ವಾಣಿಜ್ಯ ಬಂದರು ನಿರ್ಮಾಣ ದಿಂದ ಮೀನುಗಾರರ ಬದುಕು ಮೂರು ಬಟ್ಟೆ
ಕಾರವಾರ 16: ವಾಣಿಜ್ಯ ಬಂದರುಗಳವ ನಿರ್ಮಾಣ ದಿಂದ ಮೀನುಗಾರರ ಬದುಕು ಮೂರು ಬಟ್ಟೆಯಾಗಲಿದೆ ಎಂದು ನ್ಯಾಶನಲ್ ಫಿಶರಮನ್ ವರ್ಕರ್ಸ್ ಪೋರಮ್ ಅಧ್ಯಕ್ಷ ರಾಮಕೃಷ್ಣ ತಾಂಡೇಲ್ ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಬುಧುವಾರ ಸುದ್ದಿಗೋಷ್ಟಿ ಮಾಡಿದ ಅವರು ಮೀನುಗಾರರ ಸಮಸ್ಯೆಗಳನ್ನು ತಿಳಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಟೊಂಕಾದ ಸಣ್ಣ ಬಂದರು, ಕೇಣಿಯ ದೊಡ್ಡ ಬಂದರು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು. ಮಹಾರಾಷ್ಟ್ರದಲ್ಲಿ ಬಂದರು ನಿರ್ಮಾಣ ದಿಂದ ಆಗುತ್ತಿರುವ ತೊಂದರೆಯನ್ನು ಬಿಡಿಸಿಟ್ಟ ಅವರು ಅಲ್ಲಿನ ಸರ್ಕಾರ ಮೀನುಗಾರರಿಗೆ ಪರಿಹಾರ ಕೊಡಲಿಲ್ಲ. ಉದ್ಯೋಗ ಸಹ ಕೊಡಲಿಲ್ಲ ಎಂದರು. ಬಂದರು ವ್ಯಾಪ್ತಿಯಲ್ಲಿ ಮೀನುಗಾರರ ಬದುಕು ನಾಶ ಖಚಿತ ಎಂದರು. ಹೊನ್ನಾವರ ಬಂದರಿನಿಂದ ಆಗುವ ತೊಂದರೆಗಳ ಬಗ್ಗೆ ಕರ್ನಾಟಕದ ಸಿಎಂಗೆ ಮನವರಿಕೆ ಮಾಡಲಾಗಿದೆ. ಅವರು ವಾಸ್ತವ ಸಂಗತಿಗಳನ್ನು ಅಧಿಕಾರಿಗಳಿಂದ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ ಎಂದರು.
ಎನ್ ಎಫ್ ಡಬ್ಲು ಎಫ್ ಕಾರ್ಯದರ್ಶಿ ಅಲೆನ್ಸಿಯೊ ಸಿಮೋಯಿಸ್ ಮಾತನಾಡಿ ಬಂದರುಗಳ ನಿರ್ಮಾಣಅದಿರು ರಫ್ತು ಉದ್ದೇಶವಾಗಿದೆ. ಅದಿರು ರಫ್ತು ನಿಂದ ಸಮುದ್ರದ ಪರಿಸರ ನಾಶವಾಗಲಿದೆ. ಕೇಂದ್ರ ಸರ್ಕಾರ ನಿಧಾನಕ್ಕೆ ಬಂದರುಗಳನ್ನು ತನ್ನ ವಶಕ್ಕೆ ಪಡೆಯಲಿದೆ ಹಾಗೂ ಅವುಗಳನ್ನು ಉದ್ಯಮಿ ಅದಾನಿಗೆ ಪೋರ್ಟಗಳನ್ನು ಹಸ್ತಾಂತರಿಸಲಿದೆ ಎಂದರು. ಕೇಂದ್ರ ಸರ್ಕಾರದ ಸಾಗರಾಮಾಲಾ ಯೋಜನೆಯಲ್ಲಿ ಬಂದರು ನಿರ್ಮಾಣವಾಗುತ್ತಿವೆ. ಹಾಗಾಗಿ ಬಂದರು ನಿರ್ಮಾಣಕ್ಕೆ ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ರಾಜ್ಯಗಳು ಸಾಥ್ ನೀಡುತ್ತಿವೆ. ಮಹಾರಾಷ್ಟ್ರದಲ್ಲಿ ಆಗುತ್ತಿರುವುದು ಕರ್ನಾಟಕದಲ್ಲಿ ಆಗುತ್ತಿದೆ. ಕೇರಳದಲ್ಲಿ ಸಹ ಆಗುತ್ತಿದೆ ಎಂದರು. ಮಹಾರಾಷ್ಟ್ರ, ಕೇರಳದಲ್ಲಿ ಸಹ ಬಂದರು ಖಾಸಗಿಕರಣ ಆಗುತ್ತಿದ್ದು, ಬಂದರು ನಂತರ ಸುತ್ತಲ ಪ್ರದೇಶವನ್ನು ವಶಕ್ಕೆ ಪಡೆಯಲಾಗುತ್ತಿದೆ. ಇದರಿಂದಮಹಾರಾಷ್ಟ್ರ, ಗುಜರಾತ್ ನಲ್ಲಿ ಮೀನುಗಾರರ ಬದುಕು ಮೂರಾಬಟ್ಟಿಯಾಗಿದೆ ಎಂದು ಆಪಾದಿಸಿದರು. ಅಕ್ವಾಕಲ್ಚರ್ ಫಿಶಿಂಗ್ ಗೆ ಕೇಂದ್ರದ ಅನುದಾನದ ಉದ್ದೇಶ ಸಹ ಯಾಂತ್ರಿಕ ಮೀನುಗಾರಿಕೆ ಬಂದಾಗುವ ಸೂಚನೆ ಎಂದರು. ವಾಣಿಜ್ಯ ಬಂದರು ಇರುವಲ್ಲಿ ನಿಧಾನಕ್ಕೆ ಪರ್ಶಿಯನ್ ಬೋಟ್, ಯಾಂತ್ರೀಕೃತ ಮೀನುಗಾರಿಕೆ ಬಂದ್ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದೆ ಎಂದರು. ಬಂದರುಗಳಲ್ಲಿ ದೊಡ್ಡ ದೊಡ್ಡ ವಾಣಿಜ್ಯ ಹಡಗು ಪ್ರವೇಶಕ್ಕೆ ಸಮುದ್ರದಲ್ಲಿ ಕಮರ್ಶಿಯಲ್ ಶಿಪ್ ಕಾರಿಡಾರ್ ನಿರ್ಮಾಣವಾಗಲಿವೆ. ಅಂತರಾಷ್ಟ್ರೀಯ ನಿಯಮಗಳ ಪಾಲನೆಗೆ ಮೀನುಗಾರರು ಬಲಿಯಾಗಲಿದ್ದಾರೆ ಎಂದರು.ಇದರ ವಿರುದ್ಧ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜಂಥರ ಮಂಥರನಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎನ್ ಎಫ್ ಡಬ್ಲು ಎಫ್ ಅಧ್ಯಕ್ಷ ರಾಮಕೃಷ್ಣ ತಾಂಡೇಲ್ ಇದೇ ವೇಳೆ ಘೋಷಣೆ ಮಾಡಿದರು .ವಿಕಾಸ್ ತಾಂಡೇಲ್ ಮಾತನಾಡಿ ಬಂದರು ನಿರ್ಮಾಣಕ್ಕೆ ವಿರೋಧ ಇಲ್ಲ. ಆದರೆ ಸರ್ಕಾರ ಮೀನುಗಾರರಿಗೆ ಭರವಸೆ ನೀಡುತ್ತಿಲ್ಲ. ವಾಣಿಜ್ಯ ಬಂದರು ನಿರ್ಮಾಣದ ಉದ್ದೇಶವನ್ನು ಸ್ಪಷ್ಟಪಡಿಸುತ್ತಿಲ್ಲ ಎಂದರು. ಹಾಗಾಗಿ ಹೊನ್ನಾವರ ಟೊಂಕಾ, ಕೇಣಿ ಬಂದರು ನಿರ್ಮಾಣ ಬೇಡ ಎಂದರು.
ಚೆನ್ನೈ ಎನ್ ಜಿಟಿಸಿ ಕೋರ್ಟಗೆ ಈ ವಿಷಯದಲ್ಲಿ ಅರ್ಜಿ ಹಾಕಿದ್ದು, ತೀರ್ು ನಮ್ಮ ಪರ ಬರಲಿದೆ ಎಂದರು . ಪತ್ರಿಕಾಗೋಷ್ಠಿಯಲ್ಲಿ ರಾಮಕೃಷ್ಣ ತಾಂಡೇಲ್. ನ್ಯಾಶನಲ್ ಫಿಶರೀಸ್ ಫೋರಂನ ಜಂಟಿ ಕಾರ್ಯದರ್ಶಿ ಲಕ್ಷ್ಮಿ, ವೆಂಕಟೇಶ, ಉಜ್ವಲಾ ಪಾಟೀಲ್, ಸಂಜಯ್ ಬಲೆಗಾರ, ಕೊಲ್ಕೊತ್ತಾದ ಪ್ರತಿನಿಧಿ ಮೃಣ್ಮಯಿ ಇದ್ದರು.