ಕರಾಚಿ, ಅ 3 : ಅನುಭವಿ ಆಟಗಾರರಾದ ಫಖಾರ್ ಜಮಾನ್ ಹಾಗೂ ಆಬಿದ್ ಅಲಿ ಅವರ ಅರ್ಧಶತಕದ ಬಲದಿಂದ ಪಾಕಿಸ್ತಾನ, ಶ್ರೀಲಂಕಾ ತಂಡವನ್ನು 5 ವಿಕೆಟ್ ಗಳಿಂದ ಮಣಿಸಿ ಮೂರನೇ ಏಕದಿನ ಕ್ರಿಕೆಟ್ ಪಂದ್ಯವನ್ನು ಗೆದ್ದು, ಮೂರು ಪಂದ್ಯಗಳ ಸರಣಿಯನ್ನು 2-0 ವಶಕ್ಕೆ ಪಡೆದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 297 ರನ್ನುಗಳನ್ನು ಕಲೆ ಹಾಕಿತು. ಪಾಕಿಸ್ತಾನ 48.2 ಗಳಲ್ಲಿ 5 ಕಷ್ಟಕ್ಕೆ 299 ರನ್ ಕಲೆಹಾಕಿ ಗೆಲುವು ಸಾಧಿಸಿತು. ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಆರಂಭ ಆರಂಭ ಪಾಕಿಸ್ತಾನ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರು 19.3 ಓವರ್ ಗಳಲ್ಲಿ 123 ರನ್ ಗಳ ಜೊತೆಯಾಟ ಕಾಣಿಕೆಯನ್ನು ನೀಡಿ ತಂಡಕ್ಕೆ ಆಧಾರವಾದರು. ಅಬಿದ್ ಅಲಿ 10 ಬೌಂಡರಿ ಸೇರಿದಂತೆ 74 ರನ್ ಬಾರಿಸಿ ಔಟಾದರು. ಸ್ಟಾರ್ ಆಟಗಾರ ಬಾಬರ್ ಅಜಮ್ ಸಮಯೋಚಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಆರಂಭಿಕ ಫಖಾರ್ ಜಮನ್ 91 ಎಸೆತಗಳಲ್ಲಿ 76 ರನ್ ಗಳಿಸಿ ಔಟಾದರು. ಹಾರಿಸ್ ಸೋಹೆಲ್ 56 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್ ಗೆ ಗುಣತಿಲಕ ಹಾಗೂ ಲಹೀರು ತಿರಿಮನ್ನೆ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬೇರ್ಪಡಿಸಲು ಮೊಹಮ್ಮದ್ ಅಮಿರ್ ಯಶಸ್ವಿಯಾದರು. ತಿರಿಮನ್ನೆ 36 ರನ್ ಗಳಿಗೆ ಔಟ್ ಆದರು. ಉಳಿದಂತೆ ಮಿಲಿಂದ್ ಭನುಕ 2 ಸಿಕ್ಸರ್ ನೆರವಿನಿಂದ 36, ದಸುನ್ ಶನಕ 24 ಎಸೆತಗಳಲ್ಲಿ 43 ರನ್ ಬಾರಿಸಿದರು. ಶ್ರೀಲಂಕಾ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಗುಣತಿಲಕ್ ಸಫಲರಾದರು. ಇವರು 134 ಎಸೆತಗಳಲ್ಲಿ 16 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 133 ರನ್ ಬಾರಿಸಿ, ಶತಕ ಬಾರಿಸಿ ಅಬ್ಬರಿಸಿದರು. ಪಾಕ್ ಪರ ಮೊಹಮ್ಮದ್ ಅಮಿರ್ 10 ಓವರ್ ಗಳಲ್ಲಿ 50 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ವಹಾಬ್ ರಿಯಾಜ್, ಶಹಬಾಜ್ ಖಾನ್, ಮೊಹಮ್ಮದ್ ನವಾಜ್ ತಲಾ ಒಂದು ವಿಕೆಟ್ ಪಡೆದರು.