‘ಅಣಬೆ ಕೃಷಿ’ ಹಿ ಜೆ.ಎಸ್‌.ಎಸ್‌. ನಲ್ಲಿ ಒಂದು ದಿನದ ಕಾರ್ಯಾಗಾರ

‘ಅಣಬೆ ಕೃಷಿ’ ಹಿ ಜೆ.ಎಸ್‌.ಎಸ್‌. ನಲ್ಲಿ ಒಂದು ದಿನದ ಕಾರ್ಯಾಗಾರ ‘Mushroom Farming’ One-day workshop at JSS

ಲೋಕದರ್ಶನ ವರದಿ 

ಧಾರವಾಡ 25: ಜೆ.ಎಸ್‌.ಎಸ್‌. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜ್ಞಾನ ಸಂಘದ ಅಡಿ “ಓಯ್ಸ-್ಟರ್ ಅಣಬೆ ಕೃಷಿ” ಒಂದು ದಿನದ ಕಾರ್ಯಾಗಾರವನ್ನು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. 

ಜನತಾ ಶಿಕ್ಷಣ ಸಮಿತಿಯ ಕಾರ‌್ಯದರ್ಶಿಗಳಾದ ಡಾ. ಅಜಿತಪ್ರಸಾದ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ, ಅಣಬೆಗಳ ಪ್ರಾಮುಖ್ಯತೆ ತಿಳಿಸಿದರು. ಪ್ರೋಟಿನ್, ವಿಟ್ಯಾಮಿನ್, ಪೋಷಕಾಂಶಗಳಿಂದ ಭರಿತವಾದ ಅಣಬೆಗಳು ಆರೋಗ್ಯ ವೃದ್ಧಿಸುವಲ್ಲಿ ಬಹು ಉಪಕಾರಿ. ವಿಶೇಷವಾಗಿ ವಿಟಾಮಿನ್ ಬಿ-12 ಹಾಗೂ ವಿಟಾಮಿನ್‌-ಡಿ ಕೊರತೆಯನ್ನು ನೀಗಿಸುವಂಥ ಶಕ್ತಿಯುಳ್ಳದ್ದು. ವಿದ್ಯಾರ್ಥಿಗಳು ‘ಅಣಬೆ ಕೃಷಿ’ ಕಾರ್ಯಾಗಾರದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ತಿಳಿಸಿದರು. 

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಧಾರವಾಡದ ಸಿಲ್ವರ್ ಪೆಟಲ್ಸ್‌ನ ಪ್ರಾಪ್ರೀಯೇಟರ್ ಹಾಗೂ ಸೂಕ್ಷ್ಮಜೀವಿ ತಜ್ಞರಾದ ವರುಣ ವಿಶ್ವನಾಥ ಅವರು ಕಾರ್ಯಾಗಾರದ ಪ್ರಾಮುಖ್ಯತೆ, ಅಣಬೆ ಬೆಳೆಸುವ ವಿಧಾನ, ಸಸ್ಯಾಹಾರಿಗಳಿಗೆ ವಿಶೇಷ ಪರ್ಯಾಯ ಆಹಾರವಾಗಿ ಹೇಗೆ ಕಾರ‌್ಯ ಮಾಡುತ್ತದೆ ಎಂಬುದನ್ನು ವಿಸ್ತಾರವಾಗಿ ತಿಳಿಸಿದರು ಹಾಗೂ ತಮ್ಮ ಅಣಬೆ ಕೃಷಿ ಕೇಂದ್ರಕ್ಕೆ  ವಿದ್ಯಾರ್ಥಿಗಳನ್ನು ಕರೆದೊಯ್ದು ಪ್ರಾಯೋಗಿಕ ತರಬೇತಿಯನ್ನು ನೀಡಿದರು. 

ಕಾರ‌್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೆಂಕಟೇಶ ಮುತಾಲಿಕ ಅವರು ಮಾತನಾಡುತ್ತ, ಅಣಬೆಗಳನ್ನು ಸೇವಿಸುವಾಗ ಜಾಗೃತಿ ವಹಿಸಬೇಕು, ವಿಷಕಾರಿ ಅಣಬೆಗಳು ಆರೋಗ್ಯಕ್ಕೆ ಮಾರಕವಾಗಿರುವುದರಿಂದ ತಿನ್ನಬಹುದಾದ ಅಣಬೆಗಳನ್ನು ಕುಲಂಕೂಷವಾಗಿ ಪರೀಕ್ಷಿಸಿ ಸೇವಿಸುವುದು ಉತ್ತಮ ಎಂದರು. 

ವೇದಿಕೆಯ ಮೇಲೆ ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಎಂ.ಸಿ.ಎ. ಕಾಲೇಜಿನ ನಿರ್ದೇಶಕರಾದ ಡಾ. ಸೂರಜ ಜೈನ್, ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಶ್ರೀಮತಿ ಅವಂತಿಕಾ ರೊಟ್ಟಿ ಉಪಸ್ಥಿತರಿದ್ದರು.  

ಸಮಾರೋಪ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಜನತಾ ಶಿಕ್ಷಣ ಸಮಿತಿಯ ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದ ಅವರು ಆಗಮಿಸಿ, ಅಣಬೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ, ಜನ ಸಾಮಾನ್ಯರಿಗೆ ಕನಿಷ್ಠ ಬೆಲೆಗೆ ದೊರೆಯುವಂತೆ ಪ್ರಯತ್ನ ಮಾಡಬೇಕು. ಮುಂಬರುವ ಜನಾಂಗ ಈ ಕೃಷಿಯಲ್ಲಿ ನೈಪುಣ್ಯತೆ ಹೊಂದಿ, ಪ್ರಗತಿಯತ್ತ ಸಾಗಬೇಕು ಎಂದು ಹೇಳಿ, ಕಾರ್ಯಾಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. 

ಲಲಿತ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿಜ್ಞಾನ ಸಂಘದ ಅಧ್ಯಕ್ಷರಾದ ಡಾ. ರತ್ನಾ ಐರಸಂಗ ಸ್ವಾಗತಿಸಿದರು. ವಿಜ್ಞಾನ ಸಂಘದ ಸಂಯೋಜಕರಾದ ಡಾ. ಬಿ.ಎಂ. ಬಿಂದುಶ್ರೀ ಪರಿಚಯಿಸಿದರು. ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಶೌಕತಅಲಿ ಎಂ ವಂದಿಸಿದರು. ವಂದನಾ ಮತ್ತು ಕು. ನಿಶಾ ನಿರೂಪಿಸಿದರು. ಡಾ. ಕವಿತಾ ಭಜಂತ್ರಿ,     ಡಾ. ಶ್ರೇಯಸ ಬೇಟಗೇರಿ, ಪ್ರಜ್ಞಾ ಸಬಾನೆ, ಮಾರ್ಗರೇಟ್ ಕೆ. ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.