ಖೈದಿಗಳ ಮನ ಪರಿವರ್ತನೆಗಾಗಿ ಜೈಲುಗಳಲ್ಲಿ ಗೋಶಾಲೆ ಆರಂಭಿಸಿ; ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್

ಪುಣೆ, ಡಿ 8 :   ಖೈದಿಗಳ  ಮಾನಸಿಕ ಪರಿವರ್ತನೆಗಾಗಿ ದೇಶಾದ್ಯಂತ  ಇರುವ  ಜೈಲುಗಳಲ್ಲಿ  ಗೋಶಾಲೆಗಳನ್ನು  ಆರಂಭಿಸಬೇಕು  ಎಂದು  ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್  ಭಾಗ್ವತ್  ಅವರು ಅಭಿಪ್ರಾಯಪಟ್ಟಿದ್ದಾರೆ.  ಗೋವುಗಳ  ಲಾಲನೆ ಪಾಲನೆ ಮಾಡುವುದರಿಂದ   ಖೈದಿಗಳ   ಮೆದುಳು, ಮನಸ್ಸಿನಲ್ಲಿರುವ    ಕ್ರೂರತ್ವ   ತಗ್ಗಲಿದೆ  ಎಂದು  ಅವರು ವ್ಯಾಖ್ಯಾನಿಸಿದ್ದಾರೆ. ಶನಿವಾರ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ   ಮಾತನಾಡಿದ ಅವರು,  ಗೋವುಗಳ ಸಾಕಾಣಿಕೆಯಿಂದ  ಖೈದಿಗಳ  ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ  ತರಬಹುದು   ಎಂದು ಕೆಲವು ಜೈಲು ಅಧಿಕಾರಿಗಳು  ತಮ್ಮ ಗಮನಕ್ಕೆ  ತಂದಿದ್ದಾರೆ ಎಂದರು. ಈ ವಿಧಾನವನ್ನು ದೇಶದ ಎಲ್ಲಾ ಜೈಲುಗಳಲ್ಲಿ  ಅನುಷ್ಠಾನಗೊಳಿಸುವ ಅಗತ್ಯವಿದೆ.  ಖೈದಿಗಳ ಮಾನಸಿಕ ಸ್ಥಿತಿಯನ್ನು,   ಗೋವುಗಳನ್ನು ಸಾಕುವ ಮೊದಲು ಮತ್ತು ನಂತರ ಮನೋವಿಜ್ಞಾನಿಗಳೊಂದಿಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ  ನಂತರ ಅದನ್ನು  ದಾಖಲಿಸಬೇಕು. ಎಲ್ಲ ಕಾರಾಗೃಹಗಳ   ಫಲಿತಾಂಶ ವನ್ನು  ಪಡೆದು ವರದಿಯನ್ನು    ಅಂತರರಾಷ್ಟ್ರೀಯ ಸಮುದಾಯದ  ಮುಂದೆ  ಮಂಡಿಸಬಹುದು ಎಂದು  ಅವರು  ಹೇಳಿದ್ದಾರೆ. ಮತ್ತೊಂದೆಡೆ  ಗೋವುಗಳ  ಬಗ್ಗೆ ವಿದೇಶಿಯರ  ದೃಷ್ಟಿಕೋನವನ್ನು  ಅವರು  ವಿವರಿಸಿದ್ದಾರೆ. ಹಸು  ಎಂದರೆ ಹಾಲು, ಆದರೆ,   ಮಾಂಸಕ್ಕಾಗಿ   ಹಸು ಸಾಕುವುದು  ಎಂದು ವಿದೇಶಿಯರು  ಭಾವಿಸಿದ್ದಾರೆ.  ಭಾರತೀಯ ಸಂಸ್ಕೃತಿಯಲ್ಲಿ ಜನರು ಹಸುವಿನೊಂದಿಗೆ ಮಾನಸಿಕ ಸಂಬಂಧವನ್ನು  ಹೊಂದಿರುತ್ತಾರೆ  ಉದಾಹರಣೆಗೆ,   ನಮ್ಮ ದೇಶದಲ್ಲಿ   ಹಸುವನ್ನು   ವಾಣಿಜ್ಯ ಸರಕನ್ನಾಗಿ  ಎಂದು ನೋಡುವುದಿಲ್ಲ    ಗೋವು ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ. ಹಸುವಿನ ಮಹತ್ವವನ್ನು ತಿಳಿದಿದ್ದ ನಮ್ಮ ಪೂರ್ವಜರು ರಾಸಾಯನಿಕ ಗೊಬ್ಬರಗಳಿಲ್ಲದೆ ಜಾನುವಾರು ಗೊಬ್ಬರದೊಂದಿಗೆ ಕೃಷಿ ಮಾಡುತ್ತಿದ್ದರು. ಆದರೆ, ಈಗ   ಪರಿಸ್ಥಿತಿ ಬದಲಾಗಿದೆ  ಎಂದು  ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಸಮಾಜದ  ಯೋಗ ಕ್ಷೇಮಕ್ಕಾಗಿ  ಗೋವುಗಳ ಸಂರಕ್ಷಣೆಗಾಗಿ   ಜನರು ಶ್ರಮಿಸಬೇಕು   ಎಂದು ಕರೆ ನೀಡಿದ್ದಾರೆ.