ಸಿಬ್ಬಂದಿಗಳು ತಮ್ಮ ಕೆಲಸದಲ್ಲಿ ನೈಪುಣ್ಯತೆ ಬೆಳೆಸಿಕೊಳ್ಳಲಿ: ಬಾಪುಗೌಡ ಕರೆ

ನವಲಗುಂದ-18 , ಯಾವುದೇ ಸಹಕಾರ ಸಂಸ್ಥೆಯಲ್ಲಿ ಉತ್ತಮ  ರೀತಿಯಿಂದ ಆಡಳಿತ ನಡೆಸಬೇಕಾದರೆ ಅಲ್ಲಿರುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಇವರಿಗೆ ಸರಿಯಾದ ತರಬೇತಿ ನೀಡುವುದು ತುಂಬಾ ಅವಶ್ಯಕವಾಗಿದೆ ಪ್ರಸಕ್ತ ಬ್ಯಾಂಕಿಂಗ್ ಕ್ಷೇತ್ರವು ಸಾಕಷ್ಟು ಪೈಪೋಟಿಯನ್ನು ಎದುರಿಸುತ್ತಲಿವೆ. ಅದ್ದರಿಂದ ಸಿಬ್ಬಂದಿಗಳು ತಮ್ಮ ಕೆಲಸದಲ್ಲಿ ನೈಪುಣ್ಯತೆಯನ್ನು ಬೆಳೆಸಿಕೊಂಡು ಸಂಸ್ಥೆಗಳ ಅಭಿವೃದ್ಧಿಗೆ ಕಾರಣಿಭೂತರಾಗಬೇಕೆಂದು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ ಕರೆ ನೀಡಿದರು. 

ಅವರು ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ  ಬೆಂಗಳೂರು, ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ್ ಧಾರವಾಡ, ಕೆ.ಸಿ.ಸಿ. ಬ್ಯಾಂಕ ಧಾರವಾಡ ಹಾಗೂ ಸಹಕಾರ ಇಲಾಖೆ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿವರ್ಾಹಕರುಗಳ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 

ಆಥರ್ಿಕ ಸಮಾನತೆಗೆ ಸಹಕಾರ ಚಳುವಳಿಯು ದಾರಿ ದೀಪವಾಗಿದೆ. ಗ್ರಾಮೀಣ ಪ್ರದೇಶ ಪ್ರಗತಿ ಹೊಂದಬೇಕಾದರೆ ರೈತರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡ ಜಿಲಾ ಸಹಕಾರ ಯೂನಿಯನ್ ನಿದರ್ೇಶಕ ಚಂಬಣ್ಣ ಬಿ. ಗಾಳದೊಟರ ಅವರು ಮಾತನಾಡುತ್ತಾ ಮನುಷ್ಯನ ಜೀವನದಲ್ಲಿ ತರಬೇತಿ ಎನ್ನುವುದು ಅತೀ ಅವಶ್ಯವಾಗಿದೆ. ಇತ್ತೀಚೀನ ದಿನಗಳಲ್ಲಿ ಕಾಯ್ದೆ ಕಾನೂನುಗಳ ತಿದ್ದುಪಡಿಗಳನ್ನು ಹಾಗೂ ಆಧಾಯ ತೆರಿಗೆ ಮತ್ತು ಜಿಎಸ್ಟಿ ಬಗ್ಗೆ ತಿಳಿದುಕೂಳ್ಳಲು ಈ ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಸಹಕಾರಿ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕಾದೆ ಅಲ್ಲಿಯ ಆಡಳಿತ ಮಂಡಲಿ ಮತ್ತು ಮುಖ್ಯ ಕಾರ್ಯನಿವರ್ಾಹಕರ ಪಾತ್ರ ಬಹು ಮುಖ್ಯವಾಗಿದೆ. ಅದಕ್ಕಾಗಿ ಸಹಕಾರಿ ಕಾಯ್ದೆ, ಉಪವಿಧಿ, ನಿಯಮಗಳ ಬಗ್ಗೆ  ತಿಳಿದುಕೂಳ್ಳವುದು ಹಾಗೂ ಸರಕಾರದಿಂದ ದೂರೆಯುವ ಸೌಲಭ್ಯಗಳನ್ನು ತಿಳಿದುಕೂಂಡು ಸದಸ್ಯರಿಗೆ ತಿಳಿಸುವುದರ ಮೂಲಕ ಸಂಘದ ಅಭಿವೃದ್ದಿಗೆ ಪ್ರಯತ್ನಿಸಬೇಕು ಎಂದರು. ಮಹಾಂತೇಶ ಹುಬ್ಬಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವಲಗುಂದ-ಅಣ್ಣಿಗೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ನೌಕರರ ಸಮೀತಿ ಅಧ್ಯಕ್ಷರಾದ ಆರ್.ಬಿ. ಬುಜಂಗನವರ ಅವರು ಸಂಘಗಳ ಅರ್ಹ ಸದಸ್ಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೂಳ್ಳಲು ಇಂತಹ ಕಾರ್ಯಗಾರ ಅವಶ್ಯಕವಾಗಿದೆ. ಇದರಿಂದ ರೈತ ಸದಸ್ಯರು ಸಂಘದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿ ಸಂಘವು ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆಂದರು.

ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಸಹಕಾರಿ ಯೂನಿಯನ ನಿದರ್ೆಶಕ ಬಸನಗೌಡ ಎಸ್. ಕುರಹಟ್ಟಿ ಮತ್ತು  ಸಹಕಾರ ಅಭಿವೃದ್ಧಿ ಅಧಿಕಾರಿ ಶಲವಡಿ ಅವರು ಉಪಸ್ಥಿತರಿದ್ದು ಮಾತನಾಡಿದರು. ಚಾರ್ಟಡರ್್ ಅಕೌಂಟಟ್ ಪಿ.ಎಂ. ಮುದಿಗೌಡ್ರ ಮತ್ತು ಕೆಐಸಿಎಂ ಉಪನ್ಯಾಸಕ ಎಂ.ಜಿ. ಪಾಟೀಲ ಅವರು ಉಪನ್ಯಾಸಕರಾಗಿ ಆಗಮಿಸಿದ್ದರು.

ಎನ್.ಬಿ. ನರೇಂದ್ರ ಅವರು ಸ್ವಾಗತಿಸಿ. ನಿರೂಪಿಸಿದರು. ಬಸವರಾಜ ದಿವಟರ ವಂದಿಸಿದರು.