ಶ್ರೀಲಂಕಾದಲ್ಲಿ ಮ್ಯಾಚ್ ಫಿಕ್ಸಿಂಗ್ಗೆ 10 ವರ್ಷ ಜೈಲು ಶಿಕ್ಷೆ !

ಕೊಲಂಬೊ, ನ 12 :      ಜಾಗತಿಕ ಕ್ರಿಕೆಟ್ ವಿಶೇಷವಾಗಿ ಏಷ್ಯಾ ರಾಷ್ಟ್ರಗಳಲ್ಲಿ ಅಂಟಿರುವ ಮ್ಯಾಚ್ ಫಿಕ್ಸಿಂಗ್ ನಂತಹ ಭ್ರಷ್ಟಚಾರ ಪ್ರಕರಣಗಳನ್ನು ಬುಡ ಸಮೀತ ಕಿತ್ತುಹಾಕಲು  ಶ್ರೀಲಂಕಾ ಸರ್ಕಾರ ಮುಂದಾಗಿದೆ.  ಕಳೆದ ಹಲವು ವರ್ಷಗಳಿಂದ ಶ್ರೀಲಂಕಾ ರಾಷ್ಟ್ರೀಯ ತಂಡದಲ್ಲಿ ಹಲವು ಮ್ಯಾಚ್ ಫಿಕ್ಸಿಂಗ್ ಪ್ರಕರಣಗಳು ಹೊರ ಬಂದಿವೆ. ಇತ್ತೀಚೆಗೆ ಬಾಂಗ್ಲಾದೇಶ ಸ್ಟಾರ್ ಆಲ್ರೌಡರ್ ಶಕಿಬ್ ಅಲ್ ಹಸನ್ ಕೂಡ ಇದೇ ಪ್ರಕರಣ ಸಂಬಂಧ ಎರಡು ವರ್ಷ ಕ್ರಿಕೆಟ್ನಿಂದ ನಿಷೇಧ ಶೀಕ್ಷಗೆ ಗುರಿಯಾಗಿ ಅನುಭವಿಸುತ್ತಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಶ್ರೀಲಂಕಾ, ಕ್ರೀಡೆಗಳಿಗೆ ಸಂಬಂಧಿಸಿದ ಭ್ರಷ್ಟಚಾರ ತಡೆಗಟ್ಟುವ ನಿಟ್ಟಿನಲ್ಲಿ ಅನಾಮದೇಯ ಮಸೂದೆಯ ಮೂರು ಬಿಲ್ಗಳನ್ನು ಸಂಸತ್ತಿನಲ್ಲಿ ಪಾಸ್ ಮಾಡಿದೆ. ಕ್ರೀಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಅಥವಾ ಭ್ರಷ್ಟಚಾರ ಪ್ರಕರಣಗಳಲ್ಲಿ ಭಾಗಿಯಾದರೆ ಅಂತವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ವಿವಿಧ ಬಗೆಯೆ ದಂಡ ತೆತ್ತಬೇಕಾಗುತ್ತದೆ.  ಶ್ರೀಲಂಕಾ ಕ್ರೀಡಾ ಸಚಿವ ಹ್ಯಾರಿನ್ ಫೆನರ್ಾಂಡೊ ಅವರು ಸೋಮವಾರ ಕ್ರೀಡಾ ಭ್ರಷ್ಟಚಾರ ತಡೆಗಟ್ಟುವ ಬಿಲ್ ಅನ್ನು ಸಂಸತ್ತಿನ ಮುಂದಿಟ್ಟರು. ಇದಕ್ಕೆ ಶ್ರೀಲಂಕಾ ತಂಡದ ಮಾಜಿ ಆಟಗಾರ ಅರ್ಜುನ್ ರಣತುಂಗ ಬೆಂಬಲಸಿದರು. ಅರ್ಜುನ್ ರಣತುಂಗ ಕ್ಯಾಬಿನೆಟ್  ಸಚಿವರಾಗಿದ್ದಾರೆ. ಶ್ರೀಲಂಕಾ ತಂಡದ ಮಾಜಿ ಆಲ್ರೌಂಡರ್ ದಿಲ್ಹಾರ ಲೊಕುಹೆಟ್ಟಿಗೆ ಅವರು 2017ರ ಸೀಮಿತ ಓವರ್ ಗಳ ಲೀಗ್ ಪಂದ್ಯವೊಂದರಲ್ಲಿ ಭ್ರಷ್ಟಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇದರಿಂದಾಗಿ ಅವರು ಕಳೆದ ವರ್ಷ ಕ್ರಿಕೆಟ್ ನಿಂದ ಅಮಾನತುಗೊಂಡಿದ್ದರು.