ಲೋಕದರ್ಶನವರದಿ
ತಾಳಿಕೋಟೆ16: ಬಡತನದ ನೋವು ನಲಿವುಗಳ ಮಧ್ಯ ಬೆಳೆದು ಬಂದಿರುವ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಸಿದ್ದಗಂಗಾ ಮಠದಲ್ಲಿಯ ದಾಸೋಹದ ಕಾರ್ಯ ಮೈಗೂಡಿಸಿಕೊಂಡು ಮುನ್ನಡೆದಿರುವದು ಶ್ಲಾಘನೀಯವಾಗಿದೆ ಎಂದು ಖಾಸ್ಗತೇಶ್ವರ ಮಠದ ಪಟ್ಟಾಧೀಶರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ನುಡಿದರು.
ಶನಿವಾರರಂದು ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕೊರೊನಾ ವೈರಸ್ ಕುರಿತು ವಿದಿಸಿದ ಲಾಕ್ಡೌನ್ ಸಂದರ್ಬದಲ್ಲಿ ಹೊರರಾಜ್ಯಗಳಲ್ಲಿ ಸಿಲುಕಿಕೊಂಡು ಪಟ್ಟಣದ ಆಗಮಿಸಿ ಸಾಂಸ್ಥಿಕ ಕ್ವಾರೆಂಟೈನ್ನಲ್ಲಿರುವ ಬಡ ಕೂಲಿಕಾಮರ್ಿಕರಿಗಾಗಿ ತಯಾರಿಸಲಾಗುತ್ತಿರುವ ದಾಸೋಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಶ್ರೀಗಳು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಸಿದ್ದಗಂಗಾ ಮಠದಲ್ಲಿಯ ಶಿಕ್ಷಣದೊಂದಿಗೆ ಅಲ್ಲಿಯ ದಾಸೋಹವನ್ನು ಸ್ವಿಕರಿಸಿ ಬೆಳೆದಿದ್ದಾರೆ ಬಡವರ ಕಷ್ಟ ಏನೇಂಬುದನ್ನು ಅರೀತವರಾಗಿದ್ದಾರೆ ಬಡವರಿಗೆ ಕಷ್ಟ ಬಂದಾಗ ಯಾವಾಗಲೂ ಅವರು ಸುಮ್ಮನೇ ಕುಳಿತಿಲ್ಲಾ ತಮ್ಮ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ ತುಮಕೂರ ಸಿದ್ದಗಂಗಾ ಶ್ರೀಗಳ ಹಾಗೂ ಲಿಂ.ಶ್ರೀ ವಿರಕ್ತಶ್ರೀಗಳ ವಾಣಿಯಂತೆ ತಮ್ಮ ಮನೆಗೂ ಕೂಡಾ ದಾಸೋಹ ನೀಲಯವೆಂದು ಹೆಸರಿಸಿದ್ದಾರೆ ಎಲ್ಲದಾನಗಳಲ್ಲಿ ಅನ್ನದಾನವೆಂಬುದು ಬಹಳೇ ಶ್ರೇಷ್ಠವಾದುದ್ದಾಗಿದೆ ಅಂತಹ ದಾಸೋಹವನ್ನು ಸ್ವಿಕರಿಸಿ ಬೆಳೆದುಬಂದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಅದನ್ನು ಮೈಗೂಡಿಸಿಕೊಂಡು ಕೊರೊನಾ ವೈರಸ್ದಿಂದ ಸಕರ್ಾರ ವಿಧಿಸಿದ ಲಾಕ್ಡೌನ್ ಸಂದರ್ಭದಲ್ಲಿ ಸುಮಾರು 30 ಸಾವಿರ ಕುಟುಂಬಗಳಿಗೆ ದವಸದಾನ್ಯಗಳ ಕಿಟ್ಗಳನ್ನು ತಮ್ಮ ವೈಯಕ್ತಿಕವಾಗಿ ವಿತರಿಸಿದ್ದಾರೆ ಅಲ್ಲದೇ ಹೊರರಾಜ್ಯಗಳಾದ ಗೋವಾ, ಮಹಾರಾಷ್ಟ್ರಾ ಒಳಗೊಂಡಂತೆ ಇನ್ನೂಳಿದ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದ ನಮ್ಮ ತಾಲೂಕಿನ ಎಲ್ಲ ಬಡ ಕೂಲಿಕಾಮರ್ಿಕರನ್ನು ಮರಳಿ ಕರೆತರುವದರೊಂದಿಗೆ ಅವರಿಗೆ ಅತ್ಯಂತ ಗೌರವವಿತವಾಗಿ ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯವನ್ನು ವಿತರಿಸುತ್ತಾ ಸಾಗಿದ್ದಾರೆ.
ದಾನ ಧರ್ಮ ಪರೋಪಕಾರವನ್ನು ಮೈಗೂಡಿಸಿಕೊಂಡು ಸಮಾಜಕ್ಕಾಗಿ ಜನರಿಗಾಗಿ ಮಿಡಿಯುತ್ತಿರುವ ಇವರ ಕುಟುಂಭದ ಹೃದಯದ ಬಡಿತ ಖಾಸ್ಗತನ ಸನ್ನಿದಿಗೆ ಮುಟ್ಟುವ ಮೂಲಕ ನಡಹಳ್ಳಿ ಅವರಿಗೆ ಉನ್ನತ ಸ್ಥಾನಲಬಿಸಿ ರಾಜ್ಯದ ಜನರ ಸೇವೆ ಮಾಡುವಂತಹ ಭಾಗ್ಯ ಖಾಸ್ಗತನು ಕರುಣಿಸಲಿ ಎಂದು ಹಾರೈಸಿದರು.
ಈ ಸಮಯದಲ್ಲಿ ಸಿದ್ದಲಿಂಗ ಮಹಾಸ್ವಾಮಿಗಳು, ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೊಡೇಕಲ್ಲ ದುರದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮಿಗಳು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರನ್ನು ಸನ್ಮಾನಿಸಿ ಗೌರವಿಸಿ ಆಶಿರ್ವದಿಸಿದರು.
ಈ ಸಮಯದಲ್ಲಿ ವಾಸುದೇವ ಹೆಬಸೂರ, ಶಿವಶಂಕರ ಹಿರೇಮಠ, ಎಸ್.ಎಂ.ಸಜ್ಜನ, ರಾಜು ಹಂಚಾಟೆ, ವೇ.ಮುರುಘೇಶ ವಿರಕ್ತಮಠ, ಸಾಗರ ಗುಪ್ತಾ, ಗೌರವ ಹಜೇರಿ, ಕಾಶಿನಾಥ ಗೋಗಿ, ಪ್ರವೀಣ್ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.