ಅಥಣಿ 21: ಸಾಧನೆ ಜೊತೆಗೆ ಸಾಧಿಸುವ ಛಲ ಇದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಾಧಿಸುವ ಛಲ ಒಂದಿದ್ದರೇ ಏನನ್ನಾದರೂ ಸಾಧಿಸಬಹುದು ಅನ್ನೋಕೆ ಈ ಹುಡುಗನೇ ಅಕ್ಷರಶ ಸಾಕ್ಷಿ. ಸಾಧಿಸುವ ಛಲ ಇದ್ದರೇ ಯಾವುದು ಅಸಾಧ್ಯವಲ್ಲ ಅನ್ನೋದುನ್ನ ಬಡಚಿ ಗ್ರಾಮದ ಯುವಕ ಹಂತ ಹಂತವಾಗಿ ಪ್ರೂವ್ ಮಾಡ್ತಿದ್ದಾನೆ. ನೀವ್ ನೋಡ್ತಿರೋ ಭವಿಷ್ಯದ ಈ ಸ್ಟಾರ್ ಬಡಚಿ ಗ್ರಾಮವನ್ನೆ ದೇಶಕ್ಕೆ ಪರಿಚಯಿಸಿದ ಕ್ರೀಡಾಪಟು ಹೆಸರು ಅಭಿನಂದನ್ ದೀಪಕ್ ಸೂರ್ಯವಂಶಿ.
ತಾಲೂಕಿನ ಪುಟ್ಟ ಬಡಚಿ ಗ್ರಾಮದ ಬಡ ರೈತನ ಮಗನ ಸಾಧನೆ ನಿಜಕ್ಕೂ ಗ್ರೇಟ್. ಜೀವನದಲ್ಲಿ ಹಣ ಆಸ್ತಿ ಮಾಡೋದು ಸಾಧನೆ ಅಲ್ಲ, ಕ್ರೀಡಾಪಟುವಾಗಿ, ಸತತ ಹಾಗೂ ಕಠಿಣ ಪರಿಶ್ರಮದಿಂದ ಕ್ರೀಡೆಗಳನ್ನು ಗೆದ್ದು ಬೀಗುವುದು ಸಹ ಒಂದು ರೀತಿಯ ದೊಡ್ಡ ಸಾಧನೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ಕೇವಲ 17ನೇ ಯಯಸ್ಸಿಗೆ ಹಳ್ಳಿಯಿಂದ ಡೆಲ್ಲಿವರೆಗೂ ಕಮಾಲ್ ಮಾಡಿರುವ ಯುವಕ ಅಭಿನಂದನ್ ದೀಪಕ್ ಸೂರ್ಯವಂಶಿ ಬಡಚಿ ವಿಠ್ಠಲ್ ಮಂದಿರ ಸಭಾಂಗಣದಲ್ಲಿ ಗ್ರಾಮದ ಮುಖಂಡರಿಂದ ಸತ್ಕಾರ ಸಮಾರಂಭ ನೆರವೇರಿಸಿ ಅಭಿನಂದನಿನಗೆ ಅಭಿನಂದನೆ ಸಮಾರಂಭ ಅದ್ದೂರಿ ನೆರವೇರಿಸಲಾಯಿತು.
ಅಥಣಿ ಖ್ಯಾತ ಉದ್ದೆಮಿದಾರ ಸದಾಶಿವ ಬುಟಾಳಿ, ಬಡಚಿ ಗ್ರಾಮ ಪಂಚಾಯತ ಅಧ್ಯಕ್ಷ ಭಿರ್ಪ ತುಕಾರಾಮ ಪೂಜಾರಿ, ಮಾಜಿ ತಾಲ್ಲೂಕು ಪಂಚಾಯತ ಸದಸ್ಯ ಜಯವಂತರಾವ ದೇಸಾಯಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಅಪ್ಪಾಸಾಹೇಬ ಅವತಾಡೆ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸಿದ್ದಪ್ಪ ಮುದಖನ್ನವರ, ಬಸವರಾಜ ಬುಟಾಳಿ, ಗೀರೀಶ ಬುಟಾಳಿ, ಮರಾಠಾ ಸಮಾಜದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ವಿನಾಯಕ ದೇಸಾಯಿ, ಡಾ.ಭರತ ಲೋನಾರೆ, ರವಿ ಪಾಟೀಲ ಕ್ರೀಡಾಪಟು ಅಭಿನಂದನ್ ದೀಪಕ್ ಸೂರ್ಯವಂಶಿಗೆ ಸತ್ಕಾರ ಸಮಾರಂಭ ನಿರ್ವಹಿಸಿ ಮಾತನಾಡಿದರು. ಕ್ರೀಡಾಪಟು ಅಭಿನಂದನ್ ಅವರು 68 ನೇ ನ್ಯಾಶನಲ್ ಸ್ಕೂಲ್ ಗೇಮ 2024- 25 ನೇ ಸಾಲಿನ ರಾಂಚಿ ಜಾರ್ಖಂಡನಲ್ಲಿ ನಡೆದ ಅಂಡರ 18 ಸ್ಪರ್ಧೆಯಲ್ಲಿ 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದಲ್ಲಿ ಎರಡನೇ ಸ್ಥಾನ, ಹಾಗೂ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ನ 6 ಕಿಲೋ ಮೀಟರ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ನಡೆದ 59ನೇ ನ್ಯಾಷನಲ್ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ನ 6 ಕಿಲೋ ಮೀಟರ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಬಡಚಿ ಗ್ರಾಮದ ಹಿರಿಮೆ ಹೆಚ್ಚಿಸಿದ ಅಭಿನಂದನ್ ದೀಪಕ್ ಸೂರ್ಯವಂಶಿ ಅಭಿನಂದನೆ ಸಲ್ಲಿಸುವುದರ ಜೊತೆಗೆ ಒಲಂಪಿಕ್ಸ್ ನಲ್ಲಿ ಬಂಗಾರದ ಪದಕ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಲಿ ಎಂದು ಶುಭ ಹಾರೈಸಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ಪರ್ಧೆಯಲ್ಲಿ ಭಾಗವಹಿಸುವುದರ ಮೂಲಕ ಸಾಧನೆಗಳ ಸುರಿಮಳೆ ಗೈಯ್ಯುತ್ತಿರುವ, ಅಭಿನಂದನ್ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಪಿಯುಸಿ ವಿಜ್ಞಾನ ವ್ಯಾಸಂಗ ಮಾಡುವುದರ ಜೊತೆಗೆ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಹವ್ಯಾಸ ಇಟ್ಟುಕೊಂಡು ಸತತ ಎರಡು ವರ್ಷಗಳಿಂದ ಕಠಿಣ ಪರಿಶ್ರಮ ಪಡುತ್ತಿದ್ದಾನೆ...ಅಭಿನಂದನ್ ಅವರ ತಂದೆ ಹೆಸರು ದೀಪಕ್ ಬಾಪು ಸೂರ್ಯವಂಶಿ, ತಾಯಿ ಯೋಗಿತಾ ಸೂರ್ಯವಂಶಿ. ಇವರಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು. ಇಬ್ಬರು ಗಂಡು ಮಕ್ಕಳ ಪೈಕಿ ಅಭಿನಂದನ್ ಮೊದಲನೇ ಮಗ. ಸೇನೆಗೆ ಸೇರೆ್ಡ ಆಗಬೇಕೆನ್ನುವ ಹಂಬಲವೂ ಅಭಿನಂದನ್ ಅವರದ್ದಾಗಿತ್ತು. ಈ ಆಸೆಯ ಜೊತೆ ಕ್ರೀಡೆಯಲ್ಲಿ ಸಾಧನೆ ಮಾಡಬೇಕೆನ್ನುವ ಹಂಬಲವೂ ಅಭಿನಂದನ್ ದ್ದಾಗಿದೆ. ಬಡ ರೈತಾಪಿ ಕುಟುಂಬದಲ್ಲಿ ಹುಟ್ಟಿ ಕ್ರೀಡೆಯಲ್ಲಿ ಹೊಸ ಭಾಷ್ಯ ಬರೆಯುವಲ್ಲಿ ಕಠಿಣ ಪರಿಶ್ರಮ ಪಡ್ತಿದ್ದಾನೆ ಅಭಿನಂದನ್. ಇನ್ನು ಅಭಿನಂದ್ ಸಾಧನೆ ಹಿಂದೆ ಕೋಚ್ ಗಳ ಪಾತ್ರವೂ ಇದೆ. ಮಹಾರಾಷ್ಟ್ರ ಮೂಲದ ರವಿ ಕೋಂಡೆಗಿರಿ ಹಾಗೂ ಕಟಕೆ ಎಂಬ ತರಬೇತುದಾರರು ಈ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತಿದ್ದಾರೆ. 2 ವರ್ಷದಿಂದ ತರಬೇತಿ ನೀಡ್ತ ಇದ್ದು, ಪರಿಣಾಮ ದೇಶ ಮಾತ್ರವಲ್ಲದೇ ಕರ್ನಾಟಕದ ಹುಬ್ಬಳ್ಳಿ, ಧಾರವಾಡ ಸೇರಿ ಇತರೇ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ನಡೆದ ಮ್ಯಾರಥಾನ್ ಹಾಗೂ ಫಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಶಸ್ತಿ ಪದಕಗಳನ್ನು ಪಡೆಯುವ ಮೂಲಕ ಕ್ರೀಡೆಯಲ್ಲಿ ಸೈ ಎನಿಸಿಕೊಂಡಿದ್ದಾನೆ ಅಭಿನಂದನ್. ಅಂಡರ್ 18 ಸ್ಕೂಲ್ ಲೆವೆಲ್ ಮೂರು ಸಾವಿರ ಮೀಟರ್ ನ್ಯಾಷನಲ್ ಲೇವಲ್ ನಲ್ಲಿ ಎರಡು ಬೆಳ್ಳಿ, 6 ಕಿಲೋಮೀಟರ್ ನ್ಯಾಷನಲ್ ಕ್ರಾಸ್ ಕಂಟ್ರಿ ಎರಡನೆಯ ಸ್ಥಾನ ಬಹುಮಾನ, ಉತ್ತರ ಪ್ರದೇಶ ಮೀರಟ್ ಗ್ರಾಮದಲ್ಲಿ ನ್ಯಾಷನಲ್ ಕ್ರಾಸ್ ಕಂಟ್ರಿ ಅಂಡರ್ 18 ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಕ್ಕೆ ಕೀರ್ತಿಪತಾಕೆ ಹಾರಿಸಿದ ಕೀರ್ತಿ ಅಭಿನಂದನ್ ಗೆ ಸಲ್ಲುತ್ತದೆ. ಈ ರೀತಿ ಹಂತ ಹಂತವಾಗಿ ಸಾಧನೆ ಮಾಡ್ತಿರುವ ಅಭಿನಂದನ್ ಸಾಧನೆ ಕಂಡು ಊರಿಗೆ ಊರೇ ಖುಷಿ ಪಡುತ್ತಿದೆ. ಇನ್ನು ಅಭಿನಂದನ್ ಸಾಧನೆಗೆ ತಂದೆ ತಾಯಿಯ ಆನಂದದ ಭಾಷ್ಬ ಒಂದೆಡೆಯಾದ್ರೇ, ಮತ್ತೊಂದೆಡೆ ಸ್ಥಳೀಯ ರಾಜಕಾರಣಿಗಳು ಹಾಗೂ ಜನಪ್ರತಿನಿಧಿಗಳು, ಶಹಬ್ಬಾಶ್ ಅಂತ ಶುಭ ಕೋರಿ, ಅಭಿನಂದನೆ ಸಲ್ಲಿಸುತ್ತಿದ್ದಾರೆ. ಇನ್ನು ಈ ರೀತಿ ಸಾಧನೆಗೈದ ಮಗ ಅಭಿನಂದನ್ ಬಗ್ಗೆ ಏನ್ ಹೇಳ್ತಿರಾ ಅಂದ್ರೆ, ಅವರ ತಂದೆ ದೀಪಕ್ ಬಾಪು ಸೂರ್ಯವಂಶಿ, ಸಾರ್ಥಕತೆ ವ್ಯಕ್ತಪಡಿಸುತ್ತಿದ್ದಾರೆ. ಮಗನ ಸಾಧನೆಗೆ ನಂಮ ಕೈಲಾದ ಸಹಾಯ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಈ ರೀತಿ ಕ್ರೀಡಾ ಪ್ರಶಸ್ತಿ ಪಡೀತ ಇರೋದು ನಿಜಕ್ಕೂ ಹೆಮ್ಮೆ ಅಂತ ಸಂತಸ ವ್ಯಕ್ತಪಡಿಸ್ತಾರೆ. ಒಟ್ಟಾರೇ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಬಡತನದ ಮಧ್ಯೆ ಕಷ್ಟ ಪಟ್ಟು ಕ್ರೀಡೆಯಲ್ಲಿ ವಿಜಯ ಪತಾಕೆ ಹಾರಿಸ್ತಾ ಇರೋ ಅಭಿನಂದ್, ಇದೇ ರೀತಿ ತನ್ನ ಆಟ ಮುಂದುವರೆಸುದ್ರೇ ಭವಿಷ್ಯದ ಸ್ಟಾರ್ ಕ್ರೀಡಾಪಟು ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅಭಿನಂದನ್ ಸಾಧನೆಯ ಹಾದಿ ಹೀಗೆ ಮುಂದುವರೆಯಲಿ, ಭವಿಷ್ಯದಲ್ಲಿ ಒಲಂಪಿಕ್ಸ್ ಹಾಗೂ ಇತರೇ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ದೇಶದ ಕೀರ್ತಿ ಪತಾಕೆ ಹಾರಿಸಲಿ ಅನ್ನೋದು ಎಲ್ಲರ ಆಶಯವಾಗಿದೆ ಎಂದು ತಂದೆ ದೀಪಕ್ ಸೂರ್ಯವಂಶಿ ತಾಯಿ ಯೋಗಿತ ಸೂರ್ಯವಂಶಿ,ಅಜ್ಜ ಬಾಪು ಭಾಬು ಸೂರ್ಯವಂಶಿ,ಮಾವನಾದ ಶ್ರೀಮಂತ ಶ್ರೀಪತಿ ಶಿಂದೆ ಯವರು ಸಂತಸ ವ್ಯಕ್ತಪಡಿಸಿದರು.
ಇದೇ ಸಮಯದಲ್ಲಿ ಯಶವಂತರಾವ ಬಾಳಾಸಾಹೇಬ ದೇಸಾಯಿ,ವಿಜಯ ವಂತರಾವ ದೇಸಾಯಿ, ಪಿ.ಪಿ.ಮೋರೆ,ಏಕನಾಥ ಚವ್ಹಾಣ, ನಾನಾಸಾಹೇಬ ಅವತಾಡೆ, ರಾಮಚಂದ್ರ ಅವತಾಡೆ, ಕೋಚ ರವಿ ಕೊಂಡಿಕರ, ಸಂದೀಪ ಪಾಟೀಲ, ಮಲ್ಲಿಕಾರ್ಜುನ ಅಂದಾನಿ, ಪುಂಡಲೀಕ ಪೂಜಾರಿ, ವಿಜಯ ಬಡಚಿ, ಹಣಮಂತ ಲೇಂಡೆ, ಬಜರಂಗ ದಾದು ಜಾದವ, ಯುವರಾಜ ಶಿಂದೆ, ಅನೇಕ ಮುಖಂಡರು ಹಾಗೂ ಸೂರ್ಯವಂಶಿ ಕುಟುಂಬಸ್ಥರಿಂದ ಸತ್ಕಾರ ಸಮಾರಂಭ ನೆರವೇರಿಸಿ ಅಭಿನಂದಿಸಿದರು.