ಧಾರವಾಡ13 : ಇಲ್ಲಿಯ ಕೆಲಗೇರಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ಶ್ರೀರಾಮನವಮಿ ನಿಮಿತ್ತ ವಿಶೇಷ ಧಾಮರ್ಿಕ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿದವು.
ಬೆಳಗ್ಗೆ ಸಾಯಿ ಬಾಬಾಗೆ ಕಾಕಡಾರತಿ ನೆರವೇರಿಸಲಾಯಿತು. ಆನಂತರ ವಿಷ್ಣು ಸಹಸ್ರನಾಮ ಹೋಮ ಹಾಗೂ ಸಾಯಿ ತಾರಕ ಜಪ ನಡೆದವು.
ಬಳಿಕ ಸಾವಿರಾರು ಸಾಯಿಬಾಬಾ ಸದ್ಭಕ್ತರ ಸಮ್ಮುಖದಲ್ಲಿ ತೋಟ್ಟಿಲೋತ್ಸವ ಕಾರ್ಯಕ್ರಮವೂ ಭಕ್ತಭಾವದಿಂದ ಜರುಗಿತು.
ಆನಂತರ ಮಹಾಮಂಗಳಾರತಿ ಮಾಡಿ, ಸಾಯಿ ಬಾಬಾ ದೇವಸ್ಥಾನಕ್ಕೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನಸಂತಪಣರ್ೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ದೇವಸ್ಥಾನದ ಅಧ್ಯಕ್ಷ ಮಹೇಶ ಶೆಟ್ಟಿ, ಟ್ರಸ್ಟಿಗಳಾದ ಗುರುಪಾದಯ್ಯ ಹೋಂಗಲ್ ಮಠ, ಸುರೇಶ ಹಂಪಿಹೊಳಿ, ಉದಯ ಶೆಟ್ಟಿ, ನಾರಾಯಣ ಕದಂ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.