ನವದೆಹಲಿ ಮೇ ೨೫, ಭಾರತದಲ್ಲಿ ದೇಶೀಯ ನಾಗರಿಕ ವಿಮಾನಯಾನ ಸೇವೆಗಳು ಇಂದಿನಿಂದ ಆರಂಭಗೊಳ್ಳಲಿವೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ವಿಮಾನ ಪ್ರಯಾಣಕ್ಕಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸಿವೆ. ದೇಶೀಯ ವಿಮಾನಗಳ ಮೂಲಕ ರಾಜ್ಯಕ್ಕೆ ಬರುವ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ಒಳಗಾಗುವುದು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲಿ ೭ ಗಳ ಕ್ವಾರಂಟೈನ್ ನಿಗದಿಪಡಿಸಿದ್ದರೆ, ಉಳಿದ ರಾಜ್ಯಗಳಲ್ಲಿ ೧೪ ದಿನಗಳನ್ನು ನಿಗದಿಪಡಿಸಿದೆ. ವಿಮಾನದ ಮೂಲಕ ಉತ್ತರ ಪ್ರದೇಶ ರಾಜ್ಯ ಪ್ರವೇಶಿಸುವ ಪ್ರಯಾಣಿಕರಿಗೆ ಅಲ್ಲಿನ ರಾಜ್ಯ ಸರ್ಕಾರ ನಿಯಮ ರೂಪಿಸಿದ್ದು, ರಾಜ್ಯಕ್ಕೆ ಬರುವ ಪ್ರಯಾಣಿಕರು ೧೪ ದಿನಗಳ ಕಾಲ ಹೋಮ್ ಕ್ಯಾರೆಂಟೈನ್ ಕಡ್ಡಾಯಗೊಳಿಸಿದೆ. ಒಂದೊಮ್ಮೆ ಹೋಂಕ್ವಾರಂಟೈನ್ ಸೌಲಭ್ಯ ಹೊಂದಿಲ್ಲದವರು, ಸರ್ಕಾರವೇ ಕ್ವಾರಂಟೀನ್ ವ್ಯವಸ್ಥೆ ಕಲ್ಪಿಸಲಿದೆ.
ವಿಮಾನದ ಮೂಲಕ ರಾಜ್ಯಕ್ಕೆ ಆಗಮಿಸುವ ವ್ಯಕ್ತಿಗಳು ೧೪ ದಿನಗಳ ಕಾಲ ಹೋಮ್ ಕ್ವಾರಂಟೀನ್ ನಲ್ಲಿ ಇರಬೇಕು ಎಂದು ಪಂಜಾಬ್ ಸರ್ಕಾರ ಷರತ್ತು ವಿಧಿಸಿದೆ. ಜಮ್ಮು-ಕಾಶ್ಮೀರ ಸರ್ಕಾರ ಕೂಡ ಎರಡು ವಾರಗಳ ಕ್ವಾರಂಟೀನ್ ನಿಯಮ ವಿಧಿಸಿದೆ. ಮಹಾರಾಷ್ಟ್ರದಲ್ಲಿ ವಿಮಾನಯಾನ ಸೇವೆ ನಿಜವಾಗಿಯೂ ಅಗತ್ಯವಾಗಿರುವವರಿಗೆ ಮಾತ್ರ ಒದಗಿಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಲಾಕ್ ಡೌನ್ ನಡುವೆ ಇಂದಿನಿಂದ ದೇಶಾದ್ಯಂತ ವಿಮಾನ ಸೇವೆಗಳು ಆರಂಭಗೊಳ್ಳುತ್ತಿದ್ದು, ದೇಶದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗುತ್ತಿದೆ. ಆದರೆ ಅನೇಕ ರಾಜ್ಯಗಳು ವಿಮಾನಯಾನ ಸೇವೆಯನ್ನು ಪರೋಕ್ಷವಾಗಿ ವಿರೋಧಿಸುತ್ತಿವೆ.