ಕರ್ನಾಟಕ ದಲಿತ ಸಂಘರ್ಷ ಸಮಿತಿ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿದೆ
ವಿಜಯಪುರ,21 : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಸಮಿತಿ ವಿಜಯಪುರ ದಿನಾಂಕ 23/1/2025 ರಂದು ಗುರುವಾರ ಫ್ರೀಡಂ ಪಾರ್ಕ್ ಬೆಂಗಳೂರಿನಲ್ಲಿ ನಡೆಯಲಿರುವ ಸಂವಿಧಾನ
ಇದು ನಿರ್ಣಾಯಕ ಸಮಯ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಸಂಪುಟದಿಂದ ವಜಾ ಆಗಬೇಕು ಅಂಬೇಡ್ಕರರ ಪ್ರತಿಮೆಯ ಮುಂಬಾಗ ಮಂಡಿಯೂರಿ ಕ್ಷಮೆ ಕೇಳಲೇಬೇಕು ಅಂಬೇಡ್ಕರರ ಸಂವಿಧಾನವನ್ನು ಒಪ್ಪದವರು ದೇಶ ಬಿಟ್ಟು ತೊಲಗಲಿ. ಮನುವಾದಿ ಆರ್ ಎಸ್ ಎಸ್ ಬಿಜೆಪಿಯ ಮೂಲೊತ್ಟಾಟನೆಗೆ ಸನ್ನದ್ದರಾಗೊಣ. ಸ್ವಾಭಿಮಾನಿ ದಲಿತ ಯುವ ನಾಯಕ ಪ್ರಿಯಾಂಕ ಖರ್ಗೆ ವಿರುದ್ಧದ ಬಿಜೆಪಿಯ ಪಿತೂರಿ ರಾಜಕಾರಣವನ್ನು ಹಿಮ್ಮೆಟ್ಟಿಸೊಣ. ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂದು ಭಾರತದ ರತ್ನ ಮಾತ್ರವಲ್ಲ, ವಿಶ್ವದ ರತ್ನವಾಗಿ ಹೊರಹೊಮ್ಮಿದ್ದಾರೆ. ವಿಶ್ವದ ಶೋಷಿತ ಕೆಲ ಚಳುವಳಿಗಳು ಅಂಬೇಡ್ಕರ್ ಅವರನ್ನು ತಮ್ಮ ವಿಮೋಚಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಬರಹ ಮತ್ತು ಭಾಷಣಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದಾರೆ. ಆದರೆ ಅಂಬೇಡ್ಕರ್ ಜನಿಸಿದ ಭಾರತದಲ್ಲಿ ಕೆಲವು ದುಷ್ಟ ಶಕ್ತಿಗಳು ಅವರ ಹೆಸರುಗಳನ್ನು ಹಿಡಿದು, ವ್ಯಂಗ್ಯ ಮಾಡುತ್ತಿವೆ. ಇದಕ್ಕೆ ಇತ್ತೀಚಿನ ಉದಾಹರಣೆ ಭಾರತ ಸರ್ಕಾರದ ಬಿಜೆಪಿ ಗೃಹ ಮಂತ್ರಿ ಅಮೀತ ಶಾ ಸಂಸತ್ತಿನಲ್ಲಿ ಆಡಿರುವ ಉದ್ದೇಶ ಪೂರ್ವಕ ಮಾತುಗಳಾಗಿವೆ. ಗೌರವವಾನಿತ್ವ ಪದವಿಯನ್ನು ಅಲಂಕರಿಸಿರುವ ಅಮೀತ ಶಾ ಪುಡಿ ರೌಡಿಯಂತೆ ದೇಶದ ಕೇಂದ್ರ ಸ್ಥಾನವಾದ ಸಂಸತ್ತಿನಲ್ಲಿ, ಅಂಬೇಡ್ಕರ್ ಕುರಿತು, ಆಡಿರುವ ಮಾತುಗಳು ಆತನ ವಿಷಯುಕ್ತ ಮನಸ್ಸನ್ನು ಬಹಿರಂಗ ಪಡಿಸಿದೆ.
22-01-2025 ರಂದು 4.45ಕ್ಕೆ ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲು ಮುಖಾಂತರ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯಿಂದ ಸುಮಾರು ಸಾವಿರಾರು ಸಂಖ್ಯೆಯಲ್ಲಿ ಅಂಬೇಡ್ಕರ ಅಭಿಮಾನಿಗಳು ಅನುಯಾಯಿಗಳು ಮಾನವಿಯ ಮೌಲ್ಯಗಳಲ್ಲಿ ನಂಬಿಕೆ ಇಟ್ಟವರು ಚಿಂತಕರು ಸಾಹಿತಿಗಳು ಪಾಲ್ಗೊಳ್ಳಬೆಕೆಂದು ವಿಬಾಗಿಯ ಸಂಚಾಲಕ ಸಂಜು ವೈ. ಕಂಬಾಗಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.