ನಕ್ಸಲ್ ನಿಗ್ರಹದಂತೆ ಕ್ಷಯ ರೋಗ ನಿಗ್ರಹಿಸಿ : ಸಂಸದ ಕಾಗೇರಿ

Stop Tuberculosis like stopping Naxals: MP Kageri

ನಕ್ಸಲ್ ನಿಗ್ರಹದಂತೆ ಕ್ಷಯ ರೋಗ ನಿಗ್ರಹಿಸಿ : ಸಂಸದ ಕಾಗೇರಿ

ಕಾರವಾರ 04  : ಕೇಂದ್ರ ಸರ್ಕಾರ ನಕ್ಸಲ್ ನಿಗ್ರಹದಂತೆ ,ನೀವು ಜಿಲ್ಲೆಯಲ್ಲಿ ಕ್ಷಯ ರೋಗ ನಿಗ್ರಹಿಸಿ ಎಂದು ಸಂಸದ ಕಾಗೇರಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು .ಕಾರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆಯುತ್ತಿರುವ ದಿಶಾ ಸಭೆಯಲ್ಲಿ ಮಾತನಾಡುತ್ತಿದ್ದರು.ದಾಂಡೇಲಿ, ಕಾರವಾರದಲ್ಲಿ ಕ್ಷಯ ರೋಗಿಗಳು ಹೆಚ್ಚಿದ್ದಾರೆ. ಇದನ್ನು ನಿಯಂತ್ರಣ ಮಾಡಲು ಪಾರದರ್ಶಕವಾಗಿ ಕೆಲಸ ಮಾಡಿ ಎಂದರು. ಕೇಂದ್ರ ಸರ್ಕಾರ ಹಣ ಕೊಟ್ಟಿದೆ. ನೀವು ಕ್ಷಯ ರೋಗಿಗಳಿಗೆ ತಲಾ ಒಂದು ಸಾವಿರ ಹಣ ತಲುಪಿಸಿ ಎಂದರು. ಆಯುಷ್ಯಮಾನ್‌ ಕಾರ್ಡ 13500 ಗುರಿ ಇದ್ದರೂ, 6000 ಜನರಿಗೆ ಕಾರ್ಡ ಕೊಡಲಾಗಿದೆ ಎಂದು ಸಭೆಗೆ ಅಧಿಕಾರಿಗಳು ತಿಳಿಸಿದಾಗ, ಯೋಜನೆಯ ಸಮಸ್ಯೆ ಏನು ಎಂದು ಸಂಸದರು ಪ್ರಶ್ನಿಸಿದರು . ಆಯುಷ್ಯಮಾನ್ ಕಾರ್ಡ ???ಪ್ ನಲ್ಲಿನ ಸಮಸ್ಯೆಗಳನ್ನು ಸಂಸದರಿಗೆ ಅಧಿಕಾರಿಗಳು ವಿವರಿಸಿದರು. 8ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಹಾಗೂ ಹೊನ್ನಾವರ, ಕುಮಟಾ, ಅಂಕೋಲಾ, ಸಿದ್ದಾಪುರ ಆಸ್ಪತ್ರೆಗಳ ಕಟ್ಟಡ ನವೀಕರಣಕ್ಕೆ ಅನುದಾನ ಬಂದಿದ್ದು ,ಕಾಮಗಾರಿ ಆಗಿದೆ ಎಂದು ಎನ್ ಎಚ್ ಆರ್ ಎಮ್ ವಿಭಾಗದ ಎಂಜಿನಿಯರ್ ವಿವರಿಸಿದರು.ಕಿಸಾನ್ ಸನ್ಮಾನ್ ಕಾರ್ಡ 2019 ರ ಮೊದಲು ರಿಜಿಸ್ಟ್ರಾರ್ ಮಾಡಿಕೊಂಡವರಿಗೆ ಸಿಕ್ಕಿದೆ. ನಂತರ ಪೂಡಿ ಆದವರಿಗೆ ಸನ್ಮಾನ್ ಕಾರ್ಡ ಸಿಕ್ಕಿಲ್ಲ. ತಂದೆಯಿಂದ ಮಗನಿಗೆ, ಪತಿ ಯಿಂದ ಪತ್ನಿಗೆ ಪೂಡಿ ಆದ ಆಸ್ತಿಗಳಿಗೆ ಕಿಸಾನ್ ಸನ್ಮಾನ ಕಾರ್ಡ್‌ ಕೊಡುವ ಪ್ರಯತ್ನ ನಡೆದಿದೆ. ಆದರೆ ಒಂದೇ ಕುಟುಂಬದ ಸಹೋದರರ ಪೋಡಿ ನಂತರ ಕಿಸಾನ್ ಸನ್ಮಾನ ಕಾರ್ಡ ಕೊಡಲಾಗುತ್ತಿಲ್ಲ ಎಂದು ಕೃಷಿ ಅಧಿಕಾರಿ ಹೇಳಿದರು.ಗ್ರಾಮೀಣ ರಸ್ತೆಗೆ ಕೇಂದ್ರ ಹಣ ಕೊಟ್ಟಿದೆ. ಅದನ್ನು ಹೇಗೆ ಬಳಸಿಕೊಳ್ತೀರಿ ಎಂದು ಸಂಸದ ಕಾಗೇರಿ ಪ್ರಶ್ನಿಸಿದರು. ಫೇಸ್ ಒಂದು ,ಎರಡರಲ್ಲಿ ಎಷ್ಟು ಕಾಮಗಾರಿಗಳಾಗಿವೆ ಎಂದು ಕೇಳಿದರು. ಫೇಸ್ ಎರಡರಲ್ಲಿ ಜೊಯಿಡಾ ತಾಲೂಕಿನಲ್ಲಿ ಎರಡು ಕಾಮಗಾರಿ ಪೂರ್ಣವಾಗಿಲ್ಲ. ಆ ಕಾಮಗಾರಿ ಮಾಡದ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟನಲ್ಲಿ ಹಾಕಲು ಶಿಫಾರಸ್ಸು ಮಾಡಲಾಗಿದೆ ಎಂದು ಎಂಜಿನಿಯರ್ ಹೇಳಿದರು. ಆ ಬಾಕಿ ಉಳಿದ ಕಾಮಗಾರಿಯನ್ನು ಮರು ಟೆಂಡರ್ ಕರೆಯಲಾಗಿದೆ ಎಂದರು.ಮುಂಡಗೋಡ, ಜೊಯಿಡಾ ತಾಲೂಕಿನ ಬೇಡಿಕೆಗಳಿಗೆ ವಿಶೇಷ ಅಲೋಕೇಶನ್ ಮಾಡಲು ವರದಿ ಕೇಳಲಾಗಿದೆ. ಇದನ್ನು ಮಾಡಿಸಿದ್ದೀರಾ ಎಂದು ಸಂಸದರು , ಜಿ.ಪಂ.ಕಾರ್ಯನಿರ್ವಾಹಕ ಅಧಿಕಾರಿಯನ್ನು ಕೇಳಿದರು.ಏಜೆನ್ಸಿ ಮೂಲಕ ಸರ್ವೆ ನಡೆದಿದೆ ಎಂದು ಸಿಇಒ ಹೇಳಿದರು.ಜೆಜೆಎಂ ನಲ್ಲಿ 966 ಕೋಟಿ ಹಣ ಬಂದಿದೆ. ಬಹುಗ್ರಾಮ ಕುಡಿಯುವ ನೀರಿಗೆ 800 ಕೋಟಿ ಬಂದಿದೆ. ಜಲ ಮೂಲ ಇಲ್ಲದೆ ಕಾಮಗಾರಿ ಮಾಡಬೇಡಿ ಎಂದು ಸಂಸದರು ಸೂಚಿಸಿದರು. ಜಲ ನಿರ್ಮಲ ಯೋಜನೆಯಲ್ಲಿ 760 ಕಾಮಗಾರಿಗಳು ಬಿಟ್ಟು ಹೋಗಿವೆ. ಇದಕ್ಕೆ ಕಾರಣ ಹುಡುಕಿ ಎಂದರು. ಜೊಯಿಡಾ ರಾಮನಗರಕ್ಕೆ ಯಾಕೆ ಕುಡಿಯುವ ನೀರು ಕೊಡಲಾಗಿಲ್ಲ. ಹತ್ತಿರದಲ್ಲಿ ಸುಫಾ ಜಲಾಶಯವಿದೆ ಎಂದು ಸಂಸದ ಕಾಗೇರಿ ಪ್ರಶ್ನಿಸಿದರು. ಎಂಜಿನಿಯರ್‌ ಪ್ರತಿಕ್ರಿಯೆ ನೀಡಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ರಿಜರ್ವ ಫಾರೆಸ್ಟ್‌ ನಿಯಮಗಳು ಅಡ್ಡಿಯಾಗಿವೆ. ಈ ಕಾರಣಗಳನ್ನು ಇಟ್ಟು ಸರ್ಕಾರಕ್ಕೆ ವಿವರಿಸಲಾಗಿದೆ ಎಂದರು. ಡಿಎಫ್ ಒ ನೀರಿನ ಫೈಪ್ ಲೈನ್ ಹಾಕಲು ಈಚೆಗೆ ಅನುಮತಿ ಸೂಚಿಸಿದ್ದು , ಇದನ್ನು ಬೆಂಗಳೂರು ಮಟ್ಟದ ಅರಣ್ಯಾಧಿಕಾರಿಗಳು ಕ್ಲಿಯರ್ ಮಾಡಬೇಕಿದೆ ಎಂದರು .ಉದ್ಯೋಗ ಖಾತ್ರಿಯಲ್ಲಿ 2 ಲಕ್ಷ ಜಾಬ್ ಗುರಿಯಿದೆ. 90 ಸಾವಿರ ಜನ ಜಾಬ್ ಕಾರ್ಡ ಮಾಡಿಸಿಕೊಂಡಿದ್ದಾರೆ. 250 ಕುಟುಂಬಗಳು ಮಾತ್ರ ನೂರು ದಿನ ಕೆಲಸ ಮಾಡಿವೆ. 150 ಕೋಟಿ ಅನುದಾನ ಈ ಯೋಜನೆಗೆ ಬಂದಿದೆ. 87 ಕೋಟಿ ಖರ್ಚಾಗಿದೆ. 100 ಕೋಟಿ ಖರ್ಚು ಮಾಡ್ತಿವಿ ಎಂದು ಅಧಿಕಾರಿ ಸಂಸದರಿಗೆ ವಿವರಿಸಿದರು . 349 ದಿನದ ಕೂಲಿ ಇದೆ. 1000 ಕ್ಕೂ ಹೆಚ್ಚು ಜನ ಕಾಯಕ ಬಂಧುಗಳಾಗಿ ನೊಂದಾಯಿಸಿಕೊಂಡಿದ್ದಾರೆ ಎಂದರು. 30 ಸಾವಿರ ಜನ 50 ದಿನ ಕೆಲಸ ಮಾಡಿದ್ದಾರೆ ಎಂದರು. ಜನರಿಗೆ ಉದ್ಯೋಗ ಖಾತ್ರಿ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದರು.ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಷ್ಮಾ ಗೋಡಬೋಲೆ, ವಿಪ ಸದಸ್ಯ ಗಣಪತಿ ಉಳ್ವೇಕರ್ ,ಸಿಇಒ ಈಶ್ವರ್ ಕಾಂದೂ , ಸಹಾಯಕ ಕಮಿಷನರ್ ಕಾವ್ಯರಾಣಿ, ಕಾಂಬ್ಳೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು......