ವಿದ್ಯಾರ್ಥಿಗಳ ಅಣುಕು ವಿಧಾನಸಭೆ ರಾಜಕೀಯ ಜ್ಞಾನ ತುಂಬಲು ಸಹಕಾರಿ

ಲೋಕದರ್ಶನ ವರದಿ 

ಯರಗಟ್ಟಿ 14: ಪ್ರಚಲಿತ ವಿದ್ಯಮಾನಗಳನ್ನು ಹಾಗೂ ರಾಜಕೀಯ ಜ್ಞಾನ ತುಂಬಲು ವಿದ್ಯಾಥರ್ಿಗಳ ಅಣುಕು ವಿಧಾನ ಸಭೆ ಅಧಿವೇಶನ ಸಹಕಾರಿ ಆಗುತ್ತದೆ ಎಂದು ಜಿಲ್ಲಾ ವಿಷಯ ಪರಿವೀಕ್ಷಕ ಜಿ.ಎಸ್.ಕಂಬಳಿ ಹೇಳಿದರು.

ಸಮೀಪದ ಸತ್ತಿಗೇರಿ ಕನರ್ಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಪ್ರೌಡ ಶಾಲಾ ವಿದ್ಯಾಥರ್ಿಗಳ ಅಣುಕು ವಿಧಾನ ಸಭಾ ಅಧೀವೇಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾಥರ್ಿಗಳು ಉತ್ತಮ ನಡೆತೆಯುಳ್ಳ ಸ್ನೇಹವನ್ನು ಬೆಳಿಸಿಕೊಂಡು ಚನ್ನಾಗಿ ಓದಿ ಪ್ರತಿಯೊಬ್ಬರು ಪ್ರಥಮ ಶ್ರೇಣಿಯಲ್ಲಿ ಉತ್ತಿರ್ಣರಾಗಿ ಈ ಶಾಲೆಗೆ ಪ್ರತಿಶತ ನೂರರಷ್ಟು ಪಲಿತಾಂಶ ಕೊಡಬೇಕು ಎಂದರು.

ಗ್ರಾ.ಪಂ. ಸದಸ್ಯ ಗೌಡಪ್ಪ ಸವದತ್ತಿ ಮಾತನಾಡಿ ವಿದ್ಯಾಥರ್ಿಗಳ ಅಣುಕು ವಿಧಾನ ಸಭೆ ಅಧಿವೇಶನ ನೋಡಿದರೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಕುಳಿತಿರುವಂತೆ ಬಾಸವಾಗುತ್ತಿದೆ ಎಂದರು. ಈ ಸಂಧರ್ಭದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಮಲ್ಲಿಕಾಜರ್ುನ ಮಿಜರ್ಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ತಾ.ಪಂ.ಸದಸ್ಯೆ ಶಂಕ್ರೆವ್ವ ಮೇಟಿ, ಮುಖ್ಯ ಶಿಕ್ಷಕ ಎಸ್.ಪಿ.ಕರಿಲಿಂಗಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾವಿತ್ರಿ ಪಾಟೀಲ, ಚಂದ್ರಶೇಖರಯ್ಯ ವಿಭೂತಿ, ದೇಸಾಯಿಗೌಡ ಪಾಟೀಲ, ಎನ್.ಎಚ್.ಚನ್ನದಾಸರ, ಜಿ.ಎಸ್.ಪಾಟೀಲ, ವಿ.ವಿ.ಅಂತಾಪೂರ, ವಿ.ಬಿ.ಗೌಡರ, ಆಯ್.ಎಸ್.ಪವಾಡಿಗೌಡರ, ಎಸ್.ಎಸ್.ಕುಡಚಿ, ಎಸ್.ಪಿ.ಶಿಂಗಾರಗೊಪ್ಪ, ಎಸ್.ಪಿ.ಮಣ್ಣೂರಮಠ, ಎಮ್.ಎಫ್.ಚಿಕ್ಕಾಲಗುಡ್ಡ, ಸೊಪ್ಪಡ್ಲ ಮಹಾಂತೇಶ್ವರ ಪ್ರೌಡ ಶಾಲೆ, ಸ್ಥಳೀಯ ವಿವಿಧ ಶಾಲಾ ವಿದ್ಯಾಥರ್ಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

**