ಲೋಕದರ್ಶನವರದಿ
ರಾಣೇಬೆನ್ನೂರು-ಜು.29: ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆ ಗುರುತಿಸಲು ಕ್ರೀಡಾಕೂಟ ಏರ್ಪಡಿಸಿ ದೇಶದ ಉತ್ತಮ ಕ್ರೀಡಾ ಪಟುಗಳನ್ನು ಗುರುತಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಸ್ಥಳೀಯ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀಗಳು ಹೇಳಿದರು.
ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ ನಡೆದ ಮಾಕನೂರು ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ನಿಣರ್ಾಯಕರು ಪ್ರಾಮಾಣಿಕ ನಿರ್ಣಯ ನೀಡಬೇಕು. ಗ್ರಾಮದ ಪ್ರತಿಷ್ಠೆಗೆ ದಾಖಲಿಸಿದ ಮಗುವನ್ನು ಕ್ರೀಡೆಯಲ್ಲಿ ಸೇರ್ಪಡಿಸಿ ವಿನಾಕಾರಣ ಗೊಂದಲಕ್ಕೆ ಆಹ್ವಾನಿಸದೇ ವಾಸ್ತವ ಸ್ಥಿತಿಗೆ ಅವಕಾಶ ಕಲ್ಪಿಸಿ ಎಂದರು.
ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಸಿ.ಕೆ.ಅಕ್ಕಿ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸಿವುದು ಮುಖ್ಯ, ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಮತ್ತು ಕ್ರೀಡಾ ಮನೋಭಾವನೆಯಿಂದ ಆಟ ಆಡಬೇಕು ಎಂದರು.
ತಾಪಂ ಸದಸ್ಯ ಭೀಮಣ್ಣ ಗೋಣೆಪ್ಪನವರ ಕಾರ್ಯಕ್ರಮ ಉದ್ಘಾಟಿಸಿ ದೈಹಿಕ ಶಿಕ್ಷಕರಿಗೆ ನಿಣರ್ಾಯಕ ಕಿಟ್ ವಿತರಿಸಿದರು. ಗ್ರಾಪಂ ಉಪಾಧ್ಯಕ್ಷ ದಿನೇಶ ಹಳ್ಳಳ್ಳೆಪ್ಪನವರ, ಬಿ.ವಿ.ಶ್ಯಾಮನೂರು, ಮಂಜುಳಾ, ರಾಜು ಹೆಗ್ಗೆಪ್ಪನವರ, ಬಸವಣ್ಣೇಪ್ಪ, ಪುಟ್ಟಪ್ಪ ಹಿರೇಮಠ, ರಾಮಣ್ಣ ಗೋಣೆಪ್ಪನವರ, ಎನ್.ಎನ್.ಅಣ್ಣೇರ, ಶಿವಯ್ಯ ಹಿರೇಮಠ, ನಾಗರಾಜ್ ಹಳ್ಳೆಳ್ಳೆಪ್ಪನವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.