ಬೆಂಗಳೂರು, ಏ 02,ಇಂದು ಶ್ರೀರಾಮನವಮಿ. ಹಿಂದೂಗಳ ಮನೆ ಮನೆಗಳಲ್ಲಿ ಲಕ್ಷ್ಮಣ, ಸೀತಾ, ಆಂಜನೇಯರ ಸಮೇತ ಶ್ರೀರಾಮನನ್ನು ಭಕ್ತಿ ಭಾವಗಳಿಂದ ಪೂಜಿಸಲಾಗುತ್ತಿದೆ.ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಶ್ರೀರಾಮನವಮಿಯ ಶುಭ ಕೋರಿದ್ದು, “ಎಲ್ಲರಿಗೂ ಶುಭವಾಗಲಿ” ಎಂದು ಟ್ವೀಟ್ ಮಾಡಿದ್ದಾರೆ.ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲೆಡೆ ನಡೆಯಬೇಕಿದ್ದ ಪಾನಕ, ಕೋಸಂಬರಿ ಸಮಾರಾಧನೆ ನಡೆಯುತ್ತಿಲ್ಲ. ಮನೆಗಳಲ್ಲಿ ಮಾತ್ರ ಹಬ್ಬ ಆಚರಿಸಲಾಗುತ್ತಿದೆ. ಹದಿನಾಲ್ಕು ವರ್ಷಗಳ ವನವಾಸ ಮುಗಿಸಿ, ಲಂಕೆಯಲ್ಲಿ ರಾವಣನನ್ನು ಸಂಹರಿಸಿದ ಬಳಿಕ ಅಯೋಧ್ಯೆಗೆ ಮರಳಿದ ಆದರ್ಶ ಪುರುಷ ಶ್ರೀರಾಮನ ಜನ್ಮದಿನವನ್ನು ಶ್ರೀರಾಮನವಮಿಯಾಗಿ ಪ್ರತಿವರ್ಷ ಆಚರಿಸಲಾಗುತ್ತದೆ.