ನವದೆಹಲಿ 21: ಬಾಲಿವುಡ್ ನಟ ಸೈಫ್ ಅಲಿ ಖಾನ್ ದರೋಡೆಕೋರನಿಂದ ತಮ್ಮ ಕುಟುಂಬವನ್ನು ರಕ್ಷಿಸಲು ತೋರಿದ ಜಾಣ್ಮೆ ಹಾಗು ಧೈರ್ಯವನ್ನು ನಟ ಅಕ್ಷಯ್ ಕುಮಾರ್ ಶ್ಲಾಘಿಸಿದ್ದಾರೆ.
ಸೈಫ್ ಅಲಿಖಾನ್ ಪ್ರಾಣಾಪಯದಿಂದ ಪಾರಾಗಿರುವುದಕ್ಕೆ ಇಡೀ ಉದ್ಯಮಕ್ಕೆ ಸಂತೋಷವಾಗಿದೆ ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿದ ಅವರ ಧೈರ್ಯ ಮೆಚ್ಚಲೇಬೇಕು ಎಂದು ಅಕ್ಷಯ್ ಸೋಮವಾರ ದೆಹಲಿಯಲ್ಲಿ ತಮ್ಮ ಹೊಸ ಚಿತ್ರ ಸ್ಕೈ ಫೋರ್ಸ್‌ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಜನವರಿ 16 ರಂದು ಸೈಫ್ ಅಲಿಖಾನ್ ಅವರ ಬಾಂದ್ರಾ ಅಪಾರ್ಟ್ಮೆಂಟ್ ನಲ್ಲಿ ಕಳ್ಳತನ ಮಾಡುವ ಉದ್ದೇಶದಿಂದ ನುಗ್ಗಿದ್ದ ಆರೋಪಿ, ದಾಳಿ ನಡೆಸಿ ನಟನಿಗೆ ಆರು ಬಾರಿ ಚಾಕುವಿನಿಂದ ಇರಿದಿದ್ದ.