ಲೋಕದರ್ಶನ ವರದಿ
ಚಡಚಣದ 03: 30 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಭಾಗಿ, ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ, ದಿನನಿತ್ಯ ವಿವಿಧ ಮನರಂಜನೆ, ಭಾರ ಎತ್ತುವ ಸ್ಪಧರ್ೆ, ಕಬ್ಬಡ್ಡಿ ಪಂದ್ಯಾವಳಿಗಳು, ಚಿತ್ರ ವಿಚಿತ್ರವಾದ ಮದ್ದು, ರಸಮಂಜರಿ ಕಾರ್ಯಕ್ರಮ, ಕೃಷಿ ಮೇಳ, ಈ ಎಲ್ಲ ಕಾರ್ಯಕ್ರಮಗಳು ನಾಗಠಾಣ ಕ್ಷೇತ್ರದ ಶಾಸಕ ಡಾ.ದೇವಾನಂದ ಚವ್ಹಾಣ ನೇತೃತ್ವದಲ್ಲಿ ಜರುಗುವವು.
ಫೆ. 4 ಸೋಮವಾರ ದಿಂದ ಫೆ.7 ರವರೆಗೆ ಸಡಗರದಿಂದ ಜರುಗುವದು. ಫೆ. 3 ರಂದು ರವಿವಾರ ಸಾಯಂಕಾಲ 05 ಗಂ ನಂದಿ ಧ್ವಜಗಳ ಮತ್ತು ದೇವಾಲಯಕ್ಕೆ ವಿದ್ಯುತ್ ಅಲಂಕಾರಕ್ಕೆ ಸಂಗಮೇಶ್ವರ ಸಂಸ್ಥೆಯ ಅಧ್ಯಕ್ಷ ಶ್ರೀ ಗಂಗಾಧರ ಪಾವಲೆ ಚಾಲನೆ ನೀಡುವರು. ಫೆ. 4 ಸೋಮವಾರ ಮುಂಜಾನೆ 07ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿ ಧ್ವಜ ವಿವಿಧ ವಾದ್ಯವೈಭವಗಳೊಂದಿಗೆ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಬಂದು ಮುಂಜಾನೆ 09 ಗಂ ರುದ್ರಕಟ್ಟೆಯ ಮೇಲೆ ದೇವರ ನುಡಿಮುತ್ತುಗಳು ಜರುಗುವವು. ಅಂದು ಮಧ್ಯಾಹ್ನ 2 ಗಂಟೆಗೆ ಕಬ್ಬಡ್ಡಿ ಪಂದ್ಯಾವಳಿಗಳು ವಿಜೇತರಿಗೆ ಪ್ರಥಮ ಬಹುಮಾನ 31 ಸಾವಿರ, ದ್ವಿತೀಯ ಬಹುಮಾನ 21 ಸಾವಿರ.
ಫೆ. 5 ಮಂಗಳವಾರ ಮುಂಜಾನೆ 11 ಗಂಟೆಗೆ ಕೃಷಿ ಮೇಳ, ಮಧ್ಯಾಹ್ನ 3 ಗಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿ ಧ್ವಜ ವಿವಿಧ ವಾದ್ಯವೈಭವಗಳೊಂದಿಗೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಕಲಾವಿದರ ಕಲೆಯೊಂದಿಗೆ ಶ್ರೀ ಸಂಗಮೇಶ್ವರ ದೇವಸ್ಥಾನಕ್ಕೆ ಬರುವುದು. ರಾತ್ರಿ 9 ಗಂಟೆಗೆ ದೇವಸ್ಥಾನದ ಹತ್ತಿರವಿರುವ ಎತ್ತರದ ಸ್ಥಳದಲ್ಲಿ ಶ್ರೀ ರಣಜೀತ ಬಬನರಾವ ಶಿಂಧೆ, ಅಧ್ಯಕ್ಷರು ಇಂಡಿಯನ್ ಶುಗರ್ ಮ್ಯಾನುಫ್ಯಾಕ್ಚರಿಂಗ್ ಕಂ. ಲಿ. ಹಾವಿನಾಳ (ಪ್ರಾಯೋಜಕರು) ಇವರ ವತಿಯಿಂದ ಚಿತ್ರ-ವಿಚಿತ್ರವಾದ ಮದ್ದು ಸುಡಲಾಗುವದು.
ಫೆ. 6 ಬುಧವಾರದಂದು ಮಧ್ಯಾಹ್ನ 2.30 ಗಂಟೆಗೆ ಚಡಚಣ ಪಟ್ಟಣ ಪಂಚಾಯತ ವತಿಯಿಂದ ಪ್ರಸಿದ್ಧ ಮಲ್ಲರ ಕುಸ್ತಿಗಳು
1) ರೂ 1 ಲಕ್ಷ ಬಹುಮಾನ ಧನ ಸಹಾಯಕರು ಶಾಸಕ ದೇವಾನಂದ ಚವ್ಹಾಣ ನಾಗಠಾಣ ಮತಕ್ಷೇತ್ರ.
2) ರೂ 75 ಸಾವಿರ ಬಹುಮಾನ. ಧನ ಸಹಾಯಕರು ಕಾಂತುಗೌಡ ಪಾಟೀಲ.
3) ರೂ 51 ಸಾವಿರ ಬಹುಮಾನ. ಧನ ಸಹಾಯಕರು ಬಾಹುಬಲಿ ಎನ್.ಮುತ್ತೀನ ಜವಳಿ ವ್ಯಾಪಾರಿಗಳು.
4) 25 ಸಾವಿರ ಬಹುಮಾನ. ಧನ ಸಹಾಯಕರು ವಿಠ್ಠಲ ಕಟಕದೊಂಡ ಮಾಜಿ ಶಾಸಕ.
5) 25 ಸಾವಿರ ಬಹುಮಾನ. ಧನ ಸಹಾಯಕರು ಸುರೇಶ ಗೊಣಸಗಿ ಕಾಂಗ್ರೆಸ್ ಮುಖಂಡರು.
ಹೀಗೆ 46 ಜೋಡಿಯ ಕುಸ್ತಿಗಳು ಜರಗುವವು. ಪೈಲವಾನರಿಗೆ ಯೋಗ್ಯತೆಗೆ ತಕ್ಕ ಬಹುಮಾನ ನೀಡಲಾಗುವದು. ಅಂದು ರಾತ್ರಿ 7 ಗಂಟೆಗೆ ಆಕರ್ೆಸ್ಟ್ರಾ ತುಮಕೂರ ಇವರಿಂದ ಸಂಗೀತ ಮ್ಯುಜಿಕಲ್ ನೈಟ್ಸ್.
ಫೆ.7 ರಂದು ಗುರುವಾರ ಎ.ಪಿ.ಎಮ್.ಸಿ ಚಡಚಣ ಇವರಿಂದ ಯೋಗ್ಯ ರಾಸುಗಳಿಗೆ ಬಹುಮಾನ ವಿತರಣೆ. ಅಂದು ಸಾಯಂಕಾಲ 6.30 ಗಂಟೆಗೆ ಸಂಗೀತ ಸುಧೆ ಹಾಗೂ ರಸಮಂಜರಿ ಶ್ರೀ ಸದ್ಗುರು ಕಲಾ ಸಂಸ್ಥೆ ಕಲಬುಗರ್ಿ. ಇವರಿಂದ ಪ್ರಾಯೋಜಕರು ಡಾ|| ರಾಜು ಹಿರೇಮಠ ಹಾಗೂ ಡಾ|| ಶ್ರೀಮತಿ ಶಾಂತಾ ರಾಜು ಹಿರೇಮಠ ಸ್ವಾಮಿ ದವಾಖಾನೆ ಚಡಚಣ.
ಫೆ.12 ರವಿವಾರದಂದು ಸಂಜೆ 07 ಗಂಟೆಗೆ ಶ್ರೀ ಸಂಗಮೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ ನಂದಿ ಧ್ವಜ ವಾದ್ಯ ವೈಭವಗಳೊಂದಿಗೆ ಶ್ರೀ ವೀರಭದ್ರೇಶ್ವರ ಗುಡಿಗೆ ತಲುಪುವದು ಜಾನುವಾರು ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಶ್ರೀ ಸಂಗಮೇಶ್ವರ ಸಂಸ್ಥೆಯ ಆವರಣ ಚಡಚಣ ಮರಡಿಯಲ್ಲಿ ಜರಗುವದು ಚಡಚಣ ಸುತ್ತಮುತ್ತಲಿನ ಗ್ರಾಮಸ್ಥರು ಜಾತ್ರೆಗೆ ಆಗಮಿಸಿ ಶ್ರೀ ಸಂಗಮೇಶ್ವರ ದರ್ಶನ ಪಡೆದು ಪುನೀತರಾಗಬೇಕೆಂದು ಜಾತ್ರಾ ಕಮೀಟಿ ತಿಳಿಸಿದೆ.