ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ದಾಳಿ

ರಾಮೇಶ್ವರಂ, ನ 21: ಶ್ರೀಲಂಕಾ ನೌಕಾಪಡೆ ಗುರುವಾರ ವಿವಾದಾತ್ಮಕ ಕಚ್ಚತೀವು ದ್ವೀಪದ ಬಳಿ ಮೀನುಗಾರಿಕಾ ಚಟುವಟಿಕೆಗಳಲ್ಲಿ ತೊಡಗಿದ್ದ ಭಾರತೀಯ ಮೀನುಗಾರರ ಮೇಲೆ ದಾಳಿ ನಡೆಸಿದೆ 

ಸುಮಾರು 497 ಯಾಂತ್ರಿಕೃತ ದೋಣಿಗಳಲ್ಲಿ ಬುಧವಾರ 2,500 ಕ್ಕೂ ಹೆಚ್ಚು ಮೀನುಗಾರರು ಸಮುದ್ರಕ್ಕೆ ಇಳಿದಿದ್ದ ವೇಳೆ ಈ ಹಲ್ಲೆ ನಡೆಸಲಾಗಿದೆ ಎಂದು ಗುರುವಾರ ಮೀನುಗಾರಿಕಾ ಜೆಟ್ಟಿಗೆ ಮರಳಿರುವ ಮೀನುಗಾರರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ 

ಗಸ್ತಿನಲ್ಲಿದ್ದ ಲಂಕಾ ನೌಕಾಪಡೆಯ ಯೋಧರು, ಬಂದೂಕು ಹಿಡಿದು ತಮ್ಮನ್ನು ಸುತ್ತುವರಿದು, ಇಲ್ಲಿಂದ ತೆರಳುವಂತೆ ಬೆದರಿಸಿದರು.  ಮೀನು ಹಿಡಿಯುವ ಬಲೆಗಳನ್ನು ಸಮುದ್ರಕ್ಕೆಸೆದರು ಎಂದು ತಿಳಿಸಿದ್ದಾರೆ.    

ಪದೇಪದೆ ಭಾರತೀಯ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆ ಹಲ್ಲೆ ನಡೆಸುತ್ತಿದ್ದು, ಈ ವಿಷಯವನ್ನು ಶ್ರೀಲಂಕಾ ಸಕರ್ಾರದೊಂದಿಗೆ ಕೈಗೆತ್ತಿಕೊಳ್ಳಬೇಕು ಎಂದು ರಾಮೇಶ್ವರಂನ ವಿವಿಧ ಮೀನುಗಾರರ ಸಂಘಗಳ ಮುಖಂಡರು ಆಗ್ರಹಿಸಿದ್ದಾರೆ.  

ಈ ತಿಂಗಳಲ್ಲಿ ಶ್ರೀಲಂಕಾ ನೌಕಾಪಡೆಯು ಭಾರತೀಯ ಮೀನುಗಾರರ ಮೇಲೆ ನಡೆಸಿದ ಎರಡನೇ ದಾಳಿ ಇದು. ಇದಕ್ಕೂ ಮುನ್ನ ಮಂಗಳವಾರ ಮೀನುಗಾರಿಕೆಯಲ್ಲಿ ತೊಡಗಿದ್ದ ಭಾರತೀಯ ಬೆಸ್ತರ ಮೀನುಗಾರರ ಬೆನ್ನಟ್ಟಿ ಓಡಿಸಿತ್ತು.