ಧಾರವಾಡ 24: 59ನೇ ಜಾತ್ರಾ ಮಹೋತ್ಸವ 24: ಇದೆ ಭಾನುವಾರ ಧಾರವಾಡದ ವಿದ್ಯಾಗಿರಿಯ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ 59ನೇ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವ ಜರುಗಿತು. ಶ್ರೀ ಮೈಲಾರಲಿಂಗ ದೇವಸ್ಥಾನದ ವಂಶ ಪಾರಂಪರಿಕ ಕಾರ್ಣಿಕ ಪುರುಷ ಶ್ರೀ ಸಿರಿಮಲ್ಲ ತಿಪ್ಪಣ್ಣ ಶಿರೋಳ “ಕಪ್ಪಾದ ಆಕಾಶ ಬೆಳಗಾಯಿತಲೇ ಪರಾಕ್” ಎಂದು ಕಾರ್ಣಿಕ ನುಡಿದರು.
ಕಾರ್ಣಿಕದ ಅರ್ಥ : ದೇಶದ ಪ್ರಜೆ ಸಮೃದ್ಧಿ ಹೊಡುತ್ತಾನೆ ಮತ್ತು ರಾಜಕೀಯ ಬದಲಾವಣೆಗಳನ್ನು ಕಾಣಬಹುದು. ದೇಶ ಕಷ್ಟ ಕಾರ್ಪಣಯ ಗಳಿಂದ ಮುಕ್ತಿ ಹೊಂದಲಿದೆ. ಎರಡು ದಿನ ನಡೆದ ಈ ಜಾತ್ರಾ ಮಹೋತ್ಸವದಲ್ಲಿ ಮಹಾಭಿಷೇಕ, ಬಿಲ್ಲು ಪೂಜೆ, ರಾತ್ರಿ, ಭಜನೆ, ಜಾಗರಣೆ, ಪಲ್ಲಕ್ಕಿ ಉತ್ಸವ ,ಕಾರ್ಣಿಕ ಸೇವೆ, ಸರಪಳಿ ಸೇವೆ ಅತಿ ವಿಜೃಂಭಣೆಯಿಂದ ಜರುಗಿದವು ಎಂದು ಮಾಜಿ ಕಾರ್ಣಿಕ ಪುರುಷ ಅಜ್ಜ ತಿಪ್ಪಣ್ಣ ಸಂಗಪ್ಪ ಶಿರೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.