ಬೆಂಗಳೂರು, ಮೇ 10, ಇಂದು ವಿಶ್ವ ತಾಯಂದಿರ ದಿನದ ಪ್ರಯುಕ್ತ ಸ್ಯಾಂಡಲ್ ವುಡ್ ನ ಸ್ಟಾರ್ ನಟರು ತಮ್ಮ ತಾಯಿಯನ್ನು ಸ್ಮರಿಸಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ.ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ತಮ್ಮ ತಾಯಿ ಪಾರ್ವತಮ್ಮ ಅವರ ಜೊತೆಗಿನ ಫೋಟೋ ಶೇರ್ ಮಾಡಿ, ತಾಯಿನೇ ಎಲ್ಲಾ ಬದಲಾಗೋದಿಲ್ಲ. ಯುಗ ಉರುಳಿ ಕಳೆದೋದರು ಎಂದು ತಾವು ಅಭಿನಯದ ಜೋಗಿ ಚಿತ್ರದ ಸಾಲುಗಳನ್ನು ಬರೆಯುವ ಮೂಲಕ ಶುಭಕೋರಿದ್ದಾರೆ.ನವ ರಸ ನಾಯಕ ಜಗ್ಗೇಶ್ ಅವರು ತಮ್ಮ ಟ್ವಿಟರ್ ನಲ್ಲಿ ಹೀಗಿರದಿರಲಿ #ಅಮ್ಮನದಿನ’ ಎಂದು ಹ್ಯಾಷ್ ಟ್ಯಾಗ್ ಬಳಸಿ ಅಮ್ಮಂದಿರ ದಿನದ ಶುಭ ಕೋರಿದ್ದಾರೆ.
ಅಮ್ಮ ಇರುವ ಅದೃಷ್ಟವಂತರೆ
ಅಮ್ಮನೆ ಈ ಜಗಕ್ಕೆ ಪರಿಚಯಿಸಿದ
ದೇವರು!#ಕ್ಷಣಿಕಸುಖದಮಾಯೆ #ಹಣಕೀರ್ತಿ ಏನೆ ಗಳಿಸಿದರು ಅಮ್ಮ ಜೀವಕೊಟ್ಟ ಮೇಲೆ ಜಗತ್ತುಸಿಕ್ಕಿದ್ದು!
ಇದ್ದಾಗಲೆ ಅವಳಿಗಾಗಿ ಬಾಳಿ!ಸತ್ತಮೇಲೆ
ಪೋಟೋ ಮುಂದೆ ಅವಳ ಹೆಸರಲ್ಲಿ ಒಡೆಪಾಯಸ ಪ್ರೀತಿಬೇಡ!
ಹೋದಮೇಲೆ ಮತ್ತೆಸಿಗಳು ಆದೇವತೆ!
ಅಮ್ಮನ ವಸ್ತು ನನ್ನ ಬಳಿ ಜೋಪಾನ!
ಎಂದು ಹೃದಯಾಳದಿಂದ ಬರೆಯುವ ಮೂಲಕ
ಅವರ ತಾಯಿಯ ಸೀರೆ ಹಾಗೂ ಕೆಲ ವಸ್ತುಗಳನ್ನು ಇಂದಿಗೂ ಜೋಪಾನವಾಗಿಟ್ಟುಕೊಂಡಿರುವ ಫೋಟೋ ಹಾಕಿ ಬದುಕಿರುವಾಗಲೇ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಬುದ್ಧಿವಾದ ಹೇಳಿದ್ದಾರೆ.ಇನ್ನು, ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟರ್ ಮೂಲಕ ಎಲ್ಲಾ ಮಾತೃಹೃದಯಿ ಸ್ವರೂಪ ಅಮ್ಮಂದಿರಿಗೆ ಶುಭಾಶಯ ಕೋರಿದ್ದಾರೆ. ಜೀವ ಕೊಟ್ಟ ನನ್ನ ಹೆತ್ತ ತಾಯಿಗೆ ಜೀವನ ಕೊಟ್ಟ ನನ್ನ ಕನ್ನಡ ತಾಯಿಗೆ , ಅನ್ನ ಕೊಟ್ಟ ಭೂತಾಯಿಗೆ , ತಮ್ಮ ಹೃದಯಗಳಲ್ಲಿ ಪ್ರೀತಿಯ ಸ್ಥಾನ ಕೊಟ್ಟು , ನನ್ನನ್ನು ಅಕ್ಕರೆಯಿಂದ ಬೆಳೆಸುತ್ತಿರುವ ಎಲ್ಲಾ ಮಾತೃಹೃದಯಿ ಸ್ವರೂಪ ಅಭಿಮಾನಿ ತಾಯಂದಿರಿಗೆ ನಾನು ಸದಾ ಋಣಿ ಎಂದು ಶುಭ ಕೋರಿದ್ದಾರೆ.ಅಲ್ಲದೇ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಅಕ್ಕರೆಯ ಮುತ್ತು ಕೊಡುತ್ತಿರುವ ಫೋಟೋವೊಂದನ್ನು ಶೇರ್ ಮಾಡಿ ಅಮ್ಮ ನೀನು ನಮಗಾಗಿ ಎಂದು ವಿಶ್ವ ತಾಯಂದಿರ ದಿನದ ಶುಭ ಕೋರಿದ್ದಾರೆ.