ದ್ವಿವಿಪಕ್ಷೀಯ ಶೃಂಗ ಸಭೆಗೆ ಫ್ರಾನ್ಸ್ ನಲ್ಲಿ ವೇದಿಕೆ ಸಜ್ಜು

      ನವದೆಹಲಿ, ಆ 22         ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುಯಲ್ ಮ್ಯಾಕ್ರನ್ ನಡುವೆ ಗುರುವಾರ ನಡೆಯಲಿರುವ ದ್ವಿಪಕ್ಷೀಯ ಸಭೆಗೆ ವೇದಿಕೆ ಸಜ್ಜಾಗಿದೆ. 

      ಪ್ಯಾರಿಸ್ ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಫ್ರಾನ್ಸ್ ನ ಸಾಂಸ್ಕೃತಿಕ ಪ್ರದೇಶ ಹೌಟ್ಸ್ - ಡಿ - ಫ್ರಾನ್ಸ್ ನ ಚೌಟಿಯೋ ಡಿ ಚಾಂಟಿಲಿ ಶೃಂಗದ ಆತಿಥ್ಯ ವಹಿಸಲು ಸಜ್ಜಾಗಿದೆ ಎಂದು ಫ್ರಾನ್ಸ್ ನ ಭಾರತದ ರಾಯಭಾರಿ ಅಲೆಕ್ಸಾಂಡ್ರಿ  ಝೈಗ್ಲರ್ ಟ್ವೀಟ್ ಮಾಡಿದ್ದಾರೆ. 

  ಚಾಂಟಿಲಿ ಪ್ರದೇಶದಲ್ಲಿನ ನೋನೆಟ್ಟೆ ಕಣಿವೆಯಲ್ಲಿ ಬಂಡೆಗಳಿಂದ ನಿರ್ಮಿತವಾದ ಕೋಟಿ ಕಟ್ಟಡ ಪ್ಯಾರಿಸ್ ನಿಂದ ಸೆನ್ಸಿಲ್ ವರೆಗಿನ ರಸ್ತೆಯನ್ನು ನಿಯಂತ್ರಿಸಿತ್ತು. ಈ ಪ್ರದೇಶದಲ್ಲಿದ್ದ ಎರಡು ಪುರಾತನ ಕಟ್ಟಡಗಳ ಪೈಕಿ ಒಂದು ಕಟ್ಟಡ ಫ್ರೆಂಚ್ ಕ್ರಾಂತಿ ಸಂದರ್ಭದಲ್ಲಿ ನಾಶವಾಗಿದ್ದು 1870 ರಲ್ಲಿ ಮರು ನಿರ್ಮಾಣ ಮಾಡಲಾಯಿತು.  

   ಆಗಸ್ಟ್ 25 ಮತ್ತು 26 ರಂದು ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಅಧ್ಯಕ್ಷ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. 

      ಪರಿಸರ, ಹವಾಮಾನ ಬದಲಾವಣೆ, ಡಿಜಿಟಲ್ ಪರಿವರ್ತನೆ ಮೊದಲಾದ ವಿಚಾರಗಳು ಕುರಿತು ಪ್ರಧಾನಿ ಮೋದಿ ಶೃಂಗದಲ್ಲಿ ಮಾತನಾಡುವ ನಿರೀಕ್ಷೆ ಇದೆ. 

  ಶೃಂಗದ ನೇಪಥ್ಯದಲ್ಲಿ ಇತರ ದೇಶಗಳ ನಾಯಕರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. 

  ಜಿ 7 ಶೃಂಗಕ್ಕೂ ಮುನ್ನ ಪ್ರಧಾನಿ ಮೋದಿ ಫ್ರಾನ್ಸ್ ಗೆ ಗುರುವಾರ ಮತ್ತು ಶುಕ್ರವಾರ ಅಧಿಕೃತ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರು ಮತ್ತು ಪ್ರಧಾನಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. 

     ಪ್ಯಾರಿಸ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಸಹ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ನಿಡ್ ಡಿ ಐಗಲ್ ನಲ್ಲಿ ವಿಮಾನ ಅವಘಡದಲ್ಲಿನ ಭಾರತದ ಸಂತ್ರಸ್ತರಿಗಾಗಿ ನಿರ್ಮಿಸಿರುವ ಸ್ಮಾರಕವನ್ನು ಸಹ ಮೋದಿ ಉದ್ಘಾಟಿಸಲಿದ್ದಾರೆ. 

    ಭಾರತ ಮತ್ತು ಫ್ರಾನ್ಸ್ 1998 ರಿಂದ ತಂತ್ರಗಾರಿಕಾ ಪಾಲುದಾರ ರಾಷ್ಟ್ರಗಳಾಗಿದ್ದು ಬಹುಆಯಾಮದ ಸಂಬಂಧ ಹೊಂದಿವೆ. ಉಭಯ ದೇಶಗಳು ರಕ್ಷಣೆ, ಬಾಹ್ಯಾಕಾಶ ವಲಯ, ಸೈಬರ್ ವಲಯ, ನಾಗರಿಕ ಪರಮಾಣ ಇಂಧನ ಸೇರಿದಂತೆ ಹಲವು ವಲಯಗಳಲ್ಲಿ ದೃಢ ಸಹಕಾರ ಸಂಬಂಧ ಹೊಂದಿದ್ದು ಭಯೋತ್ಪಾದನೆ ನಿಗ್ರಹಕ್ಕೂ ಪಣತೊಟ್ಟಿವೆ.  

   ಭಾರತ ಮತ್ತು ಫ್ರಾನ್ಸ್ ನಡುವಿನ ಉನ್ನತ ಮಟ್ಟದ ರಾಜಕೀಯ ಸಂಬಂಧ ವೃದ್ಧಿಯನ್ನು ಈ ಭೇಟಿ ಹಾಗೂ ಜಿ 7 ಶೃಂಗದ ಆಹ್ವಾನ ಉದ್ದೇಶಿಸಿದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.