ಲೋಕದರ್ಶನ ವರದಿ
ಬೆಳಗಾವಿ ೦೨: ವಿದ್ಯಾರ್ಥಿಗಳು ಕರ್ತವ್ಯ, ಸಮಯಪ್ರಜ್ಞೆ ಹಾಗೂ ಪ್ರಯತ್ನಶೀಲತೆಯನ್ನು ಅಳವಡಿಸಿಕೊಂಡು ಕಷ್ಟಪಟ್ಟು ಓದಿ, ಸಾಧನೆ ಮಾಡಿ ಉತ್ತಮ ಅಂಕ ಗಳಿಸಿ, ತಂದೆ- ತಾಯಿಗಳ ಆಶೆ ಈಡೇರಿಸಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಬೇಕೆಂದು ಬೈಲಹೊಂಗಲದ ಸರಕಾರಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಪುಂಡಲೀಕ ಎಸ್. ಕಾಂಬಳೆ ಕರೆ ನೀಡಿದರು.
ನಗರದ ಸುರೇಶ ಅಂಗಡಿ ಶಿಕ್ಷಣ ಸಂಸ್ಥೆಯ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ, ದಿ. 30ರಂದು ನಡೆದ 2019-20 ನೇ ಸಾಲಿನ ಪದವಿಪೂರ್ವ ವಿಭಾಗದ ವಾಷರ್ಿಕ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಚಿಂತೆಗಿಂತ ಚಿಂತನೆಯನ್ನು ಮಾಡಬೇಕು. ಗುರಿ ಒಳ್ಳೆಯದಿದ್ರೆ ಜೀವನವೂ ಒಳ್ಳೆಯದಾಗುತ್ತದೆ. ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಹಾಳು ಮಾಡದೇ ಪಠ್ಯೇತರ ಹಾಗೂ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಹಾಗೂ ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಒಳ್ಳೆಯ ವ್ಯಕ್ತಿತ್ವ ಹೊಂದಬೇಕೆಂದು ಹೇಳಿದರು.
ಕಾರ್ಯಕ್ರಮವು ಪ್ರಿಯಾಂಕ ಹಾಗೂ ಸುಜಾತಾ ಅವರ ಸ್ವಾಗತ ಗೀತೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಂಗಡಿ ಕಾಲೇಜಿನ ಪ್ರಾಚಾರ್ಯ ಪ್ರೊ. ಸಂಗೀತಾ ದೇಸಾಯಿ ವಾಷರ್ಿಕ ವರದಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶೈಕ್ಷಣಿಕ, ಕ್ರೀಡಾ ಸ್ಪಧರ್ೆ ಹಾಗೂ ಪರೀಕ್ಷೆಗಳಲ್ಲಿ ಅಗ್ರಶ್ರೇಣಿಯಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಪ್ರಮಾಣಪತ್ರ, ಟ್ರೋಪಿ, ಪಾರಿತೋಷಕಗಳನ್ನು ವಿತರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕಿ ಪ್ರೊ. ಭಾರತಿ ಎಸ್.ಬಿ., ಕಾಲೇಜಿನ ಕ್ರೀಡಾಕೂಟಗಳ ಸಂಯೋಜಕ ಡಾ. ರವೀಂದ್ರ ಸತ್ತಿಗೇರಿ, ದೈಹಿಕ ನಿದರ್ೆಶಕ ವಿಶಾಂತ ದಾಮೋಣೆ, ಕಾಲೇಜಿನ ಪ್ರಧಾನ ಕಾರ್ಯದಶರ್ಿ ಕು. ದರ್ಶನ ರಾಠೋಡ, ಕಾಲೇಜಿನ ಮಹಿಳೆಯರ ಪ್ರತಿನಿಧಿ ಕವಿತಾ ಹೊಸಮನಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಅಂಗಡಿ ವಾಣಿಜ್ಯ ಮತ್ತ್ತು ವಿಜ್ಞಾನ ಮಹಾವಿದ್ಯಾಲಯದ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ಎಲ್ಲ ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಡಾ. ಶಣ್ಮೂಕ ಕುಚಬಾಳ ಸ್ವಾಗತಿಸಿದರು. ಪ್ರೊ. ರುದ್ರೇಶ ಕಿಲಾರಿ ವಂದಿಸಿದರು. ಸ್ವೀಟಿ ಪಾಠಕ ನಿರೂಪಿಸಿದರು.