ಬೆಂಗಳೂರು , ಜೂನ್ 8, ರಾಜ್ಯದಲ್ಲಿ ಭಕ್ತರಪಾಲಿಗೆ ಇಂದಿನಿಂದ ದೇವ -ದೇವತೆಗಳ ದರ್ಶನ ಭಾಗ್ಯ ...!ಅಂತೆಯೇ ಶೃಂಗೇರಿ ಶಾರದಾಂಬೆ ದೇವಾಲಯ ಕೂಡ ಇಂದಿನಿಂದ ಭಕ್ತರ ಪಾಲಿಗೆ ತೆರೆಯಲಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ ರಾಜ್ಯದ ಅನೇಕ ದೇವಾಲಯಗಳು ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ದೇವಾಲಯಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಂತೆಯೇ ಶೃಂಗೇರಿ ಶಾರದಾಂಬೆ ದೇವಾಲಯ ಕೂಡ ಇಂದಿನಿಂದ ತೆರೆಯಲಿದೆ. ಈ ಸಂಬಂಧ ಮಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ, ಶೃಂಗೇರಿ ಶಾರದಾಂಬೆ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗಲಿದ್ದು,ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ರವರೆಗೆ ಹಾಗೂ ಸಂಜೆ 5ರಿಂದ 8 ಗಂಟೆಯವರಗೆ ಮಾತ್ರ ದೇವಾಲಯ ತೆರೆಯಲಿದೆ. ಇನ್ನೂ, ದೇವಾಲಯದೊಳಗೆ ಒಂದು ಬಾರಿಗೆ 25 ಭಕ್ತರಿಗೆ ಮಾತ್ರ ಪ್ರವೇಶವಿರಲಿದೆ. ಸಾಮಾಜಿಕಅಂತರ ಕಾಪಾಡಬೇಕು,ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ಕೆಲವು ಷರತ್ತು ಹಾಕಲಾಗಿದೆ.