370ನೇ ವಿಧಿ ರದ್ದು ಪ್ರತಿಭಟಿಸಿ ಕಾಶ್ಮೀರದಲ್ಲಿ 7ನೇ ವಾರಕ್ಕೆ ಕಾಲಿಟ್ಟ ಮುಷ್ಕರ

ಶ್ರೀನಗರ,  ಸೆ 17        ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370 ಹಾಗೂ 35 ಎ ವಿಧಿಗಳನ್ನು  ರದ್ದುಪಡಿಸಿರುವುದು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ  ವಿಭಜಿಸಿರುವುದನ್ನು ಪ್ರತಿಭಟಿಸಿ ಕಾಶ್ಮೀರ ಕಣಿವೆಯಲ್ಲಿ ವಾಣಿಜ್ಯ ಮತ್ತು ಇತರ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದರ ಮೂಲಕ ನಡೆಸಲಾಗುತ್ತಿರುವ  ಮುಷ್ಕರ ಮಂಗಳವಾರ 7ನೇ ವಾರಕ್ಕೆ ಕಾಲಿಟ್ಟಿದೆ.   

     ಈ ಮಧ್ಯ, ಕಣಿವೆಯ ನ್ಯೂ ಖಂಡಾ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಗಳಲ್ಲಿ ಹತ್ತಾರು ಯುವಕರು ಗಾಯಗೊಂಡಿದ್ದಾರೆ. ಶ್ರೀನಗರದ ನಾಟಿಪೊರಾ ಮತ್ತು ರಾಮ್ಬಾಗ್ನಲ್ಲೂ ಕಲ್ಲು ತೂರಾಟ ನಡೆದ ಬಗ್ಗೆ ವರದಿಯಾಗಿದೆ.   

     ಕಣಿವೆಯ ಯಾವುದೇ ಪ್ರದೇಶದಲ್ಲಿ ಇದುವರೆಗೆ ಕಫ್ಯರ್ೂ ಹೇರಲಾಗಿಲ್ಲ. ಆದರೆ, ಕಾನೂನು-ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಯುಎನ್ಐಗೆ ತಿಳಿಸಿದ್ದಾರೆ.  

     ನಾಲ್ಕು ಅಥವಾ  ಹೆಚ್ಚಿನ ವ್ಯಕ್ತಿಗಳು ಗುಂಪು ಸೇರುವುದಕ್ಕೆ ಮತ್ತು ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾಗುವುದನ್ನು ತಡೆಯಲು ಕಣಿವೆಯಲ್ಲಿ ಸೆಕ್ಷನ್ 144 ಅಡಿ ನಿಷೇದಾಜ್ಞೆ ವಿಧಿಸಲಾಗಿದೆ ಎಂದು ಅಧಿಕೃತ ಮೂಲಗಳು ಮೂಲಗಳು ತಿಳಿಸಿವೆ. 

    ಆಗಸ್ಟ್ 5ರಿಂದ ಉತ್ತರ ಕಾಶ್ಮೀರದ ಬಾರಾಮುಲ್ಲಾ  ಮತ್ತು ಜಮ್ಮು ಪ್ರದೇಶದ ಬನಿಹಾಲ್ ನಡುವಿನ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಇಲಾಖೆಗೆ ಒಂದು ಕೋಟಿ 30 ಲಕ್ಷ ರೂ. ನಷ್ಟವಾಗಿದೆ. ಭಾರತ್  ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಸೇರಿದಂತೆ ಎಲ್ಲಾ ದೂರಸಂಪರ್ಕ ಕಂಪನಿಗಳ  ಮೊಬೈಲ್ ಮತ್ತು ಇಂಟರ್ನೆಟ್ ಸೇವೆಯನ್ನು ಆಗಸ್ಟ್ 5 ರಿಂದ 

   ಕಣಿವೆಯಲ್ಲಿ  ಸ್ಥಗಿತಗೊಳಿಸಲಾಗಿದೆ.  ಇದರಿಂದ ವೈದ್ಯರು, ಮಾಧ್ಯಮದವರು, ವಿದ್ಯಾಥರ್ಿಗಳು ಮತ್ತು ಇತರ ವೃತ್ತಿಪರರು ತೊಂದರೆಗೀಡಾಗಿದ್ದಾರೆ. 

   ಆದರೂ,  ಕಣಿವೆಯಲ್ಲಿ ಆಗಸ್ಟ್ 30ರಿಂದ ಎಲ್ಲಾ ದೂರವಾಣಿ ವಿನಿಮಯ ಕೇಂದ್ರಗಳಿಂದ ಸ್ಥಿರ ದೂರವಾಣಿ ಸೇವೆಯನ್ನು ಮರು ಸ್ಥಾಪಿಸಲಾಗಿದೆ.  ನಿರಂತರ ಮುಷ್ಕರದಿಂದ ಬಾಧಿತವಾಗಿರುವ ವಲಯಗಳಲ್ಲಿ ಶಿಕ್ಷಣ ಸೇರಿದ್ದು, ಶಾಲೆಗಳಲ್ಲಿ ಶಿಕ್ಷಕರು 

   ಮತ್ತು ಸಿಬ್ಬಂದಿ ಮಾತ್ರ ಹಾಜರಾಗುತ್ತಿದ್ದರೆ, ವಿದ್ಯಾರ್ಥಿಗಳು ದೂರ ಉಳಿದಿದ್ದಾರೆ. ಆಗಸ್ಟ್ 5ರಿಂದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳನ್ನೂ ಮುಚ್ಚಲಾಗಿದೆ.  ಕಾಶ್ಮೀರ ಕಣಿವೆಯ ಇತರೆಡೆಗಳಲ್ಲಿ, ಆಗಸ್ಟ್ 5 ರಿಂದ  ವ್ಯಾಪಾರ ಮತ್ತು ಇತರ ವಾಣಿಜ್ಯ ಚಟುವಟಿಕೆಗಳು ಕ್ಷೀಣಿಸಿರುವುದರಿಂದ ಪರಿಸ್ಥಿತಿಯಲ್ಲಿ  ಯಾವುದೇ ಬದಲಾವಣೆಯಾಗಿಲ್ಲ.  

     ಬೇಸಿಗೆ ರಾಜಧಾನಿ   ಶ್ರೀನಗರ ಸೇರಿದಂತೆ ಕಣಿವೆಯಲ್ಲಿ ಮುಷ್ಕರದಿಂದಾಗಿ ಅಂಗಡಿಗಳು ಮತ್ತುವಾಣಿಜ್ಯ ಮುಂಗಟ್ಟುಗಳು ಮುಚ್ಚಿದ್ದವು. ಯಾವುದೇ ಪ್ರತಿಭಟನೆಗಳನ್ನು ತಡೆಯಲು ಹೆಚ್ಚಿನ ಸಂಖ್ಯೆಯಭದ್ರತಾ ಪಡೆಗಳನ್ನು ನಿಯೋಜಿಸಲಾಗಿರುವುದರಿಂದ ವಾಹನಗಳು ರಸ್ತೆಗಿಳಿದಿರಲಿಲ್ಲ. ಹುರಿಯತ್ ಕಾನ್ಫರೆನ್ಸ್ (ಎಚ್ಸಿ) ಅಧ್ಯಕ್ಷ ಮಿವರ್ಾಯಿಜ್ ಮೌಲ್ವಿ ಓಮಫರ್ಾರೂಕ್  ಭದ್ರಕೋಟೆಯಾದ  ಐತಿಹಾಸಿಕ ಜಾಮಿಯಾ ಮಸೀದಿಯ ಎಲ್ಲಾ ದ್ವಾರಗಳುಆಗಸ್ಟ್ 5 ರಿಂದ ಮುಚ್ಚಲ್ಪಟ್ಟಿವೆ. ಜನರು ಪ್ರಾರ್ಥನಾ ಸ್ಥಳ ಪ್ರವೇಶಿಸುವುದನ್ನು ತಡೆಯಲು 

     ಜಾಮಿಯಾ  ಮಾರುಕಟ್ಟೆ ಮತ್ತು ಪಕ್ಕದ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 

  ಕಳೆದ  44 ದಿನಗಳಿಂದ ಬೇಸಿಗೆ ರಾಜಧಾನಿ, ಶ್ರೀನಗರ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ  ವ್ಯಾಪಾರ ಮತ್ತು ಇತರ ಚಟುವಟಿಕೆಗಳು 

      ದುರ್ಬಲಗೊಂಡಿವೆ.  ಆದರೆ ರಾಜ್ಯ ರಸ್ತೆ ಸಾರಿಗೆ  ನಿಗಮದ (ಎಸ್ಆರ್ಟಿಸಿ)  ಬಸ್ಗಳು ಸೇರಿದಂತೆ ಸಾರ್ವಜನಿಕ ಸಾರಿಗೆ ರಸ್ತೆಗಳಿಂದ ದೂರ  ಉಳಿದಿದೆ. ಆದಾಗ್ಯೂ, ಹಲವಾರು ಖಾಸಗಿ ವಾಹನಗಳು ಅಪ್ಟೌನ್ ಮತ್ತು ಸಿವಿಲ್ ಲೈನ್ಸ್ ಮತ್ತು  ಹೊರವಲಯದಲ್ಲಿರುವ ರಸ್ತೆಗಳಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. 

      ಶ್ರೀನಗರದಲ್ಲಿ  ಹಗಲಿನಲ್ಲಿ ಪೆಟ್ರೋಲ್ ಪಂಪ್ಗಳು ಮುಚ್ಚಲಾಗಿರುತ್ತದೆ. ಆದರೆ, ಕೆಲ ಪಂಪ್ಗಳು  ಬೆಳಿಗ್ಗೆ 6ರಿಂದ 9ರವರೆಗೆ ಹಾಗೂ ಸಂಜೆ 7ರಿಂದ ರಾತ್ರಿ 10ವರೆಗೆ  ಕಾರ್ಯನಿರ್ವಹಿಸುತ್ತಿವೆ. ನಿರ್ಬಂದಗಳಿಲ್ಲದ ಪ್ರದೇಶದಲ್ಲಿ ಬೆಳಿಗ್ಗೆ 6ರಿಂದ 9ರವರೆಗೆ ಬೀದಿ ಬದಿ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದಾರೆ.    

      ದಕ್ಷಿಣ ಕಾಶ್ಮೀರ ಜಿಲ್ಲೆಗಳಾದ ಅನಂತ್ನಾಗ್,  ಕುಲ್ಗಾಮ್, ಪುಲ್ವಾಮಾ, ಶೋಪಿಯಾನ್ನಲ್ಲಿ ಎಲ್ಲಾ ಅಂಗಡಿಗಳು ಮತ್ತು ಇತರ ವ್ಯಾಪಾರ  ಸಂಸ್ಥೆಗಳು ಮುಚ್ಚಲ್ಪಟ್ಟಿರುವುದರಿಂದ 44ನೇ ದಿನವೂ ಜನಜೀವನ ಭಾದಿತವಾಗಿದೆ.  ಕುಪ್ವಾರಾ,  ಬಾರಾಮುಲ್ಲಾ, ಬಂಡಿಪೋರಾ, 

      ಸೊಪೋರ್, ಹಂದ್ವಾರದಲ್ಲಿನ ಪರಿಸ್ಥಿತಿಯಲ್ಲಿ ಬದಲಾವಣೆ  ಕಂಡುಬಂದಿಲ್ಲ. ಮಧ್ಯ ಕಾಶ್ಮೀರ ಜಿಲ್ಲೆಗಳಾದ ಗಂದರ್ಬಾಲ್ ಮತ್ತು ಬಡ್ಗಾಮ್ನಲ್ಲೂ  ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.