ಲೋಕದರ್ಶನವರದಿ
ಬೆಲ್ಲದ ಬಾಗೇವಾಡಿ:07: ವ್ಹಿ.ಎಮ್.ಕತ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯವು ಹುಕ್ಕೇರಿ ತಾಲೂಕಿನ ಗುಡಸ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾಷರ್ಿಕ ವಿಶೇಷ ಶಿಬಿರದ ಎರಡನೆ ದಿನದಂದು ತೋಟಗಾರಿಕಾ ಬೆಳೆಗಳ ಮಾಹಿತಿಯ ಬಗ್ಗೆ ಹುಕ್ಕೇರಿ ತೋಟಗಾರಿಕಾ ಸಹಾಯಕರಾದ ಎಸ್.ಪಿ. ತುಪ್ಪದ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ತೋಟಗಾರಿಕಾ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರ ಮೂಲಕ ಸ್ವಂತ ಉದ್ದಿಮೆದಾರರಾಗಿ ಬದಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಎಸ್.ಎಮ್. ಹಾದಿಮನಿಯವರು ಕೃಷಿ ಭೂಮಿಯಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದು ಹೆಚ್ಚು ಇಳುವರಿಯನ್ನು ಪಡೆದು ನೆಮ್ಮದಿ ಬದಕನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದರು.
ವೇದಿಕೆಯ ಮೇಲೆ ಗುಡಸ ಗ್ರಾಮ ಪಂಚಾಯತಿ ಸದಸ್ಯರಾದ ಬಸಪ್ಪ ಮಣ್ಣಿಕೇರಿ, ಬಸವರಾಜ ಅಮ್ಮಣಗಿ, ಸುಜಾತಾ ಪಟ್ತಣಶೆಟ್ಟಿ, ಶ್ರೀ. ಸಂತೋಷ ರಾಜಾಪೂರೆ ಮತ್ತು ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕರಾದ ವ್ಹಿ.ಎಮ್.ಘಟಪಣದಿ ಹಾಗೂ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಜಿ.ಎನ್. ಮಾಳಗಿ ಹಾಜರಿದ್ದರು. ಪ್ರಾರಂಭದಲ್ಲಿ ಸ್ವಯಂ ಸೇವಕಿಯರು ಪ್ರಾರ್ಥನೆ ಹಾಗೂ ಎನ್.ಎಸ್.ಎಸ್ ಗೀತೆ ಪ್ರಸ್ತುತ ಪಡಿಸಿದರು. ಬರಮಪ್ಪಾ ಹುಚ್ಚಣ್ಣವರ ಎಲ್ಲರನ್ನು ಸ್ವಾಗತಿಸಿ ಪರಿಚಯಿಸಿದರು. ಪ್ರೊ. ಜಿ. ಎನ್. ಮಾಳಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರೇಶ ಕಮತೆ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪರಪ್ಪ ಚೌಗಲಾ ವಂದಿಸಿದರು.