ಲೋಕದರ್ಶನವರದಿ
ಬ್ಯಾಡಗಿ19: ಕಳೆದ ಎರಡು ತಿಂಗಳುಗಳಿಂದ ಕೋವಿಡ್ -19 ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಎಪಿಎಂಸಿಯ ಒಣ ಮೆಣಸಿನಕಾಯಿಯನ್ನು ವಹಿವಾಟನ್ನು ಮೇ 21 ರಿಂದ ಪ್ರಾರಂಭಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಕರಬಸಪ್ಪ ನಾಯ್ಕರ ತಿಳಿಸಿದ್ದಾರೆ.
ಸ್ಥಳೀಯ ಎಪಿಎಂಸಿ ಸಭಾಭವನದಲ್ಲಿ ಸೋಮವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು ಸಕರ್ಾರದ ಲಾಕ್ ಡೌನ್ ಆದೇಶದ ಮಾರ್ಗಸೂಚಿ ಪ್ರಕಾರ ಇ- ಟೆಂಡರ್ ಪ್ರಕ್ರಿಯೆ ಚಾಲನೆಗೆ ಅನುಮತಿ ನೀಡಿದ್ದು, ವರ್ತಕರು ಸಹ ಸಕರ್ಾರದ ಷರತ್ತುಗಳ ಅನ್ವಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವಹಿವಾಟನ್ನು ಪ್ರಾರಂಭಿಸಬಹುದು. ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಅಂತಹ ಅಂಗಡಿಗಳ ವರ್ತಕರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರಲ್ಲದೆ ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ರೈತರು, ಚಾಲಕರು ಹಾಗೂ ಕ್ಲೀನರ್ ಗಳಿಗೆ ಚೆಕ್ ಪೋಸ್ಟ್'ಗಳಲ್ಲಿ ಥರ್ಮಲ್ ಸ್ಕಿನಿಂಗ್ ಕಡ್ಡಾಯ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ವೈದ್ಯರ ಪ್ರಮಾಣ ಪತ್ರ ತೋರಿಸಿದರೆ ಮಾತ್ರ ಮಾರುಕಟ್ಟೆಯ ಒಳಗೆ ನೀಡಲಾಗುವುದು, ಅಲ್ಲದೇ ವರ್ತಕರು ಸಹ ತಮ್ಮ ಅಂಗಡಿಗಳಿಗೆ ಬರುವವರ ಮಾಹಿತಿಯನ್ನು ಕಡ್ಡಾಯವಾಗಿ ಎಪಿಎಂಸಿಗೆ ಸಲ್ಲಿಸಬೇಕೆಂದು ತಿಳಿಸಿದರು.
ಎಪಿಎಂಸಿ ಕಾರ್ಯದಶರ್ಿ ಎಸ್. ಬಿ. ನ್ಯಾಮಗೌಡ ಮಾತನಾಡಿ, ಸಕರ್ಾರದ ಮಾರ್ಗಸೂಚಿ ಪ್ರಕಾರ ಮೇ 21 ರಿಂದ ವರ್ತಕರಿಗೆ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವಹಿವಾಟನ್ನು ನಡೆಸಲು ಅವಕಾಶ ಕಲ್ಪಿಸಿದ್ದು, ಮಾರುಕಟ್ಟೆಯ ವಹಿವಾಟು ನಡೆಯುವ ಪ್ರತಿ ಸೋಮವಾರ ಹಾಗೂ ಗುರುವಾರ ತುಂಬು ತೆಗೆಯುವ ಕೂಲಿ ಕಾಮರ್ಿಕರಿಗೆ ಮಾರುಕಟ್ಟೆಯಲ್ಲಿ ಪ್ರವೇಶ ನಿಷೇಧ ಮಾಡಲಾಗಿದೆ.
ಅಲ್ಲದೇ ಮಾರುಕಟ್ಟೆಯ ಪ್ರಾಂಗಣದಲ್ಲಿ ಗುಟ್ಕಾ, ತಂಬಾಕು, ಅಡಿಕೆ ಎಲೆ ಹಾಕಿಕೊಂಡು ತಿನ್ನುವುದು, ಉಗುಳುವುದನ್ನು ನಿಷೇಧಿಸಿದ್ದು, ಮಾರುಕಟ್ಟೆಯಲ್ಲಿ ವರ್ತಕರು, ರೈತರಿಗೆ ಹಾಗೂ ಪರವಾನಿಗೆ ಪಡೆದ ಹಮಾಲರಿಗೆ, ಅಂಗಡಿ ಗುಮಾಸ್ತರಿಗೆ ಮಾತ್ರ ಅವಕಾಶವಿದೆ. ಇವರನ್ನು ಹೊರತು ಪಡಿಸಿ ಬೇರೆಯವರು ಅನಾವಶ್ಯಕವಾಗಿ ಮಾರುಕಟ್ಟೆ ಪ್ರವೇಶ ಮಾಡಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಎಪಿಎಂಸಿ ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಸದಸ್ಯರಾದ ಚನಬಸಪ್ಪ ಹುಲ್ಲತ್ತಿ, ವೀರಭದ್ರಪ್ಪ ಗೊಡಚಿ, ಶಂಭನಗೌಡ ಪಾಟೀಲ, ಕುಮಾರ ಚೂರಿ, ಮಾಲತೇಶ ಹೊಸಳ್ಳಿ, ಶಶಿಧರ ದೊಡ್ಡಮನಿ ಬಾಬಣ್ಣ ಪಾಟೀಲ, ವಿಜಯ ಮಾಳಗಿ, ಶಿವಪ್ಪ ಕುಮ್ಮೂರ, ನೀಲವ್ವ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.