ವಿದ್ಯಾರ್ಥಿಗಳು ಪಾಠ ಪ್ರವಚನದ ಜತೆಗೆ ಕ್ರೀಡೆ ಹೆಚ್ಚು ಒತ್ತು ನೀಡಬೇಕು: ಆನಂದ

ಲೋಕದರ್ಶನ ವರದಿ 

ಗಜೇಂದ್ರಗಡ 29: ದೇಶದ ಮಹಾನ್ ನಾಯಕರ ಮಾರ್ಗ ದರ್ಶನವನ್ನು ಪಾಲಿಸುವ ಮೂಲಕ ವಿದ್ಯಾಥರ್ಿಗಳು ಪಾಠ ಪ್ರವಚನದ ಜತೆಗೆ ಕ್ರೀಡೆ ಹೆಚ್ಚು ಒತ್ತು ನೀಡಬೇಕು ಎಂದು ಓಂಶ್ರೀ ಸಾಯಿ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ಅಧ್ಯಕ್ಷ ಆನಂದ ಮಂತ್ರಿ ಹೇಳಿದರು.

ಪಟ್ಟಣದ ಓಂಶ್ರೀ ಸಾಯಿ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಗುರುವಾರ ಜರುಗಿದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದಕಗಳನ್ನು ತಂದು ಕೊಟ್ಟಾಗಲಷ್ಟೇ ಗೆದ್ದು ಸಂಭ್ರಮಿಸುವ ಬದಲು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮಾದರಿಯಲ್ಲಿ ಜಯಂತಿ ಆಚರಣೆ ಸೇರಿದಂತೆ ಜೀವನ ಚರಿತ್ರೆಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರಕಟಿಸುವ ಕೆಲಸ ಸಕರ್ಾರಗಳಿಂದಾಗಬೇಕು ಎಂದರು.

ಖ್ಯಾತ ಹಾಕಿ ಕ್ರೀಡಾಪಟು ಧ್ಯಾನಚಂದ್ ಸೇರಿದಂತೆ ಹಾರುವ ಕುದುರೆ ಎಂದೇ ಖ್ಯಾತರಾಗಿದ್ದ ಮಿಲ್ಕಾಸಿಂಗ್, ಸ್ಟ್ರೀಂಟ್ರ ಪಿ.ಟಿ.ಉಷಾ, ಅಶ್ವಿನಿ ನಾಚಪ್ಪ ಇನ್ನಿತರ ದೇಶದ ಬಹಳಷ್ಟು ಕ್ರೀಡಾ ತಾರೆಯರು ತಮ್ಮ ಜೀವವನ್ನೇ ಮುಡುಪಾಗಿಟ್ಟು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆಯನ್ನು ತೋರಿದ್ದಾರೆ, ಆದರೆ, ಕೆಲವೇ ವರ್ಷಗಳಲ್ಲಿ ಅವರ ಹೆಸರು ಸಾಧನೆ, ನೆನಪುಗಳು ಕೆಲ ದಿನಗಳಷ್ಟೇ ಉಳಿದಿವೆ. ನಂತರದ ಪೀಳಿಗೆ ಈ ಹೆಸರುಗಳು ಯಾರದ್ದು ಎಂದು ಕೇಳುವಂತಹ ಸ್ಥಿತಿ ಎದುರಾಗಿದೆ ಎಂದರು.

ಸಂಸ್ಥೆಯ ಉಪಾಧ್ಯಕ್ಷ ಮೋಹನ ಕನಕೇರಿ ಮಾತನಾಡಿ, ಹಾಕಿ ಆಟಗಾರ ಧ್ಯಾನ್ ಚಂದ್ ಅವರ ಹುಟ್ಟುಹಬ್ಬದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಿಸಲಾಗುತ್ತಿದೆ. ಈಚಿನ ದಿನಗಳಲ್ಲಿ ಕ್ರಿಕೆಟ್, ಕಬ್ಬಡಿ ಸೇರಿದಂತೆ ನಾನಾ ಕ್ರೀಡೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಹಾಕಿಗೆ ಮಾನ್ಯತೆ ಇಲ್ಲದಂತಾಗಿದೆ. ವಿದ್ಯಾಥರ್ಿಗಳು ಹಾಕಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಶಿಕ್ಷಕಿ ಡಾ.ಮಂಜುಳ ಹಳಕಟ್ಟಿ, ಕಳಕವ್ವ ಹಾದಿಮನಿ, ಸುನಂದಾ ದಿವಟೆ, ಫಜರ್ಾನಾ ಮುಧೋಳ, ಮಂಜುಳ ದವೆ, ಮಲ್ಲಪ್ಪ ಮಾಟರಂಗಿ, ಸಿದ್ದು.ವಿ.ಜಿ., ಈರಪ್ಪ ಬಾರಕೇರ, ನಂದಾಬಾಯಿ ರಂಗ್ರೇಜ್, ಕವಿತಾ ಸಂಚಾಲಿ, ವಿಜಯಲಕ್ಷ್ಮಿ ಮಲ್ಕಿ ಪಾಟೀಲ ಇದ್ದರು.