ರಾಣೇಬೆನ್ನೂರು : ಜ 20 ಭಾರತೀಯ ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು ಮತ್ತು ವಿಶೇಷ ಹಬ್ಬಗಳು ಭಾವೈಕ್ಯತೆ ಸಂಕೇತವಾಗಿ ಅಚಾನೋಚವಾಗಿ ಸಾಗಿ ಬಂದಿರುವುದು ಇತಿಹಾಸ. ಅಂತಹ ಪರಂಪರೆಯಲ್ಲಿ ಒಂದಾದ ಹೊಸ ವರ್ಷದ ಆರಂಭದಲ್ಲಿ ಬರುವ ಮಕರ ಸಂಕ್ರಾಂತಿಯು ಹೊಸ ಚೈತನ್ಯವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇಂದಿನ ದಿನಮಾನಗಳಲ್ಲಿ ಆಧುನಿಕತೆ ಮತ್ತು ಪಾಚ್ಚಿಮಾತ್ಯ ಸಂಸ್ಕೃತಿಯ ಭರಾಟೆಯಲ್ಲಿ ನಮ್ಮ ನಿಜ ಸಂಸ್ಕೃತಿಯ ಹಬ್ಬಗಳು ನೇಪಥಕ್ಕೆ ಸರಿಯುವಂತಾಗಿದೆ. ಇತಿಹಾಸದ ಪರಿಕಲ್ಪನೆಯಲ್ಲಿ ನಮ್ಮ ನೈಜತೆಯ, ನೆಲ, ಜಲ, ಭಾಷೆ, ಮತ್ತು ಜನಪದ ಸಂಸ್ಕೃತಿಯ ಇಂತಹ ಸಂಕ್ರಾಂತಿ ಭವಿಷ್ಯದ ಮಕ್ಕಳಿಗೆ ಪರಿಚಯಿಸುವ ಕಾರ್ಯವು ಶಾಲಾ-ಕಾಲೇಜುಗಳಲ್ಲಿ ನಡೆಯಬೇಕಾಗಿದೆ.
ಸಂಸ್ಕಾರ, ಸಂಸ್ಕೃತಿ, ನೈಜ ಮಕರ ಸಂಕ್ರಾಂತಿ ಆಚರಣೆ, ಹೇಗಿತ್ತು?. ಎನ್ನುವ ಪರಿ ಕಲ್ಪನೆಯಲ್ಲಿ, ಇಲ್ಲಿನ ಹುಣಸಿಕಟ್ಟಿ ರಸ್ತೆಯ, ದೆಹಲಿ ಸೆಂಟ್ರಲ್ (ಸಿಬಿಎಸ್‌ಇ )ಸ್ಕೂಲ್ ನಲ್ಲಿ ಇತ್ತೀಚೆಗೆ ಮಕರ ಸಂಕ್ರಾಂತಿಯ ದಿನದಂದು ಅನಾವರಣಗೊಂಡು ಮಕ್ಕಳಲ್ಲಿ ಮತ್ತು ಪಾಲಕರಲ್ಲಿ ಅರಿವು ಮೂಡಿಸಿ, ಹೊಸ ಭಾಷ್ಯ ಬರೆಯುವಲ್ಲಿ ಸಫಲವಾಯಿತು. ಮಕರ ಸಂಕ್ರಾಂತಿ ಮುನ್ನಾ ದಿನವೇ, ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಪ್ರಾಧ್ಯಾಪಕ ವರ್ಗವು ಅತ್ಯಂತ ಉತ್ಸಾಹದಿಂದ ಮಕ್ಕಳಿಗೆ ಪಾಟ ಬೋಧನೆ ಮಾಡಿ, ಸಂಕ್ರಾಂತಿ ದಿವಸ ಪ್ರದರ್ಶನಕ್ಕೆ ಸಿದ್ಧತೆಗೊಳಿಸುವಲ್ಲಿ ಯಶಸ್ವಿ ಕಂಡಿದ್ದರು.
ವರ್ಷದ ಸುಗ್ಗಿಗೆ ಭಕ್ತಿ ಭಾವದಿಂದ ರಾಶಿ ಮಾಡಿ ಅದಕ್ಕೆ ಪೂಜೆ ಸಲ್ಲಿಸಿ, ವಿವಿಧ ಬಗೆಯ ಭಕ್ಷ, ಬೋಜನ ಸ್ವೀಕರಿಸಿ, ಶಾಲೆಯ ಎಲ್ಲ ಮಕ್ಕಳು ಸಂಭ್ರಮಿಸಿದ್ದು ಭಾವೈಕ್ಯತೆಯ ಸಂಕೇತವಾಗಿತ್ತು. ರೈತರ ಜೀವ ನಾಡಿ, ಬಸವಣ್ಣ, ಅದರ ಒಡನಾಡಿ ಬಂಡಿ, ನೈಜವಾಗಿ ಮಕ್ಕಳಿಗೆ ಪರಿಚಯಿಸಿದ್ದು, ರೈತನೇ ದೇಶಕ್ಕೆ, ನಮಗೆ ಅನ್ನ ನೀಡುವ ಅನ್ನದಾತ ಎನ್ನುವ ವಾಸ್ತವಿಕ ಸತ್ಯದ ಅರಿವು ವಿದ್ಯಾರ್ಥಿಗಳಿಗಾಗಿತ್ತು.
ಶಾಲಾ ಆಡಳಿತ ಮಂಡಳಿಯ ನಿಸ್ಫಲ ಸೇವಾ ಕಾರ್ಯವು ಮಕ್ಕಳಿಗೆ ಅದ್ಭುತ ಹೊಸ ಸಂಚಲನ ಮೂಡಿಸಿದ್ಧರೇ,ಸಾರ್ವಜನಿಕರ ಮತ್ತು ಪಾಲಕರ ಪ್ರಸಂಸೆಗೆ ಪಾತ್ರವಾಗಿತ್ತು. ಉತ್ತರ ಕರ್ನಾಟಕದ ನೆಲ ಮೂಲ ಸಂಸ್ಕೃತಿಯ ಮಕರ ಸಂಕ್ರಾಂತಿಯ ಸಂಭ್ರಮೋತ್ಸವದಲ್ಲಿ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ತೊಗಟವಿರ, ಆಡಳಿತಾಧಿಕಾರಿ ಶಾಲಿನಿ ತೊಗಟವೀರ, ಪ್ರಾಚಾರ್ಯ ಡಾ, ಮಹಾಂತೇಶ್ ಕಮ್ಮಾರ, ಚೈತ್ರಾ ಆರ್. ಕೆ. ಸುನೀತಾ ಯಾದವಾಡ, ಪ್ರತಿಭಾ ಬಿ.ಕೆ. ಸರೋಜಾ ಕುಬಸದ, ಶಿಲ್ಪಾ ಗಾಣಿಗೇರ, ಪ್ರಪುಲ್ಲಾ ಬಿ.ಸಿ. ಶಾಂತಾ ಬೆಳ್ಳೋಡಿ,ಚೈತ್ರಾ ಜಾದವ್, ಚೈತ್ರಾ ಹಿರೇಮಠ ಸೇರಿದಂತೆ ಶಾಲೆಯ ಮತ್ತಿತರ ಶಿಕ್ಷಕರು ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿದ್ದರು. ಜನಪದ ಸಂಸ್ಕೃತಿ ಪ್ರತಿಪಂಬಿತ ಮಕರ ಸಂಕ್ರಾಂತಿ ಹಬ್ಬವು ಮಕ್ಕಳ ಪಾಲಕರ ಗಮನ ಸೆಳೆದವು.