ಪ್ರತಿಭೆ ಅನಾವರಣಕ್ಕೆ ಕ್ರೀಡಾಕೂಟಗಳು ಸಹಕಾರಿ : ಹೊಸಕೋಟೆ ಜಗದೀಶ
Sports events are helpful in unveiling talent: Hosakote Jagadeesh
ಕಂಪ್ಲಿ 28: ಆಟಗಾರರು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಕ್ರೀಡಾ ಮನೋಭಾವ ಮೆರೆಯಿರಿ’ ಎಂದು ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಸಲಹೆ ನೀಡಿದರು.
ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ದಸರಾ ಪ್ರಯುಕ್ತ ಹೈಸ್ಕೂಲ್ ಬಾಯ್ಸ್‌ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗಂಡುಗಲಿ ಕುಮಾರರಾಮ ಪ್ರೀಮಿಯರ್ ಲೀಗ್ ಸೀಸನ್-1ರ ಕ್ರಿಕೆಟ್ ಪಂದ್ಯಾವಳಿಯ ಐದು ದಿನಗಳ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ಕ್ರೀಡಾಪಟುಗಳು ತಮ್ಮಲ್ಲಿರುವ ಪ್ರತಿಭೆ ಅನಾವರಣ ಮಾಡಲು ಸ್ಥಳೀಯ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿಯಾಗಲಿವೆ. ಕ್ರೀಡಾಪಟುಗಳು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ. ಕ್ರೀಡೆಗಳು ಸಮಾನಭಾವವನ್ನು ಬೆಳೆಸಿ ದೇಶದ ಐಕ್ಯತೆಗೆ ಸಹಕರಿಸುತ್ತದೆ ತಿಳಿಸಿದರು. ಹೈಸ್ಕೂಲ್ ಬಾಯ್ಸ್ ಪ್ರಧಾನ ಕಾರ್ಯದರ್ಶಿ ಬಿ.ನೂರ್ ಮುಕ್ತಾರ್ ಮಾತನಾಡಿ, ದಸರಾ ಹಬ್ಬದ ಪ್ರಯಕ್ತ ಇದೇ ಮೊದಲ ಬಾರಿಗೆ ಗಂಡುಗಲಿ ಕುಮಾರರಾಮ ಪ್ರೀಮಿಯರ್ ಲೀಗ್ ಸೀಸನ್-1ರ ಕ್ರಿಕೇಟ್ ಟೂರ್ನಿಮೆಂಟ್ ಆಡಿಸಲಾಗುತ್ತಿದೆ. ಈ ಸೀಸನ್‌ನಲ್ಲಿ 10 ತಂಡಗಳು ಭಾಗವಹಿಸಿವೆ. ಪ್ರಥಮ ಬಹುಮಾನ 30 ಸಾವಿರ, ದ್ವಿತೀಯ ಬಹುಮಾನ 15 ಸಾವಿರ ಜೊತೆಗೆ ಟ್ರೋಫಿ ವಿತರಿಸಲಾಗುವುದು. ಒಟ್ಟು 10 ತಂಡಗಳ ನಡುವೆ ಸೆಣಸಾಟ ನಡೆಯಲಿದೆ ಎಂದರು. ನಂತರ ಹೊಸಕೋಟೆ ಜಗದೀಶಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೈಸ್ಕೂಲ್ ಬಾಯ್ಸ್ ಸಹ ಕಾರ್ಯದರ್ಶಿ ಉಮೇಶ, ಸಲಹೆಗಾರ ಎಸ್.ರಮೇಶ, ಮುಖಂಡರಾದ ಮೌಲಾ ಹುಸೇನ್, ಬಸವಣ್ಣ, ಮೂಕಿ(ತಿಪ್ಪೇಸ್ವಾಮಿ), ರಾಜ(ಎದುರು) ಸೇರಿದಂತೆ ಕ್ರೀಡಾಪಟುಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 