ಲೋಕದರ್ಶನ ವರದಿ
ಇಂಡಿ 02:ಕ್ರೀಡೆಯು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಜೀವನದಲ್ಲಿ ಆರೋಗ್ಯವಂತ ದೆಹ ಮತ್ತು ಮನಸ್ಸು ಇದ್ದಾಗ ಮಾತ್ರ ಮನುಷ್ಯ ಕಷ್ಟ, ಒತ್ತಡಗಳನ್ನು ಎದುರಿಸಲು ಸಾಧ್ಯ ಎಂದು ಮೌಲಾನಾ ಉಮರ್ ಗೌರ ಹೇಳಿದರು.
ಪಟ್ಟಣದ ಉಮರ್ ಇಸ್ಲಾಮಿಕ ಶಾಲೆಯ ವಾಷರ್ಿಕ ಕ್ರೀಡಾಕೂಟದಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ವಿದ್ಯಾಥರ್ಿಗಳು ಕಲಿಕೆ ಯೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ವಿದ್ಯಾಥರ್ಿಗಳ ಸರ್ವತೋಮುಖ ಅಭಿವದ್ಧಿ ಸಾಧ್ಯವಾಗುತ್ತದೆ. ವಿದ್ಯಾಥರ್ಿ ಜೀವನದಲ್ಲಿ ಕ್ರೀಡೆಗೆ ಕೊಡುವ ಪ್ರಾಮುಖ್ಯತೆ ನಂತರದ ದಿನಗಳಲ್ಲಿ ಕಡಿಮೆಯಾಗುತ್ತದೆ. ಕ್ರೀಡೆ ಮನುಷ್ಯನ ಆರೋಗ್ಯ ವೃದ್ಧಿಗೆ ಸಹಕಾರಿ. ಕ್ರೀಡೆಗಳಲ್ಲಿ ಸೋಲು ಗೆಲವನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಸ್ಪಧರ್ೆಗೆ ಮಹತ್ವ ಬರುತ್ತದೆ. ಕ್ರೀಡಾಳು ಛಲದಿಂದ ಮುನ್ನುಗ್ಗಿದಾಗ ಮಾತ್ರ ಗುರಿಯ ಯಶಸ್ಸು ಮುಟ್ಟಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಕ್ತಾರ ಅರಬ ಅಧ್ಯಕ್ಷತೆ ವಹಿಸಿ ಮಾತನಾಡಿ ಜ್ಞಾನ ಸಂಪಾದನೆಯ ಜೋತೆಗೆ ಕ್ರೀಡೆ ಸಾಂಸ್ಕೃತಿಕ ಬೆಳವಣೆಗೆಯೂ ಬೇಕು. ನಾವು ಕೇವಲ ಅಂಕಪಟ್ಟಿಯ ಶಿಕ್ಷಣಕ್ಕೆ ಮುಂದಾಗದೇ ಅದರೊಂದಿಗೆ ದೇಶ ಪ್ರೇಮ, ದುರ್ಬಲರಿಗೆ ಸಹಾಯ ಸಹಕಾರವನ್ನು ನೀಡುವುದನ್ನೂ ಕಲಿಯಬೇಕು ಎಂದರು. ಮುಖ್ಯ ಅತಿಥಿಗಳಾಗಿ ಸದ್ದಾಂಹುಸೇನ ಜಮಾದಾರ, ಮುಖ್ಯಗುರುಗಳು ಬಶೀರ ಸೌದಾಗರ, ಅರಶದ ಕನ್ನೂಳಿ, ಸೇರಿದಂತೆ ಇತರರು ಇದ್ದರು. ಶಿಕ್ಷಕ ಇಬ್ರಾಹಿಂ ಮಕಾಂದಾರ ನಿರೂಪಿಸಿದರು. ಶಿಕ್ಷಕಿ ಝಡ್. ಎಸ್.ಬಾಗಬಾನ ಸ್ವಾಗತಿಸಿದರು, ಶಿಕ್ಷಕಿ ಮಕಾಂದಾರ ವಂದಿಸಿದರು.