ಶ್ರೀನಗರ, ಅಕ್ಟೋಬರ್ 26: ಜಮ್ಮು-ಕಾಶ್ಮೀರದಲ್ಲಿ 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿರುವುದು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿರುವುದರ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಆಗಸ್ಟ್ 5 ರಿಂದ ಜನರು ನಡೆಸುತ್ತಿರುವ ಪ್ರತಿಭಟನೆ ಶನಿವಾರವೂ ಮುಂದುವರೆದಿದ್ದು, ವ್ಯಾಪಾರ ಮತ್ತು ಇತರ ಚಟುವಟಿಕೆಗಳು ಸ್ಥಗಿತಗೊಂಡಿವೆ. ಕಣಿವೆಯ ಯಾವುದೇ ಭಾಗದಲ್ಲಿ ಶನಿವಾರ ಯಾವುದೇ ರೀತಿಯ ಕಫ್ಯರ್ೂ ನಿರ್ಬಂಧವಿಲ್ಲವಾದರೂ ಕಾನೂನು ಮತ್ತು ಸುವ್ಯವಸ್ಥೆ ತಡೆಗಟ್ಟಲು ಸೆಕ್ಷನ್ 144 ಅಡಿಯಲ್ಲಿ ನಿರ್ಬಂಧಗಳು ಮುಂದುವರಿಯುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 5 ರಂದು ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ಕೂಡಲೇ ಯಾವುದೇ ಪ್ರತಿಭಟನೆಗಳನ್ನು ತಡೆಯಲು ಕಾಶ್ಮೀರ ಕಣಿವೆಗೆ ಹೆಚ್ಚುವರಿ ಕೇಂದ್ರ ಅರೆಸೈನಿಕ ಪಡೆ (ಸಿಪಿಎಂಎಫ್) ನಿಯೋಜಿಸಲಾಗಿತ್ತು. ಕಣಿವೆಯಲ್ಲಿ ಶನಿವಾರ ಕಲ್ಲು ತೂರಾಟದ ಕೆಲವು ಘಟನೆಗಳನ್ನು ಹೊರತುಪಡಿಸಿ, ಪರಿಸ್ಥಿತಿ ಶಾಂತಿಯುತವಾಗಿತ್ತು. ಆದರೂ ಕಣಿವೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಭದ್ರತಾ ಪಡೆ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ ಹುರಿಯತ್ ಸಮ್ಮೇಳನದ (ಎಚ್ಸಿ) ಅಧ್ಯಕ್ಷ ಮಿರ್ವಾಯಿಜ್ ಮೌಲ್ವಿ ಒಮರ್ ಫಾರೂಕ್ ಅವರ ಭದ್ರಕೋಟೆಯಾದ ಐತಿಹಾಸಿಕ ಜಾಮಿಯಾ ಮಸೀದಿ ಆಗಸ್ಟ್ 5 ರಿಂದ ಮುಚ್ಚಲ್ಪಟ್ಟಿದ್ದು, ಪ್ರರ್ಥನಾ ಸ್ಥಳದ ಎಲ್ಲಾ ಮುಖ್ಯ ದ್ವಾರಗಳನ್ನು ಮುಚ್ಚಲಾಗಿದೆ. ಕಣಿವೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆಗಸ್ಟ್ 5 ರಿಂದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸೇರಿದಂತೆ ಎಲ್ಲಾ ಮೊಬೈಲ್ ಕಂಪನಿಗಳ ಮೆಸೇಜ್ ಸೇವೆ (ಎಸ್ಎಂಎಸ್) ನೆಟ್ವರ್ಕ್ ಜೊತೆಗೆ ಅಂತರ್ಜಾಲ ಸೇವೆ ಮತ್ತು ಪೂರ್ವ ಪಾವತಿ ಮೊಬೈಲ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಉತ್ತರ ಕಾಶ್ಮೀರದ ಬಾರಾಮುಲ್ಲಾ ಮತ್ತು ಜಮ್ಮು ಪ್ರದೇಶದ ಬನಿಹಾಲ್ ನಡುವಿನ ರೈಲು ಸೇವೆಯನ್ನು ಆಗಸ್ಟ್ 5 ರಿಂದ ಭದ್ರತಾ ಕಾರಣಗಳಿಗಾಗಿ ಸ್ಥಗಿತಗೊಳಿಸಲಾಗಿದೆ. ವಿದ್ಯಾರ್ಥಿಗಳು ತರಗತಿಗಳಿಂದ ದೂರವಿದ್ದಾರೆ. ಬೇಸಿಗೆ ರಾಜಧಾನಿ, ಶ್ರೀನಗರ ಮತ್ತು ಹೊರವಲಯದಲ್ಲಿ ಆಗಸ್ಟ್ 5 ರಿಂದ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ವಾಹನಗಳು ರಸ್ತೆಗಿಳಿದಿರಲಿಲ್ಲ.