ಸಿಡ್ನಿ, ಅ 13: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮನ್ ಸ್ಟೀವನ್ ಸ್ಮಿತ್ ಅವರನ್ನು ಮತ್ತೆ ತಂಡದ ನಾಯಕತ್ವ ಸ್ಥಾನ ನೀಡುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ ಎಂದು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
2018ರ ಮಾಚ್ರ್ವರೆಗೂ ತಂಡದ ನಾಯಕತ್ವದ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣ ಸಂಬಂಧ ಅವರು ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಮಾನತುಗೊಳಿಸಲಾಗಿತ್ತು. ನಂತರ, ಟೆಸ್ಟ್ ಕ್ರಿಕೆಟ್ ತಂಟದ ನಾಯಕತ್ವವನ್ನು ಟಿಮ್ ಪೈನ್ ಹಾಗೂ ಸೀಮಿತ ಓವರ್ಗಳ ತಂಡಕ್ಕೆ ಪಿಂಚ್ಗೆ ನೀಡಲಾಗಿತ್ತು.
ಇದೀಗ ಭರ್ಜರಿ ಲಯದೊಂದಿಗೆ ತಂಡಕ್ಕೆ ಮರಳಿರುವ ಸ್ಟೀವನ್ ಸ್ಮಿತ್ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದಾರೆ. ಹಾಗಾಗಿ, ಅವರನ್ನು ಮತ್ತೆ ತಂಡದ ನಾಯಕತ್ವದ ಜವಾಬ್ದಾರಿ ನೀಡಬಹುದು ಎಂದು ಬಹಳಷ್ಟು ಚರ್ಚೆ ನಡೆಯುತ್ತಿದೆ.
ಈ ಬಗ್ಗೆ ಆಸ್ಟ್ರೇಲಿಯಾ ಬ್ರಾಡ್ಕಾಸ್ಟಿಂಗ್ ಕಾರ್ಪೋರೇಷನ್ ಜತೆ ಮಾತನಾಡಿರುವ, ಜಸ್ಟಿನ್ ಲ್ಯಾಂಗರ್ ಈ ಬಗ್ಗೆ ನನಗೆ ಸ್ಪಷ್ಟತೆಯಿಲ್ಲ. ಆದರೆ, ಸ್ಮಿತ್ ಅವರಿಗೆ ಮತ್ತೆ ನಾಯಕತ್ವದ ಹೊಣೆಗಾರಿಕೆ ನೀಡುವುದು ಸುಲಭ ನಿರ್ಧಾರವಲ್ಲ. ಕಳೆದ ಆಷಸ್ ಸರಣಿಯಲ್ಲಿ ಏಳು ಇನಿಂಗ್ಸ್ಗಳಲ್ಲಿ ಸ್ಮಿತ್ 774 ರನ್ ದಾಖಲಿಸಿದ್ದಾರೆ. ಹಾಗಾಗಿ, ಅವರು ಮಾನಸಿಕ ಹಾಗೂ ದೈಹಿಕವಾಗಿ ಚೂರುಕಾಗಿದ್ದಾರೆ ಎಂದು ಹೇಳಿದರು.
ಸ್ಟೀವನ್ ಸ್ಮಿತ್ ಅವರೊಂದಿಗೆ ಕಳೆದ 18 ತಿಂಗಳ ಕಾಲ ಅತ್ಯುತ್ತಮ ಬಾಂಧವ್ಯ ಹೊಂದಿದ್ದೇನೆ. ಆಷಸ್ ಸರಣಿಯಲ್ಲಿ ಅವರು ತೋರಿದ ಬ್ಯಾಟಿಂಗ್ ಗಮನಿಸಬಹುದು. ಒಂದು ವೇಳೆ ಅವರಿಗೆ ತಂಡದ ನಾಯಕತ್ವದ ಹೊಣೆ ನೀಡಿದರೆ ಅವರ ಬ್ಯಾಟಿಂಗ್ ಮೇಲೆ ಇದರ ಪರಿಣಾಮ ಬೀರಬಹುದು ಎಂದು ಲ್ಯಾಂಗರ್ ಅಭಿಪ್ರಾಯಪಟ್ಟರು.