ಬೆಂಗಳೂರು, ಜ 13: ಐಶ್ವರ್ಯ ಫಿಲಂ ಪ್ರೊಡಕ್ಷನ್ಸ್ ಲಂಛನದಲ್ಲಿ ಶಿವಪ್ರಕಾಶ್.ಟಿ ನಿರ್ಮಿಸಿರುವ ‘ಶ್ರೀಭರತ ಬಾಹುಬಲಿ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಮಾಸ್ಟರ್ ಪೀಸ್ ‘ಖ್ಯಾತಿಯ ಮಂಜು ಮಾಂಡವ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆಯ ಜವಾಬ್ದಾರಿಯನ್ನು ಮಂಜು ಮಾಂಡವ್ಯ ಅವರೇ ನಿಭಾಯಿಸಿದ್ದಾರೆ.
ವಿಶೇಷ ಪಾತ್ರದಲ್ಲಿ ನಟ ರಿಶಿ ಹಾಗೂ ಖ್ಯಾತ ಬಹುಭಾಷಾ ನಟ ಚರಣ್ರಾಜ್ ಅವರ ಪುತ್ರ ತೇಜ್ರಾಜ್ ಅಭಿನಯಿಸಿದ್ದಾರೆ ತಮಿಳಿನ ’90 ಎಂ ಎಲ್’ ಮೂಲಕ ಚಿತ್ರರಂಗ ಪ್ರವೇಶಿಸಿರುವ ತೇಜ್ ರಾಜ್ ‘ಹೀರೋ’ಗಿಂತ ಹೆಚ್ಚಾಗಿ ಉತ್ತಮ ಕಲಾವಿದ ಎನಿಸಿಕೊಳ್ಳಬೇಕು ಎಂಬ ಆಸೆಯನ್ನು ಚರಣ್ ರಾಜ್ ಈಗಾಗಲೇ ವ್ಯಕ್ತಪಡಿಸಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಪರ್ವೆಜ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಕಲೈ, ಮುರಳಿ ನೃತ್ಯ ನಿರ್ದೇಶನ, ಮಲ್ಲ, ಶಿವಕುಮಾರ್, ಅರುಣ್ ಸಾಗರ್ ಕಲಾ ನಿರ್ದೇಶನ ಹಾಗೂ ಮಾಸ್ ಮಾದ, ಎ.ವಿಜಯ್, ವಿನೋದ್ ಅವರ ಸಾಹಸ ನಿರ್ದೇಶನವಿದೆ.
ಚಿತ್ರದ ನಿರ್ದೇಶಕ ಮಂಜು ಮಾಂಡವ್ಯ, ಚಿಕ್ಕಣ್ಣ, ಶ್ರೇಯಾ ಶೆಟ್ಟಿ, ಸಾರಾ ಹರೀಶ್, ಶೃತಿಪ್ರಕಾಶ್, ಶ್ರೀನಿವಾಸಮೂರ್ತಿ, ಭವ್ಯ, ಅಚ್ಯುತರಾವ್, ಹರೀಶ್ ರಾಯ್, ಜಾನ್ ಕೊಕೇನ್, ಅಯ್ಯಪ್ಪ ಪಿ.ಶರ್ಮ ಕರಿಸುಬ್ಬು, ಪುಷ್ಪಸ್ವಾಮಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.