆಂದು ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ ಶಿಕ್ಷಣದ ಉನ್ನತಿ ಕರಣಕ್ಕೆ ಅಂದಿನ ಪ್ರಧಾನಿ ವಾಜಪೇಯಿ ಸರ್ವ ಶಿಕ್ಷ ಅಭಿಯಾನದಲ್ಲಿ ಹಲವಾರು ಕಟ್ಟಡಗಳ ನಿಮರ್ಾಣಕ್ಕೆ ಅನುದಾನ ಒದಗಿಸಿ ಶೈಕ್ಷಣಿಕ ಉತ್ತೇಜನ ನೀಡಿದರು. ಅಂತೆಯೇ ಈ ಹಿಂದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವಧಿ ಯಲ್ಲಿ ಶಾಲಾ ಮಕ್ಕಳಿಗಾಗಿ ಬಿಸಿಯೂಟ ಜಾರಿಗೊಳಿಸಿದ್ದು, ಶ್ಲಾಘನೀಯ ಎಂದರು. ಮುಂದುವರಿದು  ಮಾತನಾಡಿದ ಅವರು ಈ ಹಿಂದಿನ ಸಕರ್ಾರದ ಅವಧಿಯಲ್ಲಿ ಗಂಗಾವಳಿ-ಮಂಜಗುಣಿ ಮುಖ್ಯ ಸೇತುವಿಗೆ  30 ಕೋಟಿ ರೂ. ಅನುದಾನ ಮಂಜೂರಿಯಾಗಿ, ಅಡಿಗಲ್ಲು ಸಮಾರಂಭ ಏರ್ಪಡಿಸಲಾಗಿತ್ತಾದರೂ ಕಾಮ ಗಾರಿ ಆರಂಭವಾಗದಿರುವುದು ನಿರಾಶೆಯಾಗಿದೆ. ಕೂಡಲೇ ಕಾಮಗಾರಿ ಚಾಲನೆಗೆ ಸೂಕ್ತ ಕ್ರಮಕೈಗೊ ಳ್ಳುವಂತೆ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ.ದೇಶಪಾಂಡೆ ಮತ್ತು ಜಿಲ್ಲಾಧಿಕಾರಿ ಎಸ್.ಎಸ್.ನಕುಲ ಅವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ಎಂದರು. 

ಜಿಲ್ಲಾಧಿಕಾರಿ ಎಸ್.ಎಸ್.ನಕುಲ, ಸಹಾಯಕ ಆಯುಕ್ತೆ ಪ್ರೀತಿ ಗೆಹ್ಲೋಟ್, ಉತ್ತರ ಕನ್ನಡ ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೊಗೇರ, ಸದಸ್ಯರಾದ ಜಗದೀಶ ನಾಯಕ ಮೊಗಟಾ, ಸರಳ ದೀಕ್ಷಿತ ನಾಯಕ, ತಾ.ಪಂ. ಅಧ್ಯಕ್ಷೆ ಸುಜಾತ ಟಿ. ಗಾಂವಕರ, ಉಪಾಧ್ಯಕ್ಷೆ ತುಳಸಿ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವೀಣಾ ಜಿ.ನಾಯಕ ಪ್ರಾಥರ್ಿಸಿದರು. ತಾಲ್ಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಬಿಂದಿಯಾ ನಾಯಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಥರ್ಿಗಳು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸತೀಶ ಕೆ. ಸೈಲ್, ಜಿ.ಪ.ಮಾಜಿ ಅಧ್ಯಕ್ಷ ರಮಾನಂದ ಬಿ. ನಾಯಕ, ಜಿ.ಪಂ. ಮಾಜಿ ಸದಸ್ಯರಾದ ಉದಯ ಡಿ. ನಾಯ್ಕ, ವಿನೋದ ಬಿ. ನಾಯಕ, ಪುರಸಭೆಯ ನೂತನ ಸದಸ್ಯರಾದ ಕಾತರ್ಿಕ ಎಸ್.ನಾಯ್ಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.