ಹೊಸಪೇಟೆ 21: ಸಕರ್ಾರಿ ಶಾಲೆಗಳ ಅಭಿವೃದ್ಧಿಗೆ ಪೂರಕವಾದ ``ರಾಜ್ಯ ಶಿಕ್ಷಣ ನೀತಿ'' ರೂಪಿಸುವಂತೆ ಸಕಾರ್!ರಿ ಶಾಲೆ ಉಳಿಸಿ ಆಂದೋಲನದ ಮುಖ್ಯ ಪ್ರಚಾರಕರಾದ ಅನಿಲ್ ಶೆಟ್ಟಿ ಆಗ್ರಹಪಡಿಸಿದರು.
ಅವರು ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 20 ರಂದು ಸಕರ್ಾರಿ ಶಾಲೆ ಉಳಿಸಿ ಆಂದೋಲನದ ಅಂಗವಾಗಿ ಆಯೋಜಿಸಲಾಗಿದ್ದ ಚಚರ್ಾಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಸಕರ್ಾರಿ ಶಾಲೆ ಉಳಿಸಿ ಆಂದೋಲನಕ್ಕೆ ಜನಸ್ಪಂದನೆ ದೊರಕಿದ್ದು ಈಗಾಗಲೇ ಕನರ್ಾಟಕ ರಾಜ್ಯದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಜನರು ಆಂದೋಲನದಲ್ಲಿ ತೊಡಗಿಕೊಂಡಿದ್ದಾರೆ. ಚಿತ್ರ ನಟರನ್ನು ಸೇರಿಸಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರು ಈ ಆಂದೋಲನದ ಜೊತೆ ಕೈಜೋಡಿಸಿ ಸಕರ್ಾರಿ ಶಾಲೆಗಳ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಕನರ್ಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ಸಕರ್ಾರಿ ಶಾಲೆಗಳಲ್ಲಿ ಉಚಿತ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಖಾತ್ರಿಗೊಳಿಸುವುದು. ಕಾಲಕಾಲಕ್ಕೆ ರಾಜ್ಯ ಶಿಕ್ಷಣ ನೀತಿಯಲ್ಲಿ ಸಮರ್ಪಕ ತಿದ್ದುಪಡಿ ಮಾಡಿ ಶಿಕ್ಷಣದ ಗುಣಮಟ್ಟವನ್ನು ವಿಶ್ವದಜರ್ೆಗೆ ಏರಿಸುವುದು. ಕರುನಾಡ ಮಕ್ಕಳ ಉಜ್ಜ್ವಲ ಭವಿಷ್ಯಕ್ಕಾಗಿ, ಈ ಹಿಂದೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಪೂನಃಶ್ಚೇತನಗೊಳಿಸುವುದು ತಮ್ಮ ಧ್ಯೇಯವಾಗಿದೆ ಎಂದು ಅನಿಲ್ ಶೆಟ್ಟಿ ತಿಳಿಸಿದರು.
``ಈ ಆಂದೋಲನವು ಯಾವುದೇ ಸಕರ್ಾರದ, ಪಕ್ಷದ, ಖಾಸಗಿ ಸಂಸ್ಥೆಗಳ ವಿರೋಧವಿಲ್ಲದೆ ಸಮಸ್ತ ಕನ್ನಡಿಗರೆಲ್ಲರೂ ಸೇರಿ, ಮಕ್ಕಳ ಭವಿಷ್ಯವನ್ನು ಸುಭದ್ರಗೊಳಿಸಲು ಮಾಡಬೇಕಾದ ಮಹತ್ಕಾಂರ್ಯವಾಗಿದ್ದು, ಶಿಕ್ಷಣ ಒಂದೇ ಬಡತನದ ನಿಮರ್ೂಲನೆಗೆ ಇರುವ ಏಕೈಕ ಆಯುಧ'' ಎಂದು ಎಂದು ಅನಿಲ್ ಶೆಟ್ಟಿ ಹೇಳಿದರು.
ಅನಿಲ್ ಶೆಟ್ಟಿ ಕೂಡ ಸಕರ್ಾರಿಶಾಲೆಯಲ್ಲಿ ಓದಿದ್ದು, ತಾವು ಓದಿದ ಶಾಲೆಗೆ ಹಣಕಾಸಿನ ನೆರವನ್ನು ನೀಡಲು ಮುಂದಾಗಿದ್ದು, ಸಮಾಜದ ಗಣ್ಯ ವ್ಯಕ್ತಿಗಳು ತಾವುಗಳು ಓದಿದ ಶಾಲೆಗಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಕರೆ ಕೊಟ್ಟರು. ಚಿತ್ರರಂಗದ ರಿಷಬ್ ಶೆಟ್ಟಿ, ರಾಗಿಣಿ ದ್ವಿವೇದಿ, ಪ್ರಣೀತಾ ಸುಭಾಷ್ ಮುಂತಾದವರು ಈ ಅಂದೋಲನದ ರಾಯಭಾರಿಗಳಾಗಿ ಕೈ ಜೋಡಿಸಿದ್ದು ಸಕರ್ಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ ಎಂದರು.
ವಿಜಯನಗರ ಮಹಾವಿದ್ಯಾಲಯದ ಅಧ್ಯಕ್ಷ ಶ್ರೀ ಸಾಲಿ ಸಿದ್ದಯ್ಯ ಈ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಕರ್ಾರೀ ಶಾಲೆಗಳು ಗ್ರಾಮಾಂತರ ಪ್ರದೇಶಗಳ ಮಕ್ಕಳಿಗೆ ಭವಿಷ್ಯ ನಿಮರ್ಿಸುವ ಕೇಂದ್ರಗಳಾಗಿವೆ ಎಂದರು. ಪಿಯು ಸ್ವತಂತ್ರ ಮಹಾವಿದ್ಯಾಲಯದ ಅಧ್ಯಕ್ಷ ಶ್ರೀ ಚನ್ನ ಬಸವನ ಗೌಡ ಮಾತನಾಡಿ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಸಕರ್ಾದ ಹೊಣೆಗಾರಿಕೆಯನ್ನು ಚುನಾಯಿತ ಪ್ರತಿನಿಧಿಗಳಿಗೆ ಮನದಟ್ಟುಮಾಡಿಸುವುದು ಅಗತ್ಯವಾಗಿದೆ ಎಂದರು. ಕೊಟ್ಟೂರಿನ ಸಕರ್ಾರಿ ಶಾಲಾ ಮುಖ್ಯೋಪಾಧ್ಯಾಯಿನಿ ಎಸ್.ಎಂ.ನಳಿನಿ ಮಾತನಾಡಿ ಸಕರ್ಾರಿ ಶಿಕ್ಷಕರು ವಿದ್ಯಾಥರ್ಿಗಳ ದಾಖಲಾತಿಗಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ; ಶಿಕ್ಷಕರು ವಿದ್ಯಾಥರ್ಿಗಳ ಕಲಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲು ಅವರಿಗೆ ವಹಿಸುವ ಜನಗಣತಿ ಮುಂತಾದ ಅನ್ಯ ಕಾರ್ಯಭಾರಗಳಿಂದ ಮುಕ್ತಗೊಳಿಸಬೇಕು ಎಂದರು.
ಪಿಡಿಐಟಿಯ ಪ್ರಾಂಶುಪಾಲರಾದ ಡಾ. ಎಸ್.ಎಂ.ಶಶಿಧರ್ ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಕರ್ಾರೀ ಶಾಲೆಗಳ ಮಹತ್ವದ ಕುರಿತು ಸ್ವರಚಿತ ಕವನ ವಾಚಿಸಿದ ಅವರು ಸಕರ್ಾರೀ ಶಾಲೆಗಳ ಹೊಣೆ ಕೇವಲ ಸಕರ್ಾರದ್ದು ಎಂದು ಭಾವಿಸದೆ ಸಾರ್ವಜನಿಕರು ಮತ್ತು ಸಮುದಾಯ ಮಹತ್ವದ ಪಾತ್ರ ವಹಿಸಬೇಕಿದೆ ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಜಾನೆಕುಂಟೆ ಬಸವರಾಜ ಮಾತನಾಡಿ ಜನರು ಗುಡಿಗುಂಡಾರಗಳ ನಿಮರ್ಾಣಕ್ಕಿಂತ ಮಕ್ಕಳ ಭವಿಷ್ಯ ರೂಪಿಸುವ ಶಾಲೆಗಳ ನಿಮರ್ಾಣ, ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶ್ರೀ ಜಾನೆಕುಂಟೆ ಬಸವರಾಜ ಈ ಅಂದೋಲನಕ್ಕೆ ಇಪ್ಪತ್ತೈದು ಸಾವಿರ ರೂಪಾಯಿಗಳ ದೇಣಿಗೆ ಘೋಷಿಸಿದರು. ಅನಿಲ್ ಶೆಟ್ಟಿ ಅವರು ಈ ಹಣವನ್ನು ಹೊಸಪೇಟೆಯ ಅಮರಾವತಿ ಸಕರ್ಾರೀ ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ತಿಳಿಸಿದರು. ಜನವರಿ ತಿಂಗಳಲ್ಲಿ ಮತ್ತೆ ಬಂದು ಅಮರಾವತಿ ಸಕರ್ಾರೀ ಶಾಲೆಯ ಅಭಿವೃದ್ಧಿಗಾಗಿ ಸಮುದಾಯದ ಹಾಗೂ ಹಿಂದಿನ ವಿದ್ಯಾಥರ್ಿಗಳ ನೆರವು ಪಡೆಯಲು ಶಿಕ್ಷಣ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅನಿಲ್ ಶೆಟ್ಟಿ ತಿಳಿಸಿದರು.
ಎಸ್.ಬಿ.ಬಿ.ಎನ್. ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಗೌಡ, ಕನರ್ಾಟಕ ರಕ್ಷಣಾ ವೇದಿಕೆಯ ಗುಜ್ಜಲ್ ನಾಗರಾಜ್, ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಚಂದ್ರಶೇಖರ ಶಾಸ್ತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಾಪಕಿ ಸಿಂಧೂ ಕಾರ್ಯಕ್ರಮ ನಿರೂಪಿಸಿದರು. ಮಧ್ವರಾಜ್ ವಂದನಾರ್ಪಣೆ ಸಲ್ಲಿಸಿದರು. ಹೊಸಪೇಟೆಯ ವಿವಿಧ ಸಕರ್ಾರೀ ಶಾಲೆಗಳ ಶಿಕ್ಷಕರು, ವಿದ್ಯಾಥರ್ಿಗಳು, ನಾಗರಿಕರು ಬಂದು ಬಾಗವಹಿಸಿ ಸಂವಾದದಲ್ಲಿ ಭಾಗವಹಿಸಿ ತಮ್ಮ ಶಿಕ್ಷಣ ಪ್ರೇಮವನ್ನು ಮೆರೆದರು.